ಸಚ್ಚಿದಾನಂದ ಆಶ್ರಮಕ್ಕೆ ನಟ ದರ್ಶನ್ ಭೇಟಿ; ಸಂಕಷ್ಟದಲ್ಲಿರೋ ಜನರಿಗೆ ನೆರವು ಬಗ್ಗೆ ಚರ್ಚೆ

ನಟ ದರ್ಶನ್‌ ತಮ್ಮ ತವರೂರು ಮೈಸೂರಿನಲ್ಲಿದ್ದಾರೆ. ಸದ್ಯಕ್ಕೆ ಲಾಕ್‌ ಡೌನ್‌ ದಿನಗಳನ್ನು ಅಲ್ಲಿನ ತಮ್ಮ ಫಾರ್ಮ್‌ ಹೌಸ್‌ ನಲ್ಲಿ ಕಳೆಯುತ್ತಿರುವ ಅವರು, ಮಂಗಳವಾರ ಅಲ್ಲಿನ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಿ ಅಲ್ಲಿ ಶ್ರೀಗಳ ಜತೆಗೆ ಮಾತುಕತೆ ನಡೆಸಿದ್ದಾರೆ.

ಸದ್ಯಕ್ಕೆ ಈ ಭೇಟಿಯ ಉದ್ದೇಶ ಗೊತ್ತಾಗಿಲ್ಲ. ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ವಾಸ್ತವ್ಯ ಹೂಡಿರುವ ದರ್ಶನ್‌, ಸಂಕಷ್ಟದಲ್ಲಿರುವ ಜನರಿಗೆ ನೆರವು ನೀಡುವುದರ ಕುರಿತೇ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಿರುವ ಸಾಧ್ಯತೆಗಳಿವೆ ಎನ್ನುತ್ತಿವೆ ಮೂಲಗಳು.

ಈ ಸಂದರ್ಭದಲ್ಲಿ ಶ್ರೀ ಗಳಿಂದ ದರ್ಶನ್‌ ಮುದ್ದಿನ ಹಸಿರು ಗಿಳಿಯನ್ನು ಪಡೆದು, ತಮ್ಮ ಫಾರ್ಮ್‌ ಹೌಸ್‌ ಗೆ ತಂದಿದ್ದಾರೆ.

Related Posts

error: Content is protected !!