ಕೊರೋನಾ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿರುವಾಗ ಕೆಲವರು ಬಿಗ್ ಬಾಸ್ ಮನೆಯೇ ಸುರಕ್ಷಿತ ತಾಣ ಅಂದುಕೊಂಡಿದ್ದು ಹೌದು. ಆದರೆ ಆ ಮನೆಯ ಬಗ್ಗೆಯೂ ಈಗ ಅನುಮಾನ ಶುರುವಾಗಿದೆ. ಯಾಕಂದ್ರೆ, ಕಲರ್ಸ್ ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ಗೂ ಅನಾರೋಗ್ಯದ ಕಂಟಕ ಎದುರಾಗಿದೆ. ಇದರ ಸ್ಟಾರ್ ನಿರೂಪಕರಾದ ನಟ ಸುದೀಪ್ ಅನಾರೋಗ್ಯದ ಕಾರಣ ಶೋ ನಿರೂಪಣೆಗೆ ಗೈರಾದ ಬೆನ್ನಲೇ, ಶೋ ನ ಕಂಟೆಂಸ್ಟ್ನಲ್ಲಿ ಒಬ್ಬರಾಗಿದ್ದ ಮಲೆನಾಡ ಚೆಲುವೆ ದಿವ್ಯಾ ಉರುಡುಗ ಅನಾರೋಗ್ಯಕ್ಕೆ ಒಳಗಾಗಿದ್ದು, ಅವರಿಗೆ ಚಿಕಿತ್ಸೆ ಕೊಡಿಸುವ ಸಲುವಾಗಿ ಬಿಗ್ ಬಾಸ್ ಮನೆಯಿಂದ ಹೊರ ಕರೆದುಕೊಂಡು ಬರಲಾಗಿದೆ ಎನ್ನುವ ಸುದ್ದಿ ಇದೆ.
ನಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ದಿವ್ಯಾ ಉರುಡುಗ ಅವರ ಅನಾರೋಗ್ಯಕ್ಕೆ ನಿಖರವಾದ ಕಾರಣ ಏನೆಂಬುದು ಇನ್ನು ಗೊತ್ತಾಗಿಲ್ಲ. ಆದರೆ ಕೊರೋನಾ ಕಂಟಕ ಮನೆ ಹೊರಗಡೆ ತಿರುಗಾಡಿದವರನ್ನು ಕಾಡುವ ಹಾಗೆ ಮನೆಯೊಳಗಡೆ ಅಡಗಿ ಕುಳಿತವರನ್ನೂ ಬಿಟ್ಟಿಲ್ಲ ಎನ್ನುವುದು ನಿಮಗೂ ಗೊತ್ತು. ಹಾಗಾಗಿಯೇ ಕೊರೋನಾ ಕಂಟಕ ಬಿಗ್ ಬಾಸ್ ಮನೆಗೂ ಎದುರಾಯಿತಾ ಎನ್ನುವ ಆತಂಕ ಶುರುವಾಗಿದೆ. ಹೌದು. ಹಾಗಂತ ನಟಿ ದಿವ್ಯಾ ಅವರಿಗೆ ಕೊರೋನಾವೇ ಅಂತ ಭಾವಿಸಬೇಕಿಲ್ಲ. ಅವರಿಗೆ ಸಹಜವಾದ ಅನಾರೋಗ್ಯದ ಸಮಸ್ಯೆಯಂತೆ. ಹಾಗಾಗಿಯೇ ಅವರನ್ನು ಆಸ್ಪತ್ರೆಗೆ ಸೇರಿಸಲು ಬಿಗ್ ಬಾಸ್ ಮನೆಯಿಂದ ಹೊರಗೆ ಕರೆತರಲಾಗಿದೆ ಎನ್ನುವ ಮಾತುಗಳಿವೆ.
ಬಿಗ್ ಬಾಸ್ ಮನೆಯೊಳಗಿರುವ ಕಂಟೆಂಸ್ಟ್ ಗಳ ಪೈಕಿ ಸದಾ ಲವಲವಿಕೆಯಿಂದ ಇರುವ ಕಂಟೆಂಸ್ಟ್ ಅಂದ್ರೆ ದಿವ್ಯಾ ಉರುಡುಗ. ಆದರೆ ಕೆಲವು ದಿನಗಳಿಂದ ಅವರು ಇದಕ್ಕಿದ್ದಂತೆ ಮಂಕಾಗಿ ಬಿಟ್ಟಿದ್ದರು. ಇದು ವೀಕ್ಷಕರಿಗೆ ಮಾತ್ರವಲ್ಲ, ಅಲ್ಲಿದ್ದವರಿಗೂ ಅನುಮಾನ ತರಿಸಿತ್ತು. ಹೀಗೆಯೇ ಮೊನ್ನೆ ಬಿಗ್ ಬಾಸ್ ಮನೆಯೊಳಗಿನ ಅವರ ಸಹ ಸ್ಪರ್ಧಿಗಳು ವಿಚಾರಿಸಿದಾಗ ದಿವ್ಯಾ ಒಂದು ವಿಚಾರ ಹೇಳಿಕೊಂಡಿದ್ದರು. ಇದಾದ ಬಳಿಕ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆ ಮಾಡಲಾಯಿತು. ಸದ್ಯಕ್ಕೆ ಅವರನ್ನು ಆಸ್ಪತ್ರೆಗೆ ಕರೆತರಲಾಗಿದೆ ಅನ್ನೋದಷ್ಟೇ ಮಾಹಿತಿಇದೆ.
ಬೆಂಗಳೂರು ನಗರದ ಯಾವ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆನ್ನುವುದು ನಿಗೂಢವಾಗಿದೆ. ಏನೇ ಇರಲಿ, ಆದಷ್ಟು ಬೇಗ ಗುಣಮುಖರಾಗಲಿ. ಅದರಾಚೆ ಕುತೂಹಲ ಇರೋದು ಅಂದ್ರೆ, ಮತ್ತೆ ಅವರು ವಾಪಾಸ್ಬಿಗ್ ಬಾಸ್ ಮನೆಗೆ ಎಂಟ್ರಿಯಾಗ್ತಾರಾ ಅಂತ. ಯಾಕಂದ್ರೆ ಈಗ ಕೊರೋನಾ ಎಲ್ಲಾ ಕಡೆಗೂ ವ್ಯಾಪಿಸಿಕೊಂಡಿದೆ. ಆರೋಗ್ಯವಾಗಿದ್ದವರೂ ಕೂಡ ಎಷ್ಟು ಸೇಫ್ ಅನ್ನೋದು ಖಾತರಿ ಇಲ್ಲ. ಪ್ರತಿ ಮನೆಯಲ್ಲಿ ಒಬ್ಬರಿಗೆ ಕೊರೋನಾ ಪಾಸಿಟಿವ್ ಕಟ್ಟಿಟ್ಟ ಬುತ್ತಿ ಅಂತಲೇ ವೈದ್ಯರು ಹೇಳುತ್ತಿದ್ದಾರೆ. ಹೀಗಾಗಿ ಆಸ್ಪತ್ರೆಗೆ ಬಂದು ಹೋದ ನಂತರ ದಿವ್ಯಾ ಅವರಿಗೆ ಕೊರೋನಾ ಬರೋದಿಲ್ಲ ಅನ್ನೋದಕ್ಕೆ ಗ್ಯಾರಂಟಿ ಏನು? ಅದೇ ಕಾರಣಕ್ಕೆ ದಿವ್ಯಾ ಅವರನ್ನು ಮತ್ತೆ ಬಿಗ್ಬಾಸ್ ಮನೆಗೆ ಕಳುಹಿಸುವುದು ಬಹುತೇಕ ಡೌಟ್. ಆದರೂ ಕಲರ್ಸ್ ಕನ್ನಡ ಏನೆಲ್ಲ ಮುಂಜಾಗ್ರತೆ ವಹಿಸಿದೆ ಅನ್ನೋದು ಗೊತ್ತಿಲ್ಲ.