ಬಾಲಿವುಡ್ ನಟ ಸೋನು ಸೂದ್ ನಂತರ ಕನ್ನಡದ ನಟರ ಪೈಕಿ ನಟ ಸುದೀಪ್ ಇದೇ ಮೊದಲು ದೊಡ್ಡ ಮಟ್ಟದಲ್ಲಿ ಕೊರೋನಾ ಸೋಂಕಿತರ ನೆರವಿಗೆ ಧಾವಿಸಿದ್ದಾರೆ
ಕನ್ನಡದ ನಟರ ಬಗ್ಗೆ ಸಾರ್ವಜನಿಕವಾಗಿ ತೀವ್ರ ಚರ್ಚೆ ನಡೆಯುತ್ತಿರುವಾಗಲೇ ನಟ ಕಿಚ್ಚ ಸುದೀಪ್ ಅವರು ಕೊರೊನಾ ಸೋಂಕಿತರ ನೆರವಿಗೆ ಧಾವಿಸಿದ್ದಾರೆ. ಕಿಚ್ಚ ಸುದೀಪ್ ಚಾರಿಟೆಬಲ್ ಟ್ರಸ್ಟ್ ಮೂಲಕ ಸರಿಸುಮಾರು 300 ಆಕ್ಸಿಜನ್ ಸಿಲಿಂಡರ್ ಗಳನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಿಗೆ ನೀಡಲು ಮುಂದೆ ಬಂದಿದ್ದಾರೆ.
ಸದ್ಯಕ್ಕೆ ಬಾಲಿವುಡ್ ನಟ ಸೋನು ಸೂದ್ ನಂತರ ಕನ್ನಡದ ನಟರ ಪೈಕಿ ನಟ ಸುದೀಪ್ ಇದೇ ಮೊದಲು ದೊಡ್ಡ ಮಟ್ಟದಲ್ಲಿ ಕೊರೋನಾ ಸೋಂಕಿತರ ನೆರವಿಗೆ ಧಾವಿಸಿದ್ದಾರೆ. ಸದ್ಯಕ್ಕೆ ಯಾವ್ಯಾವ ಖಾಸಗಿ ಆಸ್ಪತ್ರೆಗಳಿಗೆ ಅವರು ಆಕ್ಸಿಜನ್ ಸಿಲಿಂಡರ್ ನೀಡುತ್ತಿದ್ದಾರೆಂಬ ಮಾಹಿತಿ ಇಲ್ಲ. ಆದರೆ ಕೊರೊನಾ ಸೊಂಕಿತರ ನೆರವಿಗೆ ಬಂದಿರುವುದು ಇತರರಿಗೂ ಮಾದರಿ ಆಗಲಿ.