ಕೊರೊನಾ ಎಂಬ ಹೆಮ್ಮಾರಿ ಈಗಾಗಲೇ ಹಲವರ ಜೀವ ತೆಗೆದಿದೆ. ಅದರಲ್ಲೂ ದಿನ ಕಳೆದಂತೆ ಸಿನಿಮಾ ರಂಗದ ಅನೇಕರು ಕೊರೊನಾಗೆ ಬಲಿಯಾಗುತ್ತಲೇ ಇದ್ದಾರೆ. ಇತ್ತೀಚೆಗಷ್ಟೇ ನಿರ್ಮಾಪಕರಾದ ರಾಮು, ಚಂದ್ರಶೇಖರ್ ನಿಧನರಾಗಿದ್ದರು. ಈಗ ಯುವ ನಿರ್ದೇಶಕರೊಬ್ಬರು ಕೊರೊನಾದಿಂದ ಮೃತಪಟ್ಟಿದ್ದಾರೆ.
ನವೀನ್ (36) ಮೃತಪಟ್ಟವರು.
ಭಾನುವಾರ ಕೊರೊನಾ ಸೋಂಕಿನಿಂದಾಗಿ ನಿಧನರಾಗಿದ್ದಾರೆ.
ಮೂಲತಃ ಮಂಡ್ಯ ಜಿಲ್ಲೆಯವರಾದ ನವೀನ್ ಅವರ ಮೃತದೇಹವನ್ನು ಕೋವಿಡ್ ನಿಯಮಾನುಸಾರ ಅಂತ್ಯಕ್ರಿಯೆ ನಡೆಸಲಾಗಿದೆ.
ನವೀನ್ ಅವರು ಈ ಹಿಂದೆ ‘ಒನ್ ಡೇ’ ಸಿನಿಮಾ ನಿರ್ದೇಶನ ಮಾಡಿದ್ದರು. ಹಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿಯೂ ನವೀನ್ ಕೆಲಸ ಮಾಡಿದ್ದರು.