ಇತ್ತೀಚೆಗೆ ಚಿತ್ರರಂಗದಲ್ಲಿ ಆಘಾತಕಾರಿ ವಿಷಯಗಳು ಹೆಚ್ಚಾಗಿವೆ. ಒಂದೆಡೆ ಕೊರೊನಾ ಹಾವಳಿಯಾದರೆ ಇನ್ನೊಂದೆಡೆ ಚಿತ್ರೋದ್ಯಮದ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ.
ಹೌದು, ಕರ್ನಾಟಕದ ಜನರು ಸಾವು ನೋವುಗಳ ಜೊತೆ ಜೀವನ ನಡೆಸುತ್ತಿದ್ದಾರೆ. ಈಗಾಗಲೇ ಬಾಲಿವುಡ್, ಟಾಲಿವುಡ್, ಕಾಲಿವುಡ್ ಹೀಗೆ ನಾನಾ ರಂಗದಲ್ಲಿನ ದಿಗ್ಗಜರು ಕೊರೋನಾದಿಂದ ಮೃತಪಟ್ಟಿದ್ದಾರೆ.
54 ವರ್ಷ ವಯಸ್ಸಿನ ಖ್ಯಾತ ತಮಿಳು ಸಿನಿಮಾ ನಿರ್ದೇಶಕ ಕೆ ವಿ ಆನಂದ್ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಪತ್ರಕರ್ತರಾಗಿ ಸಿನಿಮಾ ರಂಗ ಪ್ರವೇಶಿಸಿದ ಇವರು ಛಾಯಾಗ್ರಹಣ ಅಂದರೆ ಇಷ್ಟ ಪಡುತ್ತಿದ್ದರು.
ಇವರು ಮೋಹನ್ ಲಾಲ್ ಅಭಿನಯಿಸಿದ ತೇನ್ ಮಾವಿನ್ ಕೊಂಬತ್ತ್ ಸಿನಿಮಾಗೆ ಕೊಡುಗೆನೀಡಿದ್ದರು. ಇವರ ನಿಧನಕ್ಕೆ ಹಲವಾರು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಹೆಚ್ಚಾಗುತ್ತಿರುವ ಕೊರೊನಾ ಪ್ರಕರಣಗಳ ಜೊತೆಗೆ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗಿ ಕಂಡುಬರುತ್ತಿವೆ. ಅದೆಂಥಹ ಸೆಲೆಬ್ರಿಟಿಯನ್ನೂ ಬಿಡುತ್ತಿಲ್ಲ. ಇತ್ತೀಚೆಗೆ ಸಿನಿಮಾ ರಂಗದ ಹಲವರನ್ನು ಕೊರೊನಾ ಬಲಿತೆಗೆದುಕೊಂಡಿದ್ದನ್ನ ಇಲ್ಲಿ ಸ್ಮರಿಸಬಹುದು.