ಕನ್ನಡದಲ್ಲಿ ಹೊಸಬರ ಹಿಂದೆ ನಿಂತು ಸಾಬೀತುಪಡಿಸಿದ ನಿರ್ದೇಶಕ ಶಶಾಂಕ್, ಈಗ ಮತ್ತೆ ಹೊಸಬರ ಹಿಂದೆ ಹೊರಟಿದ್ದಾರೆ. ಹೌದು, ಶಶಾಂಕ್ ಈಗ ಹೊಸ ಸಿನಿಮಾಗೆ ಸಜ್ಜಾಗಿದ್ದಾರೆ.
“ಶಶಾಂಕ್ ಸಿನೆಮಾಸ್” ಸಂಸ್ಥೆಯಡಿ, ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ನಿರ್ಮಾಣವಾಗಲಿರುವ ಈ ಚಿತ್ರಸದ ಮೂಲಕ ಅವರು “ಪ್ರವೀಣ್” ಎಂಬ ಹೊಸ ನಾಯಕನನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ.
ವೈದ್ಯಕೀಯ ಪದವೀಧರರಾದ ಪ್ರವೀಣ್ ಅವರು ಹೊಸಪೇಟೆ ಮೂಲದವರಾಗಿದ್ದು, ಹೀರೋ ಆಗಬೇಕೆಂದು ಬಂದಿದ್ದಾರೆ. ಅಷ್ಟೇ ಅಲ್ಲ, ಅವರು ನಟನಾಗುವ ಆಸಕ್ತಿಯಿಂದ ಅದಕ್ಕೆ ಬೇಕಾಗುವ ಎಲ್ಲಾ ತರಬೇತಿ ಪಡೆದು ಬೆಳ್ಳಿತೆರೆಗೆ ಎಂಟ್ರಿಯಾಗಲು ರೆಡಿಯಾಗಿದ್ದಾರೆ.
ಇನ್ನೂ ಶೀರ್ಷಿಕೆ ಪಕ್ಕಾ ಆಗಿಲ್ಲ. ಭಾವುಕ ಪ್ರೇಮಕಥೆಯ ಈ ಚಿತ್ರಕ್ಕೆ ಶಶಾಂಕ್ ಹೊಸ ನಾಯಕಿಯ ಹುಡುಕಾಟ ನಡೆಸುತ್ತಿದ್ದಾರೆ ಲಾಕ್ಡೌನ್ ಗೂ ಮುನ್ನ ಸರಳವಾಗಿ ಮುಹೂರ್ತ ನೆರವೇರಿದ್ದು, ಲಾಕ್ಡೌನ್ ಮುಗಿದ ನಂತರ ಫೋಟೋ ಶೂಟ್ ಮಾಡಿ, ಶೀರ್ಷಿಕೆಯ ಜೊತೆ ಫಸ್ಟ್ ಲುಕ್ ರಿಲೀಸ್ ಮಾಡುವುದಾಗಿ ನಿರ್ದೇಶಕರು ತಿಳಿಸಿದ್ದಾರೆ.
ಜೂನ್ ತಿಂಗಳಲ್ಲಿ ಚಿತ್ರೀಕರಣ ಆರಂಭಿಸಲಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಲಿದ್ದು, ಉಳಿದ ತಾರಾಗಣ ಮತ್ತು ತಾಂತ್ರಿಕ ವರ್ಗದ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ.