ಹೊಸ ರೂಪದಲ್ಲಿ ಸಿರಿ ಕನ್ನಡ ಮೊದಲ ಸಲ 65 ಸಂಚೆಕೆಯ ಧಾರಾವಾಹಿಗಳ ಪ್ರಸಾರ

ಕನ್ನಡದಲ್ಲಿ ’ಸಿರಿ ಕನ್ನಡ ವಾಹಿನಿ’ಯು ಸದ್ಯ ಕನ್ನಡಿಗರ ಕಣ್ಮಣಿ. ಯಾವುದೇ ಸಂಚಿಕೆಗಳಿರಲಿ, ಗರಿಷ್ಟ 65ಕ್ಕೆ ನಿಲ್ಲಿಸಬೇಕೆಂದು ನಿರ್ಣಯ ತೆಗೆದುಕೊಂಡಂತೆ, ಸಪಲರವಾಗಿದೆ ವಾಹಿನಿ. ಪ್ರತಿಫಲವಾಗಿ ಶಾರ್ಟ್ ಅಂಡ್ ಸ್ವೀಟ್ ಎನ್ನುವಂತೆ ರಿಯಾಲಿಟಿ ಶೋ, ಅಧ್ಯಾತ್ಮಿಕ ಹೂರತುಪಡಿಸಿ, ಒಂದಷ್ಟು ವಿನೂತನ ಧಾರವಾಹಿ, ಹೀಗೆ ಎಲ್ಲರೂ ಇಷ್ಟಪಡುವಂತಹ ಎಂಟು ಕಾರ್ಯಕ್ರಮಗಳನ್ನು ಸಿದ್ದಪಡಿಸಿದೆ. ಮೊದಲನೆಯದಾಗಿ ಮಠ ಮಾನ್ಯಗಳ ದರ್ಶನ ನೀಡುವ ’ಧರ್ಮ ದರ್ಶನ’ ಕಾರ್ಯಕ್ರಮ ಬೆಳಗ್ಗೆ 7.30ಕ್ಕೆ ಪ್ರಸಾರವಾಗಲಿದೆ. 12.30ಕ್ಕೆ ’ಸಿರಿ ಭೋಜನ’ ನಟಿ ಸನಾತನಿ ನಡೆಸಿಕೊಡುವ ಕಾರ್ಯಕ್ರಮದಲ್ಲಿ ಹೆಸರು ಮಾಡಿರುವ ಶೆಫ್‌ಗಳು ಭಾಗವಹಿಸಲಿದ್ದು, ಉತ್ತಮ ಆರೋಗ್ಯ ನಿರ್ವಹಣೆಗಾಗಿ ಆಯುರ್ವೇದ ಅಡುಗೆಯ ಅಂಶಗಳನ್ನು ತಿಳಿಸಿಕೊಡಲಿದ್ದಾರೆ.

ಮೂರನೆಯದು ನಟಿ,ನಿರೂಪಕಿ ರಜನಿ ನಡೆಸಿಕೊಡುವ ’ನಾರಿಗೊಂದು ಸೀರೆ’ ಮಧ್ಯಾಹ್ನ 1.30ಕ್ಕೆ ಹೊಸ ರೂಪದಲ್ಲಿ ಬರಲಿದೆ. ಉತ್ತರ ಕರ್ನಾಟಕದ ಸೊಗಡು ಇರುವ ’ಧಾರವಾಡದಾಗೊಂದು ಲವ್ ಸ್ಟೋರಿ’ ಧಾರಾವಾಹಿಯನ್ನು ಪೃಥ್ವಿರಾಜ ಕುಲಕರ್ಣಿ ನಿರ್ದೇಶನ ಮಾಡುತ್ತಿದ್ದಾರೆ. ಅಲ್ಲಿನ ಸ್ಥಳೀಯ ಕಲಾವಿದರುಗಳಿಗೆ ಅವಕಾಶ ಮಾಡಿಕೊಟ್ಟಿರುವುದು ವಿಶೇಷ. ಇದು ರಾತ್ರಿ 7 ಗಂಟೆಗೆ ಪ್ರಸಾರವಾಗಲಿದೆ.
ಇನ್ನು, ನಟ,ನಿರ್ಮಾಪಕ, ನಿರ್ದೇಶಕ ಮತ್ತು ’ನನ್ ಮಗಂದ್’ ಖ್ಯಾತಿಯ ಹುಚ್ಚ ವೆಂಕಟ್ ನಿರೂಪಕರಾಗಿರುವ ’ಲೈಫು ಓಕೆ’ ರಿಯಾಲಿಟಿ ಶೋ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ. ಕಿರುತೆರೆ ಕಲಾವಿದ ಮುರಳಿ ಇದನ್ನು ನಡೆಸಿಕೊಡಲಿದ್ದಾರೆ. ’ಕಲ್ಪನ’ ಎಂಬ ಹಾರರ್ ಮತ್ತು ಪ್ರೀತಿ ಕಥೆ ಹೊಂದಿರುವ ಧಾರವಾಹಿಯನ್ನು ಸುಶೀಲ್‌ಮೊಕಾಶಿ ನಿರ್ದೇಶಿಸುತ್ತಿದ್ದಾರೆ. ಇದು ರಾತ್ರಿ 8.30ಕ್ಕೆ ಪ್ರಸಾರವಾಗಲಿದೆ. ಹಿರಿಯ ನಟಿ ಅಪರ್ಣ ನಿರೂಪಣೆಯಲ್ಲಿ ’ಸಿಂಪಲ್ಲಾಗ್ ಒಂದ್ ಸಿನಿಮಾ ಕಥೆ’ ರಾತ್ರಿ 9ಕ್ಕೆ ಮೂಡಿಬರಲಿದೆ. ಇವುಗಳ ಜೊತೆ ವಿಸ್ಮಯ, ವಿಚಿತ್ರ ಮತ್ತು ವಿಶೇಷ ಸಂಗತಿಗಳ ಕುರಿತಂತೆ ’ನಿಗೂಢ ರಹಸ್ಯ’ ಕಾರ್ಯಕ್ರಮವನ್ನು ಆರ್‌ಜೆ ನಿಖಿಲ್‌ಸ್ವಾಮಿ ಸಾರಥ್ಯದಲ್ಲಿ ರಾತ್ರಿ 9.30 ಕ್ಕೆ ಮೂಡಿಬರಲಿದೆ. ಸೋಮವಾರದಿಂದ ಶುಕ್ರವಾರವರೆಗೆ ಏಪ್ರಿಲ್ 19ರಿಂದ ಪ್ರಸಾರವಾಗಲಿವೆ ’ಸಿರಿ ಕನ್ನಡ’ ವಾಹಿನಿ ಈಗ ಪರಿಪೂರ್ಣ ವಾಹಿನಿಯಾಗಿ ಹೊರಹೊಮ್ಮಲಿದ್ದು ಉತ್ತಮ ಕಾರ್ಯಕ್ರಮ ರೂಪಿಸಿ ಮನರಂಜನೆ ನೀಡುವುದಾಗಿ ವಾಹಿನಿ ಮುಖ್ಯಸ್ಥ ಸಂಜಯ್‌ ಹೇಳಿದ್ದಾರೆ.

Related Posts

error: Content is protected !!