ಹಿರಿಯ ನಟ ದ್ವಾರಕೀಶ್‌ ಪತ್ನಿ ಅಂಬುಜಾ ನಿಧನ: ಶನಿವಾರ ಅಂತ್ಯಕ್ರಿಯೆ

ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್‌ ಅವರ ಪತ್ನಿ ಅಂಬುಜಾ ದ್ವಾರಕೀಶ್‌ ಅವರು ಶುಕ್ರವಾರ ನಿಧನರಾಗಿದ್ದಾರೆ. 80 ವರ್ಷ ವಯಸ್ಸಿನವರಾಗಿದ್ದ ಅಂಬುಜಾ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದು, ಎಚ್‌ಎಸ್‌ಆರ್‌ ಲೇಔಟ್‌ನಲ್ಲಿರುವ ಮನೆಯಲ್ಲೇ ಮೃತಪಟ್ಟಿದ್ದಾರೆ.

ಮೃತರು ಪತಿ ದ್ವಾರಕೀಶ್‌ ಸೇರಿದಂತೆ ಐವರು ಗಂಡು ಮಕ್ಕಳನ್ನು ಅಗಲಿದ್ದಾರೆ. ದ್ವಾರಕೀಶ್‌ ಅವರ ಸಾಧನೆಯ ಹಿಂದೆ ಅಂಬುಜಾ ಅವರ ಕೊಡುಗೆ ಅಪಾರವಾಗಿತ್ತು. ಕಪ್ಪು-ಬಿಳುಪು ಕಾಲದಿಂದಲೂ ದ್ವಾರಕೀಶ್‌ ಸಿನಿಮಾ ಮಾಡಿದವರು. ಆಗಿನಿಂದಲೂ ದ್ವಾರಕೀಶ್‌ ಅವರ ಬೆನ್ನಿಗೆ ನಿಂತು, ಸೋಲು-ಗೆಲುವು ಎರಡರಲ್ಲೂ ಅಂಬುಜಾ ಅವರು ಜೊತೆಗಿದ್ದರು. ದ್ವಾರಕೀಶ್‌ ಅವರ ಏಳು-ಬೀಳಿನಲ್ಲಿ ಜೊತೆಯಾಗಿಯೇ ಇದ್ದ ಅವರು, ಸದಾ ನಗುಮೊಗದಲ್ಲೇ ದ್ವಾರಕೀಶ್‌ ಅವರಿಗೆ ಧೈರ್ಯ ತುಂಬುತ್ತಿದ್ದರು.‌

ಮೃತರ ಅಂತ್ಯಕ್ರಿಯೆ, ಶನಿವಾರ ಚಾಮರಾಜಪೇಟೆಯಲ್ಲಿರುವ ಚಿತಾಗಾರದಲ್ಲಿ ನೆರವೇರಲಿದೆ ಎಂದು ಅವರ ಹಿರಿಯ ಪುತ್ರ ಯೋಗೇಶ್‌ ದ್ವಾರಕೀಶ್‌ ತಿಳಿಸಿದ್ದಾರೆ.
ಸಂತಾಪ: ಮೃತರ ಆತ್ಮಕ್ಕೆ ಶಾಂತಿ ಕೋರಿ ವಾಣಿಜ್ಯ ಮಂಡಳಿ ಪದಾಧಿಕಾರಿಗಳು, ಚಿತ್ರರಂಗದ ಗಣ್ಯರು, ನಿರ್ದೇಶಕ, ನಿರ್ಮಾಪಕರು, ನಿರ್ದೇಶಕ ಸಂಘ, ನಿರ್ಮಾಪಕರ ಸಂಘ ಹಾಗೂ ಕಲಾವಿದರ ಸಂಘ ಸಂತಾಪ ಸೂಚಿಸಿದೆ.

Related Posts

error: Content is protected !!