ಇ ಕೆ ಫಿಕ್ಚರ್ಸ್‌ ನಲ್ಲೀಗ ಮ್ಯೂಟ್‌ – ಇದು ರಾಕಿಬಾಯ್‌ ತಾಯಿಯ ಮತ್ತೊಂದು ಚಿತ್ರ !

ಸ್ಯಾಂಡಲ್‌ವುಡ್‌ ನಲ್ಲಿ ಇ ಕೆ ಫಿಕ್ಚರ್ಸ್‌ ಅಂದಾಕ್ಷಣ ನೆನಪಾಗೋದು ʼಮೊಗ್ಗಿನ ಮನಸುʼ ಹಾಗೂ ʼಮುಂಗಾರು ಮಳೆ 2 ʼ ಚಿತ್ರ. ಅವೆರೆಡು ಬ್ಲಾಕ್‌ ಬಸ್ಟರ್‌ ಚಿತ್ರಗಳೇ. ನಿರ್ಮಾಪಕರಾಗಿ ಇ ಕೆ ಬ್ಯಾನರ್ಸ್‌ ಮೂಲಕ ಕನ್ನಡದ ಸಿನಿಮಾ ಪ್ರೇಕ್ಷಕರಿಗೆ ಅಂತಹ ಎರಡು ಸಿನಿಮಾಗಳನ್ನು ಕೊಡುಗೆ ಕೊಟ್ಟ ಖ್ಯಾತಿ ನಿರ್ಮಾಪಕ ಗಂಗಾಧರ್‌ ಗುಡ್ಡಯ್ಯ ಅವರದ್ದು. ಆ ಚಿತ್ರಗಳು ಬಂದು ಹೋದ ಮೇಲೆ ಒಂದಷ್ಟು ಗ್ಯಾಪ್‌ ನಂತರ ಇಕೆ ಫಿಕ್ಚರ್ಸ್‌ ಮತ್ತೆ ಹೊಸ ದೊಂದು ಸಿನಿಮಾವನ್ನು ಸದ್ದಿಲ್ಲದೆ ನಿರ್ಮಾಣ ಮಾಡಿತೆರೆಗೆ ತರಲು ಹೊರಟಿದೆ. ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಬುಧವಾರ (ಮಾ.14) ಆ ಚಿತ್ರದ ಟೈಟಲ್‌ ಕೂಡ ಲಾಂಚ್‌ ಆಗಿದೆ.

“ಹ್ಯಾಸ್‌ ಟ್ಯಾಗ್‌ ಮ್ಯೂಟ್‌ʼ ಎನ್ನುವುದು ಆ ಚಿತ್ರದ ಹೆಸರು. ʼಕವಲು ದಾರಿʼ ಹಾಗೂ ʼಆಪರೇಷನ್‌ ಅಲಮೇಲಮ್ಮʼ ಚಿತ್ರಗಳ ಖ್ಯಾತಿಯ ನಟ ರಿಷಿ ಈ ಟೈಟಲ್‌ ಲಾಂಚ್‌ ಮಾಡಿ ಚಿತ್ರ ತಂಡಕ್ಕೆ ಶುಭ ಕೋರಿದ್ದಾರೆ.” ಈ ಚಿತ್ರದ ಶೀರ್ಷಿಕೆಯನ್ನು ಬಿಡುಗಡೆ ಮಾಡುವುದಕ್ಕೆ ಬಹಳ ಖುಷಿಯಾಗುತ್ತಿದೆ. ಯಾಕಂದ್ರೆ ಇ ಕೆ ಫಿಕ್ಚರ್ಸ್‌ ಬ್ಯಾನರ್‌ ಅಡಿಯಲ್ಲಿ ಈ ಚಿತ್ರದ ನಿರ್ಮಾಣವಾಗುತ್ತಿದೆ. ಈಗಾಗಲೇ ಇಕೆ ಫಿಕ್ಚರ್ಸ್‌ ಕನ್ನಡಕ್ಕೆ ʼಮುಂಗಾರು ಮಳೆ೨ʼ ಹಾಗೂ ʼಮೊಗ್ಗಿನ ಮನಸುʼ ಅಂತಹದ ಎರಡು ಸೂಪರ್‌ ಹಿಟ್‌ ಚಿತ್ರ ಕೊಟ್ಟಿದೆ. ಈಗ “ಹ್ಯಾಸ್‌ ಟ್ಯಾಗ್ ಮ್ಯೂಟ್‌‌ʼ ಇದರ ಮೊತ್ತೊಂದು ಭರ್ಜರಿ ಕೊಡುಗೆ ಆಗುವುದು ಗ್ಯಾರಂಟಿ ಇದೆʼ ಅಂತ ಟೈಟಲ್‌ ಲಾಂಚ್‌ ಮಾಡಿದ ನಂತರ ಹೇಳಿಕೊಂಡಿದ್ದಾರೆ ನಟ ರಿಷಿ.

ಯುವ ಪ್ರತಿಭೆ ಪ್ರಶಾಂತ್‌ ಚಂದ್ರ ಈ ಚಿತ್ರದ ನಿರ್ದೇಶಕ. ಈ ಹಿಂದೆ ಇವರುʼ ಮೊಗ್ಗಿನ ಮನಸುʼ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರಂತೆ. ಅಲ್ಲಿಂದ ಹಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರಂತೆ. ಅದೇ ಅನುಭವದಲ್ಲೀಗ “ಹ್ಯಾಸ್‌ ಟ್ಯಾಗ್‌ ಮ್ಯೂಟ್‌ʼ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಕೆಜಿಎಫ್‌ ಖ್ಯಾತಿಯ ನಟಿ ಅರ್ಚನಾ ಜೋಯಿಷ್‌, ಸಿದ್ದಾರ್ಥ ಮಾಧ್ಯಾಮಿಕಾ ಜತೆಗೆ ಅದು ಕುಲಮ್‌ ಸೇರಿದಂತೆ ಹಲವರು ಚಿತ್ರದಲ್ಲಿದ್ದಾರೆ. ಈ ಚಿತ್ರಕ್ಕೆ ಈಗಾಗಲೇ ಚಿತ್ರೀಕರಣವೂ ಮುಗಿದಿದೆ. ಹಾಗೆಯೇ ಪೋಸ್ಟ್‌ ಪ್ರೊಡಕ್ಷನ್‌ ವರ್ಕ್‌ ಕೂಡ ಕಂಪ್ಲೀಟ್‌ ಆಗಿದೆ. ರಿಲೀಸ್‌ ಸಿದ್ಧತೆಯಲ್ಲಿರುವ ಚಿತ್ರತಂಡ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಬುಧವಾರ ಟೈಟಲ್‌ ಲಾಂಚ್‌ ಮಾಡಿದೆ.

Related Posts

error: Content is protected !!