ಆಕ್ಷನ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ಬಹುನಿರೀಕ್ಷಿತ ಅರ್ಜುನ್ ಗೌಡ ಚಿತ್ರದ ಟ್ರೇಲರ್ ಹೊರ ಬಂದಿದೆ. ಪ್ರಜ್ವಲ್ ಅವರ ಹೆವಿ ಆಕ್ಷನ್ ಸನ್ನಿವೇಶಗಳ ಜತೆಗೆ ಖಡಕ್ ಡೈಲಾಗ್ ಮೂಲಕ ಎರಡು ನಿಮಿಷದ ಟ್ರೇಲರ್ ಸಖತ್ ಇಂಟರೆಸ್ಟಿಂಗ್ ಆಗಿದೆ. ಹಾಗೆಯೇ ಇದೊಂದು ಪಕ್ಕಾ ಕಮರ್ಷಿಯಲ್ ಚಿತ್ರವಾಗಿದ್ದರಿಂದ ಸೆಂಟಿಮೆಂಟ್, ಕಾಮಿಡಿ, ರೋಮಾನ್ಸ್ ನಂತಹ ಮಸಾಲೆ ಎಲಿಮೆಂಟ್ಸ್ ಕೂಡ ಇಲ್ಲಿ ಕ್ಯೂರಿಯಾಟಿ ಹುಟ್ಟಿಸುತ್ತಿವೆ. ನೋಡುಗರ ಪಾಲಿಗೆ ಇಲ್ಲಿ ಕುತೂಹಲ ಇರೋದು ಈ ಸಿನಿಮಾದ ಕಥೆಗೂ ಇಂದಿರಾ ಗಾಂಧಿ, ನಾಥೂರಾಮ್ ಘೋಡ್ಸೆ, ಸಾಹಿತಿ ಎಂ.ಎಂ. ಕಲಬುರ್ಗಿ ಹಾಗೂ ಗೌರಿ ಲಂಕೇಶ್ ಅವರ ಹತ್ಯೆಯ ಪ್ರಕರಣಗಳಿಗೂ ಏನಾದರೂ ನಂಟು ಉಂಟಾ ಅಂತ.
ಯಾಕಂದ್ರೆ ಟ್ರೇಲರ್ ಶುರುವಾದ ತಕ್ಷಣೇ ಇವರ ಫೋಟೋಗಳನ್ನು ತೋರಿಸಲಾಗಿದೆ. ಅದರ ಉದ್ದೇಶವಾದರೂ ಏನು ? ಅಂತಹದೊಂದು ಕುತೂಹಲ ಟ್ರೇಲರ್ ನೋಡಿದವರಿಗೆ ಬಾರದೆ ಇರದು. ಮಜಾ ಅಂದ್ರೆ, ಈ ಚಿತ್ರದಲ್ಲಿ ಬರುವ ಯಾವುದೇ ಪಾತ್ರಗಳು, ಸನ್ನಿವೇಶಗಳಉ ಯಾವುದೇ ವ್ಯಕ್ತಿಗೆ, ಧರ್ಮಕ್ಕೆ ಸಂಬಂಧಿಸಿಲ್ಲ ಅಂತ ತೋರಿಸಲಾಗುತ್ತದೆ. ಹಾಗಿದ್ದು ಇಲ್ಲಿ ಇಂದಿರಾ ಗಾಂಧಿ, ಗೌರಿ ಲಂಕೇಶ್, ನಾಥೂರಾಮ್ ಘೋಡ್ಸೆ, ಎಂ. ಎಂ. ಕಲಬುರ್ಗಿ ಅವರ ಫೋಟೋಗಳು ಯಾಕೆ ಬಂದು ಹೋದವು? ಕುತೂಹಲದ ಈ ಪ್ರಶ್ನೆಗೆ ನಿರ್ದೇಶಕರೇ ಉತ್ತರಿಸಬೇಕು.