ನಾವು ಆರ್‌ಸಿಬಿ ಫ್ಯಾನ್ಸು, ರಾಯಲ್‌ ಚಾಲೆಂಜರ್ಸ್‌ ಈಸ್‌ ಬೆಸ್ಟು : ಆರ್‌ಸಿಬಿ ಫ್ಯಾನ್ಸ್‌ ಗೆ ಸ್ಪೆಷಲ್‌ ಸಾಂಗ್‌ ಗಿಫ್ಟ್ ಕೊಟ್ಟ ಬೇಬಿ ಡಾಲ್‌ ಆದ್ಯಾ !

ಐಪಿಎಲ್‌ಫೀವರ್‌ ಶುರುವಾಗಿದೆ. ಇಂದು ಮುಂಬೈ ಇಂಡಿಯನ್ಸ್‌ ವರ್ಸಸ್‌ ಆರ್‌ಸಿಬಿ ಅಖಾಡಕ್ಕಿಳಿಯುವ ಮೂಲಕ ಐಪಿಎಲ್‌ಗೆ ಗ್ರಾಂಡ್‌ ಚಾಲನೆ ಸಿಗುತ್ತಿದೆ. ಕೊರೋನಾ ಆತಂಕದ ನಡುವೆಯೂ ಕ್ರಿಕೆಟ್ಸ್‌ ಫ್ಯಾನ್ಸ್‌ ಐಪಿಎಲ್‌ ನೋಡಲು ತುದಿಗಾಲ ಮೇಲೆ ನಿಂತಿದ್ದಾರೆ. ಬೆಂಗಳೂರಿಗರಾದ ನಮಗೆ ಆರ್‌ಸಿಬಿ ಫೆವರೇಟ್.‌ ಗೆಲ್ಲಲ್ಲಿ-ಸೋಲಲಿ ಆರ್‌ಸಿಬಿ ನಮ್ದು ಎನ್ನುವ ಹೆಮ್ಮೆ ನಮಗೆ. ಅದೊಂದು ಕ್ರೇಜ್‌ ಗಾಗಿಯೇ ಕರ್ನಾಟಕದ ಜನರಿಗೆ ಆರ್‌ ಸಿಬಿ ಅಂದ್ರೆ ಪ್ರಾಣ. ಈಗಲೂ ಅದೇ ಆಭಿಮಾನ ಆರ್‌ಸಿಬಿ ಮೇಲಿದೆ ಅನ್ನೋದು ಸುಳ್ಳಲ್ಲ. ತಣ್ಣಗೆ ಹೆಚ್ಚುತ್ತಿರುವ ಐಪಿಎಲ್‌ ಕ್ರೇಜ್‌ ನಡುವೆಯೇ ಆರ್‌ಸಿಬಿ ಗೆ ಈಗ ಫ್ಯಾನ್ಸ್‌ ತಮ್ಮದೇ ರೀತಿಯಲ್ಲಿ ಶುಭ ಹಾರೈಸುತ್ತಿದ್ದಾರೆ. ವಿರಾಟ್‌ ಕೊಹ್ಲಿ ನೇತೃತ್ವದ ಟೀಮ್‌ ಅನ್ನು ಹುರಿದುಂಬಿಸಲು ತಮ್ಮದೇ ರೀತಿಯ ಕೊಡುಗೆ ನೀಡುತ್ತಿದ್ದಾರೆ. “ಝೀʼ ಕನ್ನಡದ ಸರಿಗಮಪ ಲಿಟ್ಲ್‌ ಚಾಂಪಿಯನ್‌ ರಿಯಾಲಿಟಿ ಶೋ ಖ್ಯಾತಿಯ ಗಾಯಕಿ ಬೇಬಿ ಡಾಲ್‌ ಆದ್ಯಾ ಈಗ ಆರ್‌ಸಿಬಿ ಫ್ಯಾನ್ಸ್‌ ಗೆ ಅಂತಲೇ ಒಂದು ಸ್ಪೆಷಲ್‌ ಸಾಂಗ್ಸ್‌ ಹಾಡಿದ್ದಾರೆ.

ನಾವು ಆರ್‌ ಸಿಬಿ ಫ್ಯಾನ್ಸು, ಗೆಲ್ಲಲ್ಲಿ ಸೋಲಲಿ ನಮ್‌ ಸಫೊರ್ಟ್‌ ನಿಮ್ಗೇನೆ…ಎನ್ನುವ ಸಾಲುಗಳ ಮೂಲಕ ಶುರುವಾಗುವ ಈ ಹಾಡು ಆರ್‌ ಸಿಬಿ ಫ್ಯಾನ್ಸ್‌ಗೆ ಆಂಥಮ್‌ ಆಗುವ ಹಾಗಿದೆ. ಆರ್‌ ಸಿಬಿ ಮೇಲಿನ ಅಭಿಮಾನಕ್ಕೆ ಬೇಬಿ ಡಾಲ್‌ ಆದ್ಯಾ ಹಾಗೂ ಅವರ ತಾಯಿ ಅಶ್ವಿನಿ ಅವರೇ ಸಾಹಿತ್ಯ ಬರೆದಿದ್ದಾರೆ. ಹಾಗೆಯೇ ಸಂಗೀತ ಸಂಯೋಜನೆ ಜತೆಗೆ ಅದಕ್ಕೆ ಧ್ವನಿ ನೀಡಿದವರು ಬೇಬಿ ಡಾಲ್‌ ಆದ್ಯಾ. ಹಾಡಿನ ಸಾಲುಗಳೇ ಸೊಗಸಾಗಿವೆ. ಆರ್‌ ಸಿಬಿ ಟೀಮ್‌ ಅನ್ನು ಬಗೆ ಬಗೆಯಲ್ಲಿ ವರ್ಣಿಸುವುದರ ಜತೆಗೆ ಅದು ನಮ್ಮದು ಎನ್ನುವ ಹೆಮ್ಮೆಯನ್ನು ಮೂಡಿಸುವಂತಿದೆ ಈ ಹಾಡಿನ ಸಾಲುಗಳು. ಹಾಗೆಯೇ ತಂಡಕ್ಕೂ ಕೂಡ ದೊಡ್ಡ ಜೋಷ್‌ ಸಿಗುವುದರಲ್ಲೂ ಅನುಮಾನ ಇಲ್ಲ. ಸದ್ಯಕ್ಕೆ ಈ ಹಾಡು ಐಪಿಎಲ್‌ ಆರಂಭದ ದಿನವಾದ ಇಂದು ( ಶುಕ್ರವಾರ) ಬೇಲಿ ಡಾಲ್‌ ಆದ್ಯಾ ಅವರ ಅಧಿಕೃತ ಯುಟ್ಯೂಬ್‌ ಚಾನೆಲ್‌ ನಲ್ಲಿ ಲಾಂಚ್‌ ಆಗಿದೆ. ಲಾಂಚ್‌ ಆದ ಕೆಲವೇ ಕ್ಷಣಗಳಲ್ಲಿ ಅದಕ್ಕೆ ಸೋಷಲ್‌ ಮೀಡಿಯಾದಲ್ಲಿ ಒಳ್ಳೆಯ ರೆಸ್ಪಾನ್ಸ್‌ ಕೂಡ ಸಿಕ್ಕಿದೆ.

” ಆದ್ಯಾ ಹಾಗೂ ನಾನು ಕ್ರಿಕೆಟ್‌ ಅಭಿಮಾನಿಗಳು. ಕ್ರಿಕೆಟ್‌ ಅಂದ್ರೆ ಕ್ರೇಜ್.‌ ಅದರಲ್ಲೂ ಆರ್‌ ಸಿಬಿ ಅಂದ್ರೆ ನಮ್ಮ ಫೆವರೇಟ್.‌ ಅದು ಗೆಲ್ಲಲ್ಲಿ- ಸೋಲಲಿ ಅದರ ಮೇಲಿನ ಅಭಿಮಾನ ನಮಗೆ ಕಿಂಚಿತ್ತು ಕಮ್ಮಿ ಆಗೋದಿಲ್ಲ. ಅದಕ್ಕೆ ಕಾರಣ ಅದು ನಮ್ದು ಅನ್ನೋದು ಆಭಿಮಾನ. ಅದೇ ಕಾರಣಕ್ಕೆ ಈ ಬಾರಿ ಏನಾದ್ರೂ ಮಾಡ್ಬೇಕು ಅಂತ ಯೋಚಿಸುತ್ತಿದ್ದೇವು. ಆಗ ಹೊಳೆದಿದ್ದು ಈ ಹಾಡಿನ ಕಾನ್ಸೆಪ್ಟ್.‌ ನಾವಿಬ್ರು ಸೇರಿಕೊಂಡೆ ಸಾಹಿತ್ಯ ಜೋಡಿಸಿಕೊಂಡ್ವಿ. ಚೆನ್ನಾಗಿದೆ ಅಂತೆನಿಸಿತು. ಆಮೇಲೆ ಅದಕ್ಕೆ ಸಂಗೀತ ಸಂಯೋಜನೆ ಮಾಡುವ ಕೆಲಸಕ್ಕೆ ಆದ್ಯಾ ಮುಂದಾದಳು. ಹಾಗೆಯೇ ಆಕೆಯೇ ಹಾಡಿದಳು. ಎಲ್ಲವೂ ನಮ್ಮ ಮನೆಯಲ್ಲಿ ನಡೆದವು. ನಮ್‌ ಆಪಾರ್ಟ್‌ ಮೆಂಟ್‌ನವ್ರಿಗೆ ಹಿಡಿಸಿತು. ಇದು ಎಲ್ಲರಿಗೂ ಗೊತ್ತಾಗಲಿ ಅಂತ ಆದ್ಯಾ ಯುಟ್ಯೂಬ್‌ ಚಾನಲ್‌ ನಲ್ಲಿ ಲಾಂಚ್‌ ಮಾಡಿದ್ದೇವೆ ಎನ್ನುತ್ತಾರೆ ಬೇಬಿ ಡಾಲ್‌ ಆದ್ಯಾ ಅವರ ತಾಯಿ ಅಶ್ವಿನಿ. ಇದೇ ರೀತಿ ಕ್ರಿಕೆಟ್‌ ಫ್ಯಾನ್ಸ್‌ ನಡುವೆ ಆರ್‌ ಸಿಬಿ ಕ್ರೇಜ್‌ ಜೋರಾಗುತ್ತಿದೆ. ಟೀ ಶರ್ಟ್‌ ಗಳ ಮೇಲೆ ಆರ್‌ ಸಿಬಿ ರಾರಾಜಿಸುತ್ತಿದೆ. ಅದೊಂದು ಟ್ರೆಂಡ್‌ ಆಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

Related Posts

error: Content is protected !!