ಕಸ್ತೂರಬಾ ಗಾಂಧಿ ಆಗಿ ಹರಿಪ್ರಿಯಾ : ಬರಗೂರು ಕಾಂಬಿನೇಷನ್ ಜತೆಗೆ ಮತ್ತೊಂದು ಸಿನಿಮಾ

ನಟಿ ಹರಿಪ್ರಿಯಾ ಸದ್ಯಕ್ಕೆ ಕನ್ನಡದ ಮೋಸ್ಟ್ ಲಕ್ಕಿಯೆಸ್ಟ್ ಆಕ್ಟ್ರೀಸ್. ಯಾಕಂದ್ರೆ, ಲಾಕ್ ಡೌನ್ ನಂತರದ ಸಂಕಷ್ಟದ ನಡುವೆಯೂ ಸಾಲು ಸಾಲು ಸಿನಿಮಾಗಳಿಗೂ ಅವರೀಗ ನಾಯಕಿ ಆಗುತ್ತಿದ್ದಾರೆ. ಮೊನ್ನೆಯಷ್ಟೇ ಉಪೇಂದ್ರ ಅಭಿನಯದ ಹೊಸ ಚಿತ್ರಕ್ಕೆ ನಾಯಕಿ ಆಗಿ ಆಯ್ಕೆ ಆಗಿದ್ದರು. ಅದರ ಬೆನ್ನಲೇ ಈಗ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಪತ್ನಿ ಕಸ್ತೂರಬಾ ಅವರ ಬಯೋಫಿಕ್ ಕುರಿತು “ತಾಯಿ ಕಸ್ತೂರಬಾ ಗಾಂಧಿ’ ಗೆ ನಾಯಕಿ ಆಗಿದ್ದಾರೆ. ಇದು ನಾಡಿನ ಹೆಸರಾಂತ ಸಾಹಿತಿ ಬರಗೂರು ರಾಮಚಂದ್ರಪ್ಪ ನಿರ್ದೇಶನದ ಚಿತ್ರ.

ಈ ಚಿತ್ರದಲ್ಲಿ ಹರಿಪ್ರಿಯಾ ಅವರು ಕಸ್ತೂರಬಾ ಅವರ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರ ಕಾಂಬಿನೇಷನ್ ನಲ್ಲಿ ಹರಿಪ್ರಿಯಾ ಅವರಿಗೆ ಇದು ಎರಡನೇ ಚಿತ್ರ. ‘ಅಮೃತ ಮತಿ’ ಚಿತ್ರದ ನಂತರ ತಾಯಿ ಕಸ್ತೂರಬಾ ಗಾಂಧಿ ಚಿತ್ರಕ್ಕೆ ಆಯ್ಕೆ ಆಗಿದ್ದಾರೆ. ಚಿತ್ರದಲ್ಲಿ ಹರಿಪ್ರಿಯಾ ಅವರ ಪಾತ್ರಕ್ಕೆ ಮೂರು ಶೇಡ್ಸ್ ಇದೆಯಂತೆ. ಬಾಲ್ಯ, ಯಂಗ್ ಹಾಗೂ ಆನಂತರದ್ದು.

” ನಿಜಕ್ಕೂ ನಾನು ಮೋಸ್ಟ್ ಲಕ್ಕೆ ಅಂತಲೇ ಹೇಳಬಹುದು. ಒಬ್ಬ ನಟಿಯಾಗಿ ನಾನು ಎಂತಹ ಪಾತ್ರಗಳಲ್ಲಿ ಅಭಿನಯಿಸಬೇಕೆಂದು ಬಯಸಿದ್ದೇನೋ ಆ ತರಹದ ಪಾತ್ರಗಳು ನನ್ನನ್ನೇ ಹುಡುಕಿಕೊಂಡು ಬರುತ್ತಿವೆ. ಅದರಲ್ಲಿ ಇದು ಕೂಡ ಒಂದು. ಹಾಗೆ ನೋಡಿದರೆ ಈ ಚಿತ್ರ, ಇಂತಹ ಪಾತ್ರ ಸಿಗುತ್ತೆ ಅಂತ ನಾನು ಕನಸು ಕೂಡ ಕಂಡಿರಲಿಲ್ಲ. ಯಾಕಂದ್ರೆ ಕಸ್ತೂರಬಾ ಅಂದ್ರೆ ಇಡೀ ದೇಶಕ್ಕೆ ಗೊತ್ತು. ದೇಶಕ್ಕೆ ಮಾತ್ರವಲ್ಲ ಜಗತ್ತಿಗೆ ಗೊತ್ತು. ಅಂತಹದೊಂದು ಪಾತ್ರ ನನಗೆ ಸಿಗುತ್ತೆ ಅಂದ್ರೆ ಅದು ಅದೃಷ್ಟವೇ ಹೌದು’ ಎನ್ನುತ್ತಾರೆ ಹರಿಪ್ರಿಯಾ. ಇನ್ನೊಂದು ವಿಶೇಷ ಅಂದ್ರೆ ಈ ಚಿತ್ರ ಅಷ್ಟು ಚಿತ್ರೀಕರಣ ರಿಯಲ್ ಲೋಕೆಷನ್ಸ್ ಗಳಲ್ಲಿಯೇ ನಡೆಯಲಿದೆಯಂತೆ.

Related Posts

error: Content is protected !!