ಜಿ.ನಟರಾಜ ನಿರ್ದೇಶನದ “ವೀಲ್‌ಚೇರ್ʼ ರೋಮಿಯೋ ಚಿತ್ರದ ಮೋಷನ್ ಪೋಸ್ಟರ್ ಲಾಂಚ್ ಆಗಿದೆ. ಚಿತ್ರದಲ್ಲಿರುವ ರಾಮ್ ಚೇತನ್, ರಂಗಾಯಣ ರಘು, ಸುಚೇಂದ್ರ ಪ್ರಸಾದ್, ದಪ್ಪ ಗಿರಿ, ಮಯೂರಿ ಪಾತ್ರಗಳ ಲುಕ್ ಅನ್ನು ಚಿತ್ರ ತಂಡ ಮೋಷನ್ ಪೋಸ್ಟರ್ ನಲ್ಲಿ ರಿವೀಲ್ ಮಾಡಿದೆ. ಹೆಸರೇ ಹೇಳುವ ಹಾಗೆ ಇದೊಂದು ಹಾಸ್ಯ ಪ್ರಧಾನ ಚಿತ್ರ. ಹಾಸ್ಯ ಜತೆಗೆ ಸಮಾಜಕ್ಕೆ ಒಂದೊಳ್ಳೆಯ ಸಂದೇಶ ನೀಡುವ ಕಥಾ ಹಂದರ ಮೂಲಕ ಈ ಚಿತ್ರ ರೆಡಿಯಾಗಿ, ರಿಲೀಸ್ ಗೆ ಸಿದ್ಧತೆ ನಡೆಸಿದೆ. ನಿರ್ದೇಶಕ ನಟರಾಜ್ ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಟಿ. ವೆಂಕಟಾಚಲಯ್ಯ ಹಾಗೂ ಭಾರತಿ ವೆಂಕಟೇಶ್ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹಾಕಿದ್ದು, ಚಿತ್ರ ಅದ್ದೂರಿಯಾಗಿಯೇ ತೆರೆಗೆ ಬಂದಿದೆ.
ಈ ಚಿತ್ರದ ಬಗ್ಗೆ ಕುತೂಹಲ ಇರೋದು ಚಿತ್ರದ ನಿರ್ದೇಶಕ ಜಿ.ನಟರಾಜ್ ಅವರ ನಿರ್ದೇಶನದ ಮೇಲೆ. ಈಗಾಗಲೇ ನಟರಾಜ್ ಹಲವು ಸ್ಟಾರ್ ಚಿತ್ರಗಳಿಗೆವ ಸಂಭಾಷಣೆ ಬರೆದಿದ್ದಾರೆ. ಅವರ ಸಂಭಾಷಣೆಗೆ ಅಪಾರ ಮೆಚ್ಚಗೆಯೂ ಸಿಕ್ಕಿದೆ. ಅದೇ ಅನುಭವದಲ್ಲೀಗ ತಾವೇ ಒಂದು ಕಥೆ, ಚಿತ್ರಕಥೆ ಬರೆದು ಚಿತ್ರ ನಿರ್ದೇಶನ ಮಾಡಿರೋದು ವಿಶೇಷ. ಹಾಗೆಯೇ ಚಿತ್ರಕ್ಕೆ ಬಿ.ಜೆ. ಭರತ್ ಸಂಗೀತ ನೀಡಿದ್ದಾರೆ. ಸಂತೋಷ್ ಛಾಯಾಗ್ರಹಣವಿದೆ.ಕಿರಣ್ ಸಂಕಲನ ಮಾಡಿದ್ದಾರೆ. ಗುರುಪ್ರಸಾದ್ ಸಂಭಾಷಣೆ ಬರೆದಿದ್ದಾರೆ. ಮೋಷನ್ ಪೋಸ್ಟರ್ ಬೆನ್ನಲೇ ಚಿತ್ರ ತಂಡ ಚಿತ್ರದ ಟ್ರೇಲರ್ ಲಾಂಚ್ ಮಾಡಲು ತಯಾರಾಗಿದೆ.ಬಹುತೇಕ ಇದೇ ಗುರುವಾರ ಈ ಚಿತ್ರದ ಟ್ರೇಲರ್ ಲಾಂಚ್ ಆಗುವುದು ಗ್ಯಾರಂಟಿ ಆಗಿದೆ. ಟ್ರೇಲರ್ ಹೇಗಿರುತ್ತೆ ಅನ್ನೋದು ಈಗ ಕುತೂಹಲ.