ಬೆಂಗಳೂರಿನ ಕೆ.ಜಿ. ರಸ್ತೆಯಲ್ಲಿರುವ ಸಂತೋಷ್ ಚಿತ್ರಮಂದಿರದಿಂದ “ರಾಬರ್ಟ್ʼ ಚಿತ್ರ ಎತ್ತಂಗಡಿ ಆಗುತ್ತೆ ಎನ್ನುವ ರೂಮರ್ಸ್ ಗೆ ನಿರ್ಮಾಪಕ ಉಮಾಪತಿ ಎಸ್ ಗೌಡ ಸ್ಪಷ್ಟನೆ ನೀಡಿದ್ದಾರೆ. ಇನ್ನಷ್ಟು ದಿನಗಳ ಕಾಲ ʼರಾಬರ್ಟ್ʼ ಚಿತ್ರ ಸಂತೋಷ್ ಚಿತ್ರಮಂದಿರದಲ್ಲಿ ಇರಲಿದೆ ಅಂತ ಟ್ವೀಟ್ ಮಾಡಿದ್ದಾರೆ. ಇಷ್ಟಕ್ಕೂ ಅವರು ಈ ಹೇಳಿಕೆ ನೀಡುವುದಕ್ಕೆ ಕಾರಣ ಏನು ಗೊತ್ತಾ? ಈ ವಾರ ಪರಭಾಷೆಯ ಕೆಲವು ಸಿನಿಮಾಗಳು ತೆರೆ ಕಾಣುತ್ತಿವೆ. ಅದಕ್ಕಾಗಿ ಸಂತೋಷ್ ಚಿತ್ರಮಂದಿರದಿಂದ ರಾಬರ್ಟ್ ಚಿತ್ರವನ್ನು ಎತ್ತಲಾಗುತ್ತಿದೆ ಎನ್ನುವ ಸುದ್ದಿಗಳಿದ್ದವು. ಈ ಹಿನ್ನೆಲೆಯಲ್ಲಿ ನಿರ್ಮಾಪಕ ಊಮಾಪತಿ ಗೌಡ ಅದಕ್ಕೆ ಸ್ಪಷ್ಟನೆ ನೀಡಿದ್ದಾರೆ.