ವಿಜಯ್ ಮತ್ತು ವಿಜಯ್ ಸೇತುಪತಿ ಅಭಿನಯಿಸಿರೋ “ಮಾಸ್ಟರ್” ಚಿತ್ರ ಹಿಂದಿ ರಿಮೇಕ್‌ಗಾಗಿ ಸಜ್ಜಾಗುತ್ತಿದೆ. ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಅವರನ್ನು ಚಿತ್ರಕ್ಕೆ ಸೇರಿಸಲು ಟೀಮ್ ಮಾಸ್ಟರ್ ಉತ್ಸುಕರಾಗಿದ್ದಾರೆ. ಹಿಂದಿ ಸಿನಿಮಾದಲ್ಲಿ ಮಾಸ್ಟರ್ ಮತ್ತು ಬ್ಯಾಡ್ಡಿ ಭವಾನಿ ಅವರ ಪ್ರಮುಖ ಪಾತ್ರಕ್ಕಾಗಿ “ಮಾಸ್ಟರ್” ತಂಡವು ನಟರನ್ನು ಸಂಪರ್ಕಿಸಲು ಮುಂದಾಗಿದೆ.
ತಮಿಳು ಮೂಲದ ಬಹಳಷ್ಟು ಅಂಶಗಳನ್ನು ಸರಿ ಹೊಂದುವಂತೆ ತಿರುಚಬೇಕಾಗಿರುವುದರಿಂದ “ಮಾಸ್ಟರ್” ತಂಡವು ಹಿಂದಿಯಲ್ಲಿ ಬೌಂಡ್ ಸ್ಕ್ರಿಪ್ಟ್‌ನೊಂದಿಗೆ ತನ್ನ ಬಳಿಗೆ ಬರಲು ಕಾಯುತ್ತಿದೆ.
ಸಲ್ಮಾನ್ ಖಾನ್ ಕೂಡ ಈ ಚಿತ್ರದ ವಿಷಯಗಳನ್ನು ಒಪ್ಪಿಕೊಂಡಿದ್ದು. ತುಂಬಾ ಕಾತರರಾಗಿದ್ದಾರೆ ಅನ್ನೋದಂತು ಸತ್ಯ. ಆದರೆ, ಇದು ಯಾವಾಗ ಶುರುವಾಗುತ್ತೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಕಾದು ನೋಡಬೇಕಿದೆ.