ಸ್ನೇಹರ್ಷಿ ಅಂದ್ರೆ ಇವ್ನೇನು ಮಹರ್ಷಿ ತಮ್ಮನಾ ?-ನವೀನ್ ಸಜ್ಜು‌ ಹಾಡಿಗೆ, ಕಿರಣ್‌ ನಾರಾಯಣ್‌ ಭರ್ಜರಿ ಸ್ಟೆಪ್‌ !

ತೆಲುಗಿನಲ್ಲಿ ʼಮಹರ್ಷಿ ʼ ಅಂತ ಸಿನಿಮಾ ಬಂದಿತ್ತು. ಅದು ಪ್ರಿನ್ಸ್‌ ಮಹೇಶ್‌ ಬಾಬು ಅಭಿನಯದ ಸಿನಿಮಾ. ದೊಡ್ಡ ಸದ್ದು ಮಾಡಿದ ಸಿನಿಮಾ ಅದು. ಕನ್ನಡದಲ್ಲೂ ಡಬ್‌ ಆಗಿ ಬಂತು ಅನ್ನೋದು ಬಹುತೇಕರಿಗೆ ಗೊತ್ತೇ ಇರುತ್ತೆ. ಅಂದ ಹಾಗೆ, ಈಗ ಕನ್ನಡದಲ್ಲೊಂದು “ಸ್ನೇಹರ್ಷಿ ʼಹೆಸರಲ್ಲೊಂದು ಸಿನಿಮಾ ಬರುತ್ತಿದೆ. ಟೈಟಲ್‌ ಕೇಳಿದಾಕ್ಷಣ ಇವ್ನೇನು ಮಹರ್ಷಿ ತಮ್ಮನಾ ಅಂತ ನಿಮಗೆ ಅನಿಸುತ್ತೆ. ಆದ್ರೆ ಹಾಗೆನಿಲ್ಲ. ಅದು ಬೇರೆ, ಇದೇ ಬೇರೆ. ಶ್ರೀ ಲಕ್ಷ್ಮೀ ಬೇಟೆರಾಯ ಲಾಂಛನದಲ್ಲಿ ಹೊಸ ಪ್ರತಿಭೆ ಕಿರಣ್‌ ನಾರಾಯಣ್‌ ನಿರ್ದೇಶಿಸಿ, ನಿರ್ಮಾಣ ಮಾಡಿರೋ ಚಿತ್ರ ಇದು. ವಿಶೇಷ ಅಂದ್ರೆ ಈ ಚಿತ್ರಕ್ಕೆ ಹೀರೋ ಕೂಡ ಅವರೆ.

ಸದ್ಯಕ್ಕೆ ಈ ಚಿತ್ರ ಸಾಂಗ್‌ ಲಾಂಚ್‌ ಮೂಲಕ ಸೌಂಡ್‌ ಮಾಡಿದೆ. ಚಿತ್ರೀಕರಣ ಮುಗಿಸಿ, ಚಿತ್ರ ತಂಡ ರಿಲೀಸ್‌ ಗೆ ಸಿದ್ಧತೆ ನಡೆಸಿದೆ. ಅದರ ಪ್ರಚಾರದ ಮೊದಲ ಹಂತವಾಗಿ ಈಗ ಚಿತ್ರದ ಮೊದಲ ಸಾಂಗ್‌ ಲಾಂಚ್‌ ಮಾಡಿದೆ. ಡಿ ಬಿಟ್ಸ್ ಯೂಟ್ಯೂಬ್ ಚಾನಲ್ ಮೂಲಕ ಈ ಹಾಡು ಹೊರಬಂದಿದೆ. ಗಾಯಕ ನವೀನ್ ಸಜ್ಜು ಹಾಡಿರುವ ಈ ಹಾಡು ಬಿಡುಗಡೆಯಾದ ಕೆಲವೇ ಸಮಯದಲ್ಲಿ ಅಧಿಕ‌ ವೀಕ್ಷಣೆ ಪಡೆದಿದೆ. ನಾಯಕ ಕಿರಣ್‌ ನಾರಾಯಣ್‌ ಈಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದ್ದು, ಅವರ ನೃತ್ಯಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.ಫಸ್ಟ್‌ ಸಾಂಗ್‌ ಲಾಂಚ್‌ ಮೂಲಕ ಮಾಧ್ಯಮ ಮುಂದೆ ಬಂದಿದ್ದ ಚಿತ್ರ ತಂಡ ಚಿತ್ರದ ವಿಶೇಷತೆ ಹೇಳಿಕೊಂಡಿತು.

“ಚಿತ್ರಕ್ಕೆ‌ ನನ್ನ ನಾಗತಿಹಳ್ಳಿ ಪ್ರತಿಭಾಕಥೆ ಬರೆದಿದ್ದಾರೆ. ಅಮ್ಮ ಹೇಳುವ ಕಥೆ ಬೇರೆಯವರಿಗಿಂತ ನನಗೆ ಬೇಗ ಅರ್ಥವಾಗುತ್ತದೆ. ಹಾಗಾಗಿ ಈ ಚಿತ್ರವನ್ನು ನಿರ್ದೇಶಿಸಲು ಮುಂದಾದೆ.‌ ಸಾಮಾಜಿಕ ಕಾಳಜಿಯ ಕಥಾಹಂದರವಿದ್ದು, ನಾನೇ ಚಿತ್ರಕಥೆ ಬರೆದಿದ್ದೇನೆ. ಬರವಣಿಗೆಯಲ್ಲಿ ಅಂದುಕೊಂಡಿದ್ದೆಲ್ಲವೂ ತೆರೆ ಮೇಲೆ ಬಂದಿದೆʼ ಎಂದರು.
ನಾಗತಿಹಳ್ಳಿ ಪ್ರತಿಭಾ ಹಾಗೂ ಕಿರಣ್ ನಾರಾಯಣ್ ಈ ಚಿತ್ರದ ನಿರ್ಮಾಪಕರು. ಚಿತ್ರದಲ್ಲಿ ಸುಧಾ ಬೆಳವಾಡಿ, ನಾಗತಿ ಹಳ್ಳಿ ಜಯಪ್ರಕಾಶ್‌, ಚಕ್ರವರ್ತಿ, ನವೀನ್, ದೇವಕಿ, ರಂಗನಾಥ್, ಮಾರುತಿ, ಸೌಮ್ಯ ಮುಂತಾದವರಿದ್ದಾರೆ. ಅಂದು ಫಸ್ಟ್‌ ಸಾಂಗ್‌ ಲಾಂಚ್‌ ಸಂದರ್ಭದಲ್ಲಿ ನಟಿ ಸುಧಾ ಬೆಳವಾಡಿ ಹಾಜರಿದ್ದು ಮಾತನಾಡಿದರು.”ಸಾಧಾರಣ ಕಥೆಯೊಂದು ಅಸಾಧಾರಣ ರೀತಿಯಲ್ಲಿ ತೆರೆಗೆ ಬಂದಿದೆ.ಕಥೆ ತುಂಬಾ ಚೆನ್ನಾಗಿದೆ. ನಿರ್ದೇಶನದ ಜೊತೆಗೆ ನಾಯಕನಾಗಿಯೂ ಸಿನಿರಂಗ ಪ್ರವೇಶಿಸುತ್ತಿರುವ ಈ ಹುಡುಗನಿಗೆ ಒಳ್ಳೆಯದಾಗಲಿʼಎಂದು ಶುಭ ಕೋರಿದರು.ಚಿತ್ರದಲ್ಲಿ ಮಾಧ್ಯಮ ಪ್ರತಿನಿಧಿ ಪಾತ್ರ ನಿರ್ವಹಿಸಿರುವ ಕಿರಣ್ ನಾರಾಯಣ್ ಅವರ ಸೋದರ ಮಾವ ನಾಗತಿಹಳ್ಳಿ ಜಯಪ್ರಕಾಶ್ ತಮ್ಮ ಪಾತ್ರದ ಬಗ್ಗೆ ವಿವರಿಸಿದರು.ಆಕಾಶ್ ಅಯ್ಯಪ್ಪ “ಸ್ನೇಹರ್ಷಿ” ಗೆ ಸಂಗೀತ ನೀಡಿದ್ದು, ರವಿಕಿಶೋರ್ ಛಾಯಾಗ್ರಹಣ ಹಾಗೂ ಶ್ರೀಕಾಂತ ಅವರ ಸಂಕಲನವಿದೆ.ರಾಜು ಎನ್.ಕೆ ಗೌಡ ಗೀತರಚನೆ ಮಾಡಿದ್ದಾರೆ. ಇಷ್ಟರಲ್ಲಿಯೇ ಚಿತ್ರ ತೆರೆಗೆ ಬರಲಿದೆಯಂತೆ.

Related Posts

error: Content is protected !!