ಕ್ರಿಟಿಕಲ್‌ ಕೀರ್ತನೆಗಳು ಕಥೆಯೊಳಗೆ ಐಪಿಎಲ್‌ ಬೆಟ್ಟಿಂಗ್ ದಂಧೆ- ಟ್ರೇಲರ್‌ಗೆ ಸಿಕ್ಕಿದೆ ಅಪಾರ ಮೆಚ್ಚುಗೆ

“ಕೆಮಿಸ್ಟ್ರಿ ಆಫ್ ಕರಿಯಪ್ಪʼ ಚಿತ್ರದ ಭರ್ಜರಿ ಸಕ್ಸಸ್‌ ನಂತರ ಯುವ ನಿರ್ದೇಶಕ ಕುಮಾರ್‌ ಆಕ್ಷನ್‌ ಕಟ್‌ ಹೇಳಿದ ಚಿತ್ರ ” ಕ್ರಿಟಿಕಲ್‌ ಕೀರ್ತನೆಗಳುʼ. ಅದೀಗ ಚಿತ್ರೀಕರಣ ಮುಗಿಸಿ, ರಿಲೀಸ್‌ ಗೆ ರೆಡಿ ಆಗಿದೆ. ಸದ್ಯಕ್ಕೀಗ ಟ್ರೇಲರ್‌ ಮೂಲಕ ಸಖತ್‌ ಸೌಂಡ್‌ ಮಾಡುತ್ತಿದೆ. ಕೆಮಿಸ್ಟ್ರಿ ಕರಿಯಪ್ಪ ಚಿತ್ರ ನೋಡಿದವರಿಗೆ ನಿರ್ದೇಶಕ ಕುಮಾರ್‌ ಸಿನಿಮಾ ಮೇಕಿಂಗ್‌ ಶೈಲಿ ಗೊತ್ತಿದ್ದೇ ಇರುತ್ತೆ. ಕಾಮಿಡಿ ಮೂಲಕವೇ ಒಂದೊಳ್ಳೆಯ ಸಂದೇಶ ನೀಡುವ ಪ್ರಯತ್ನ ಕುಮಾರ್‌ ಸಿನಿಮಾ ಮೇಕಿಂಗ್‌ ಶೈಲಿಯಲ್ಲಿರುತ್ತದೆ. ಖಂಡಿತಾ ಇದು ಕೂಡ ಅದೇ ಜಾನರ್‌ ನ ಸಿನಿಮಾ ಅನ್ನೋದ್ರಲ್ಲಿ ನೋ ಡೌಟು. ಹಾಗಂತ “ಕೆಮಿಸ್ಟ್ರಿ ಕರಿಯಪ್ಪʼ ಚಿತ್ರದ ಮುಂದುವರೆದ ಭಾಗ ಇದಲ್ಲ. ಇದರ ಕಥಾ ಹಂದರವೇ ಬೇರೆ. ಐಪಿಎಲ್‌ ಬೆಟ್ಟಿಂಗ್‌ನ ಅವಾಂತರಗಳ ಸುತ್ತಲ ಕಥೆಯೇ “ಕ್ರಿಟಿಕಲ್‌ ಕೀರ್ತನೆಗಳುʼ ಚಿತ್ರ . ಇದರ ಒಂದಷ್ಟು ಹಿಟ್ಸ್‌ ಕೊಡುವ ಪ್ರಯತ್ನದಲ್ಲಿ ಚಿತ್ರದ ಟ್ರೇಲರ್‌ ಹೊರ ತಂದಿದ್ದಾರೆ ನಿರ್ದೇಶಕ ಕುಮಾರ್.

‌ಟ್ರೇಲರ್‌ ಸೋಷಲ್‌ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿದೆ. ಈಗಾಗಲೇ ನಾಲ್ಕುವರೆ ಲಕ್ಷ ವೀಕ್ಷಣೆ ಪಡೆದಿದೆ. ಸಿನಿಮಾ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಥ್ರಿಲ್‌ ನೀಡುತ್ತಿದೆ. ಈ ನಡುವೆಯೇ ಸ್ಯಾಂಡಲ್‌ ವುಡ್‌ ಸ್ಟಾರ್‌ ಗಳು ಕೂಡ ಈ ಟ್ರೇಲರ್‌ ಮೆಚ್ಚಿಕೊಂಡು ಮಾತನಾಡಿದ್ದಾರೆ. ಶರಣ್‌, ವಸಿಷ್ಠ ಸಿಂಹ, ಶ್ರೀನಗರ ಕಿಟ್ಟಿ, ಸಂಜನಾ ಆನಂದ್‌, ರಿಷಿ, ಕುರಿ ಪ್ರತಾಪ್‌, ಸಿಂಗರ್‌ ಚಂದನ್‌ ಶೆಟ್ಟಿ, ಆಶಿಕಾ ರಂಗನಾಥ್‌, ರಾಜೇಶ್‌ ಬಿ. ಶೆಟ್ಟಿ , ರಿಷಬ್‌ ಶೆಟ್ಟಿ, ಅಜೇಯ್‌ ರಾವ್‌ , ಪ್ರಜ್ವಲ್‌ ದೇವರಾಜ್‌ ಸೇರಿದಂತೆ ದೊಡ್ಡ ತಂಡವೇ ಚಿತ್ರದ ಟ್ರೇಲರ್‌ ನೋಡಿ, ಮೆಚ್ಚುಗೆ ಹೇಳಿದೆ. ಚಿತ್ರದ ಟೈಟಲ್‌ ಜತೆಗೆ ಕಥೆ ಎಳೆ ಕೂಡ ಕುತೂಹಲ ಹುಟ್ಟಿಸುತ್ತದೆ ಅಂತ ಸ್ಟಾರ್‌ ಗಳು ತಮ್ಮ ಮಾತು ಹಂಚಿಕೊಂಡಿದ್ದು ವಿಶೇಷ.

ಈ ಚಿತ್ರದ ಕಥೆ ಐಪಿಎಲ್‌ ಬೆಟ್ಟಿಂಗ್‌ ಧಂದೆಗೆ ಕುರಿತದ್ದು. ಹಾಗಂತ ಅದೇನು ಕಲ್ಪನೆಯ ಕಥೆಯಲ್ಲ. ಕುಮಾರ್‌ ಅವರೇ ಕಂಡು ಕೇಳಿದ ಘಟನೆಗಳನ್ನೇ ಇಲ್ಲಿ ಚಿತ್ರದ ಕಥೆಯಾಗಿಸಿದ್ದಾರಂತೆ. ” ಕ್ರಿಕೆಟ್‌ ಒಂದು ಕಾಲದಲ್ಲಿ ಆಟವಾಗಿ ಮಾತ್ರ ಇತ್ತು, ಆದರೆ ಇವತ್ತು ಅದು ಬೆಟ್ಟಿಂಗ್‌ ಧಂದೆಯಾಗಿದೆ. ಅದರಲ್ಲೂ ಐಪಿಎಲ್‌ ಮ್ಯಾಚ್‌ ಶುರುವಾದ್ರೆ ಲೆಕ್ಕವಿಲ್ಲದಷ್ಟು ಕುಟುಂಬಗಳು ಬೀದಿಗೆ ಬೀಳುತ್ತವೆ. ನನ್ನ ಪ್ರಕಾರ ಪ್ರತಿ ವರ್ಷ ದೇಶದಲ್ಲಿ ೨೦೦ ಮಂದಿ ಈ ಧಂದೆಯ ಕಾರಣಕ್ಕಾಗಿಯೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕಷ್ಟು ಮಂದಿ ನನ್ನ ಫ್ರೇಂಡ್ಸ್‌ ಕೂಡ ಇದರಲ್ಲಿ ತುಂಬಾ ನಷ್ಟ ಅನುಭವಿಸಿದ್ದಾರೆ. ಅವೆಲ್ಲ ಘಟನೆಗಳನ್ನು ಹೆಕ್ಕಿಕೊಂಡು ಈ ಕಥೆ ಬರೆದಿದ್ದೇನೆʼ ಅಂತ ನಿರ್ದೇಶಕ ಕುಮಾರ್‌, ಟ್ರೇಲರ್‌ ಸಕ್ಸಸ್ವ ಹಿನ್ನೆಲೆಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಚಿತ್ರದ ತಾರಾಗಣದಲ್ಲಿ ಕೆಮಿಸ್ಟ್ರಿ ಕರಿಯಪ್ಪ ಚಿತ್ರದಲ್ಲಿದ್ದ ಬಹುತೇಕ ಕಲಾವಿದರೇ ಇಲ್ಲೂ ಇದ್ದಾರೆ. ತಬಲ ನಾಣಿ, ಸುಚೇಂದ್ರ ಪ್ರಸಾದ್‌, ರಾಜೇಶ್‌ ನಟರಂಗ, ಅರುಣಾ ಬಾಲರಾಜ್‌, ಅಪೂರ್ವ ಭಾರದ್ವಾಜ್‌, ದೀಪಾ ಜಗದೀಶ್, ಡ್ರಾಮಾ ಜ್ಯೂನಿಯರ್ಸ್‌ ಖ್ಯಾತಿಯ ಪುಟ್ಟರಾಜು, ಮಹೇಂದ್ರ ಪ್ರಸಾದ್‌, ಯಶಸ್‌ ಅಭಿ ಮತ್ತಿತರರು ಚಿತ್ರದಲ್ಲಿದ್ದಾರೆ. ಚಿತ್ರದ ಟ್ರೇಲರ್‌ ನಲ್ಲಿ ಇವರೆಲ್ಲ ಕಾಣಿಸಿಕೊಂಡಿದ್ದಾರೆ. ನ್ಯಾಯಾ ಧೀಶರಾಗಿ ನಟ ಸುಚೇಂದ್ರ ಪ್ರಸಾದ್‌, ವಕೀಲರಾಗಿ ತಬಲ ನಾಣಿ ಅವರ ಕಾಂಬಿನೇಷನ್‌ ಅದ್ಬುತವಾಗಿ ಕಾಣಿಸಿಕೊಂಡಿದೆ.

ಟ್ರೇಲರ್‌ ಶುರುವೇ ಥ್ರಿಲ್‌ ನೀಡುತ್ತದೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು ವೀರ್‌ ಸಮರ್ಥ ಸಂಗೀತ ನೀಡಿದ್ದಾರೆ. ಅವರ ಇದೊಂದು ದೊಡ್ಡ ಕ್ಯಾನ್ವಾಸ್‌ ಸಿನಿಮಾ. ಒಂದೊಳ್ಳೆಯ ಸಂದೇಶ ಹೊತ್ತು ಬರುತ್ತಿದೆ ಎನ್ನುತ್ತಾರೆ ವೀರ್‌ ಸಮರ್ಥ್.‌ ಟ್ರೇಲರ್‌ ಸಕ್ಸಸ್‌ ಮೀಟ್‌ ನಲ್ಲಿ ಎಲ್ಲರೂ ಹಾಜರಿದ್ದು ಚಿತ್ರದ ಕುರಿತು ಮಾತನಾಡಿದರು.

Related Posts

error: Content is protected !!