ಅಲಿ ಕ್ವಿಲಿ ಮಿರ್ಜಾ, ಸದ್ಯಕ್ಕೆ ಬಾಲಿವುಡ್ನಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿರುವ ಹೆಸರು. ಗಾಯಕ ಕಮ್ ನಟ. ಹಿಂದಿ ಬಿಗ್ ಬಾಸ್ ನ ಮಾಜಿ ಕಂಟೆಸ್ಟೆಂಟ್ ಕೂಡ. ಈಗ ನಟನೆಯ ಜತೆಗೆ ಸಿಂಗರ್ ಆಗಿಯೇ ಹೆಚ್ಚು ಸದ್ದು ಮಾಡುತ್ತಿರುವ ಅಲಿ ಕ್ವಿಲಿ ಕನ್ನಡಕ್ಕೂ ಬರುತ್ತಿದ್ದಾರೆ. ʼಲವ್ಗುರುʼ ಖ್ಯಾತಿಯ ನಿರ್ದೇಶಕ ಪ್ರಶಾಂತ್ರಾಜ್ ನಿರ್ದೇಶನದ ಹೊಸ ಸಿನಿಮಾದಲ್ಲಿ ಅಲಿ ಕ್ವಿಲಿ ಮಿರ್ಜಾ ಅಭಿನಯಿಸುತ್ತಿದ್ದಾರೆಂಬ ಸುದ್ದಿಯಿದೆ. ಸದ್ಯ ಕ್ಕೆ ಈ ಸಿನಿಮಾದ ಕುರಿತು ಚಿತ್ರ ತಂಡದಿಂದ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಆದರೆ ಬಾಲಿವುಡ್ ಗಾಯಕ ಅಲಿ ಕ್ವಿಲಿ ನಟರಾಗಿ ಕನ್ನಡಕ್ಕೆ ಬರುತ್ತಿರುವುದು ನೂರಕ್ಕೆ ನೂರಷ್ಟು ಸತ್ಯ. ಅದರಲ್ಲೂ ವಿಶೇಷ ಅಂದ್ರೆ ವಿಲನ್ ಅಗಿ ಅವರು ಕನ್ನಡಕ್ಕೆ ಎಂಟ್ರಿ ಆಗುತ್ತಿದ್ದಾರೆನ್ನುವುದು ಇನ್ನು ವಿಶೇಷ.
ಬಾಲಿವುಡ್ಮಟ್ಟಿಗೆ ಅಲಿ ಕ್ವಿಲಿ ಸಿಕ್ಕಾಪಟ್ಟೆ ಫೇಮಸ್. ಗಾಯಕರಾಗಿ, ಜತೆಗೆ ನಟರಾಗಿಯೂ ಹೆಸರು ಮಾಡಿದವರು. ಅದಕ್ಕೂ ಮುನ್ನ ಹಿಂದಿಯ ಬಿಗ್ಬಾಸ್ನಲ್ಲೂ ಸಾಕಷ್ಟು ಹೆಸರು ಮಾಡಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಅಲಿ ಸಿಂಗರ್ ಆಗಿಯೇ ಖ್ಯಾತಿ. ಮಿಕ್ಸಿಂಗ್ ಜೋಡಿಯಾಗಿ “ಇಸ್ಕಂʼ ವಿಡಿಯೋ ಆಲ್ಬಂ ಸಾಂಗ್ ಹೊರ ತಂದಿದ್ದಾರೆ. ಹಾಗೆಯೇ ʼಮಿರ್ಜಾಪುರ 2ʼ ವೆಬ್ ಸೀರಿಸ್ ನಲ್ಲಿ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಆಕ್ಟಿಂಗ್ ಹಾಗೂ ಸಿಂಗಿಂಗ್ ಎರಡರಲ್ಲೂ ಒಟ್ಟಿಗೆ ತೊಡಗಿಸಿಕೊಂಡಿರುವ ಅಲಿ ಕ್ವಿಲಿ, ಈಗ ಸೌತ್ ಇಂಡಸ್ಟ್ರಿ ಕಡೆ ಮುಖ ಮಾಡಿದ್ದಾರೆ. ಇದೇ ಉದ್ದೇಶದ ಹಿನ್ನೆಲೆಯಲ್ಲಿ ಕಳೆದ ನಾಲ್ಕೈದು ದಿನಗಳ ಹಿಂದೆ ಅಲಿ ಕ್ವಿಲಿ ಮಿರ್ಜಾ, ಬೆಂಗಳೂರಿಗೆ ಬಂದಿದ್ದರು. ಆ ಸಂದರ್ಭದಲ್ಲಿ ಸಿನಿ ಲಹರಿ ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹಲವು ವಿಚಾರಗಳನ್ನು ಹಂಚಿಕೊಂಡರು.
ಹಲೋ ಬೆಂಗಳೂರು ಅಂತಲೇ ಮಾತು ಶುರು ಮಾಡಿದ ಅಲಿ, ಬೆಂಗಳೂರು ಅಂದ್ರೆ ನಂಗೆ ತುಂಬಾ. ಅನೇಕ ಸಲ ಇಲ್ಲಿಗೆ ಬಂದಿದ್ದೇನೆ. ಅಫಿಸಿಯಲಿ ಅಂತ ಬಂದಿದ್ದು ಇದೇ ಮೊದಲು. ಒಂದು ಸಿನಿಮಾ ಉದ್ದೇಶಕ್ಕೆ ಇಲ್ಲಿಗೆ ಬಂದಿದ್ದೇನೆ. ಶೀಘ್ರದಲ್ಲಿಯೇ ಅದರ ವಿಚಾರ ರಿವೀಲ್ ಆಗಲಿದೆ ಅಂತ ಪರಿಚಯಿಸಿಕೊಂಡರು. ಕರ್ನಾಟಕ ಹಾಗೂ ಕನ್ನಡ ಇಂಡಸ್ಟ್ರಿ ಬಗ್ಗೆ ಮಾತನಾಡಿದ ಅಲಿ, ರಾಜ್ ಕುಮಾರ್ ನಂಗೊಂತ್ತು. ಅವರು ಹಾಡಿದ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು.. ಹಾಡು ನಂಗಿಷ್ಟ. ಹಾಗೆಯೇ ಎಸ್ ಪಿ ಬಿ ಕೂಡ ತುಂಬಾ ಇಷ್ಟ. ಇಬ್ಬರು ಈಗಿಲ್ಲ ಅನ್ನೋದು ತುಂಬಾ ನೋವಿನ ಸಂಗತಿ ಅಂತ ದುಃಖ ವ್ಯಕ್ತಪಡಿಸಿದರು ಅಲಿ ಕ್ವಿಲಿ.
ಸದ್ಯದ ಸ್ಯಾಂಡಲ್ ವುಡ್ ಸ್ಟಾರ್ ಗಳಲ್ಲಿ ಸುದೀಪ್ ಅಂದ್ರೆ ಅಲಿಗೆ ತುಂಬಾ ಇಷ್ಟ. ಅವರ ಬಿಗ್ ಫ್ಯಾನಂತೆ. ಆ ವಿಚಾರವನ್ನು ಸಂದರ್ಶನದಲ್ಲಿ ರಿವೀಲ್ ಮಾಡಿದರು. ” ನಾನು ಸುದೀಪ್ ಅವರ ಬಿಗ್ ಫ್ಯಾನ್. ಹಿಂದಿಗೆ ಡಬ್ ಆಗಿ ಬಂದ ಅವರ ಸಾಕಷ್ಟು ಸಿನಿಮಾಗಳನ್ನು ನೋಡಿದ್ದೇನೆ. ಸ್ಪೆಷಲ್ ಅಂದ್ರೆ ಅವರ ಈಗ ಸಿನಿಮಾ ನನ್ನ ಫೆವರೇಟ್ ಮೂವೀʼ ಅಂದ್ರು ಅಲಿ ಕ್ವಿಲಿ ಮಿರ್ಜಾ.
ಬಾಲಿವುಡ್ ಮಟ್ಟಿಗೆ ಮಿರ್ಜಾ ಸಿಕ್ಕಾಪಟ್ಟೆ ಬೇಡಿಕೆ ಇರುವ ನಟ ಹಾಗೂ ಸಿಂಗರ್. ಇಷ್ಟಾಗಿಯೂ ಕಿಂಚಿತ್ತು ಅಹಂಕಾರ ಇಲ್ಲ ಅವರಿಗೆ ಹೆಚ್ಚು ಕಡಿಮೆ, ಅರ್ಧ ಗಂಟೆಗೂ ಹೆಚ್ಚು ಕಾಲ ಸಂದರ್ಶನದಲ್ಲಿ ಕಾಮಿಡಿ ಲವಲವಿಕೆಯಿಂದಲೇ ಮಾತನಾಡಿದರು. ಹಾಡುತ್ತಾ, ಮಿಮಿಕ್ರಿ ಮಾಡುತ್ತಾ, ನಗುತ್ತಾ, ಡೈಲಾಗ್ ಹೊಡೆಯುತ್ತಾ ಮಾತನಾಡಿದರು. ” ನಾನು ಕನ್ನಡಕ್ಕೆ ಬರುತ್ತಿದ್ದೇನೆ, ಖುಷಿಆಗುತ್ತಿದೆ. ನಿಮ್ಮೆಲ್ಲರ ಬೆಂಬಲ ಬೇಕಿದೆʼ ಅಂತ ಖಡಕ್ ವಿಲನ್ ಲುಕ್ ಕೊಟ್ಟರು.