ಹೊಸಬ್ರು ಯಾರೇ ಬರ್ಲಿ, ಅವ್ರೀಗೆ ಸಂಪೋರ್ಟ್ ಮಾಡ್ಬೇಕು ಅನ್ನೋದು ನನ್ ಸೂತ್ರ. ಆದ್ರೆ ಇದು ಕೆಲವರಿಗೆ ಹಿಡಿಸಲ್ಲ. ಅವ್ರೀಗೆ ಒಂಥರ ಬೇಸರ. ಯಾಕೆ ನೀನು ಎಲ್ರಿಗೂ ಸಪೋರ್ಟ್ ಮಾಡ್ತೀಯಾ ಅಂತ ಕೇಳ್ತಾರೆ. ಅವ್ರ ಮಾತಲ್ಲಿ ಒಂಥರ ವ್ಯಂಗ್ಯ ಇರುತ್ತೆ. ಆದ್ರೆ ಅದಕ್ಕೆ ನಾನು ಎಂದಿಗೂ ತಲೆ ಕಡಿಸಿಕೊಂಡಿಲ್ಲ. ನಾನೇನ್ ಅನ್ಕೊಳ್ತೇನೋ ಅದ್ನ ಮಾಡೋಣ ಅನ್ನೋದು ನನ್ ಥಿಯೇರಿ…
ನಟ ನೆನಪಿರಲಿ ಪ್ರೇಮ್, ಈ ಮಾತುಗಳನ್ನು ತುಂಬಾ ನಿಷ್ಟುರವಾಗಿಯೇ ಹೇಳಿದರು. ತಮ್ಮ ಮನಸ್ಸಿನಲ್ಲಿ ಏನೀತೊ ಅದನ್ನು ಹಿಂದು- ಮುಂದು ನೋಡದಯೇ ಹೊರ ಹಾಕಿದರು. ರಾಷ್ಟ್ರ ಪ್ರಶಸ್ತಿಗೆ ಪಾತ್ರವಾದ “ಅಕ್ಷಿʼ ಚಿತ್ರ ತಂಡ ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಪ್ರೇಮ್ ಭಾಗವಹಿಸಿದ್ದರು. ಅದಕ್ಕೆ ಕಾರಣ ನಿರ್ಮಾಪಕ ಕಲಾ ದೇಗುಲ ಶ್ರೀನಿವಾಸ್. ಪ್ರೇಮ್ ಹಾಗೂ ಶ್ರೀನಿವಾಸ್ ಇಬ್ಬರು ಹಲವು ವರ್ಷಗಳ ಸ್ನೇಹಿತರು. ಹಾಗಾಗಿಯೇ ʼಅಕ್ಷಿʼ ಗೆ ರಾಷ್ಟ್ರ ಪ್ರಶಸ್ತಿ ಬಂದ ವಿಚಾರ ಗೋತ್ತಾಗುತ್ತಿದ್ದಂತೆಯೇ ಆ ಚಿತ್ರ ತಂಡವನ್ನು ತಮ್ಮ ಮನೆಗೆ ಅಹ್ವಾನಿಸಿ, ಅಭಿನಂದನೆ ಹೇಳಿದ್ದರಂತೆ ಪ್ರೇಮ್. ಆದರೂ ಅವತ್ತು ಮಾಧ್ಯಮದ ಮುಂದೆ ಚಿತ್ರ ತಂಡವನ್ನು ಅಭಿನಂದಿಸಿ ಮಾತನಾ ಡಿದರು.
” ಎಲ್ಲರೂ ಒಂದು ಸಮಯದಲ್ಲಿ ಇಲ್ಲಿಗೆ ಹೊಸಬರೇ. ನಾನೂ ಕೂಡ ಒಂದ್ ಟೈಮ್ ನಲ್ಲಿ ಇಲ್ಲಿಗೆ ಹೊಸಬನೇ ಅಗಿದ್ದೆ. ಆಗ ಸಾಕಷ್ಟು ಜನ ಇಲ್ಲಿ ನನ್ನನ್ನು ಬೆಂಬಲಿಸಿ, ಪ್ರೋತ್ಸಾಹಿಸಿದ್ದರ ಫಲವಾಗಿ ನಾನಿಲ್ಲಿ ನಟನಾಗಿ ಗುರುತಿಸಿಕೊಳ್ಳುವಂತಾಯಿತು. ಈಗ ಬರುವ ಹೊಸಬರು ಕೂಡ ಅಷ್ಟೆಯೇ. ಅವರಿಗೂ ಒಂದು ಬೆಂಬಲ, ಪ್ರೋತ್ಸಾಹ ಸಿಕ್ಕರೆ, ಅವರು ಕೂಡ ತಾವಂದು ಕೊಂಡಿದ್ದನ್ನು ಸಾಧಿಸಲು ಸಾಧ್ಯ. ಶ್ರೀನಿವಾಸ್, ಬೆಂಬಲ ಕೊಟ್ಟು ಸಿನಿಮಾ ಮಾಡದಿದ್ದರೆ ಮನೋಜ್ ಕುಮಾರ್ ಎಂಬ ಯುವಕ ಇವತ್ತು ರಾಷ್ಟ್ರ ಪ್ರಶಸ್ತಿಗೆ ಪಾತ್ರವಾಗಿ ಇಷ್ಟು ಸುದ್ದಿಯಲ್ಲಿ ಇರುತ್ತಿರಲಿಲ್ಲ. ಇವತ್ತು ಇವರನ್ನು ಇನ್ನಷ್ಟು ಪ್ರೋತ್ಸಾಹಿಸಿ, ಬೆಂಬಲಿಸಿದರೆ ಮುಂದೆ ಮತ್ತಷ್ಟು ಪ್ರಶಸ್ತಿ ಸಿನಿಮಾಗಳನ್ನು ಮಾಡಬಹುದುʼ ಅಂತ ಪ್ರೇಮ್ ಹೇಳಿದರು.
ʼ ಹೊಸಬರು ಯಾರೇ ಬರಲಿ ಅವರಿಗೆ ನಮ್ಮಿಂದಾದ ಬೆಂಬಲ, ಪ್ರೋತ್ಸಾಹ ನೀಡಬೇಕೆನ್ನುವುದು ನನ್ನ ಥಿಯೇರಿ. ಆದ್ರೆ ಇದು ಕೆಲವರಿಗೆ ಹಿಡಿಸಲ್ಲ. ಯಾಕೆ ಎಲ್ಲರಿಗೂ ನೀವು ಬೆಂಬಲ ನೀಡಿತ್ತೀರಿ ಅಂತ ಕೆಲವರು ಕೇಳುತ್ತಾರೆ. ಆದ್ರೂ ನಾನು ಅವರ ಮಾತಿಗೆ ತಲೆ ಕೆಡಿಸಿಕೊಳ್ಳೋದಿಲ್ಲ. ಇದು ಚಿತ್ರ ರಂಗಕ್ಕೆ ಬಂದ ಹೊಸಬರಿಗೆ ನನ್ನಿಂದಾದ ಸಹಾಯ ಅಂತ ಹೊಸಬರ ಚಿತ್ರಗಳ ಟೀಸರ್, ಟ್ರೇಲರ್ ಲಾಂಚ್ ಗೆ ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡುತ್ತೇನೆ. ಮುಂದೆಯೂ ಮಾಡುತ್ತೇನೆʼ ಎಂದರು ಪ್ರೇಮ್. ಇನ್ನು ನಟ ಪ್ರೇಮ್ ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ. ಇಫ್ಟಾ ಬೀದಿ ನಾಟಕ ತಂಡದಿಂದ ಸಿನಿಮಾ ರಂಗಕ್ಕೆ ಬಣದವರು. ಈಗಲೂ ಒಂದಷ್ಟು ಬದ್ಧತೆ ಉಳಿಸಿಕೊಂಡೇ ಬಣ್ಣ ಹಚ್ಚುತ್ತಿದ್ದಾರೆ. ಸ್ಟಾರ್ ಅಂತ ಯಾವುದೇ ಹಮ್ಮು-ಬಿಮ್ಮು ಇಲ್ಲದೆ ಎಲ್ಲರನ್ನು ಒಳಗೊಳ್ಳುವ ಅವರ ಸ್ನೇಹಪರ ನಿಲುವೇ ವಿಶೇಷ.