ಯುವ ನಿರ್ದೇಶಕ ದೇವರಾಜ್ ” ತಾಜ್‌ಮಹಲ್ 2ʼ ಕಟ್ಟಿ ನಿಲ್ಲಿಸಿದ್ದಾರೆ. ಈ ಹಿಂದೆ ಇವರು ʼ ಡೇಂಜರ್ ಜೋನ್ʼ , ʼನಿಶ್ಯಬ್ದ -2ʼ ಹಾಗೂ ʼಅನೂಷ್ಕʼ ಹೆಸರಿನ ಚಿತ್ರ ನಿರ್ದೇಶಿಸಿದ್ದರು. ಅದಕ್ಕೂ ಮೊದಲು ಚಿತ್ರರಂಗದಲ್ಲಿ ಮೇಕಪ್ ಮ್ಯಾನ್ ಆಗಿ ಕೆಲಸ ಮಾಡಿದ್ದರು. ಅದೇ ಅನುಭದಲ್ಲಿ ಆಕ್ಷನ್ ಕಟ್ ಹೇಳುವ ಸಾಹಸಕ್ಕೆ ಕೈ ಹಾಕಿ, ಅದರಲ್ಲೂ ಸಕ್ಸಸ್ ಕಂಡರು. ಅಲ್ಲಿಂದೀಗ ಅವರು ಹೀರೋ ಆಗಿ ಪರಿಚಿಯಿಸಿಕೊ ಳ್ಳುತ್ತಿರುವ ಹೊಸ ಸಾಹಸಕ್ಕೆ ʼ ತಾಜ್ ಮಹಲ್ 2ʼ ಅಂತ ಹೆಸರಿಟ್ಟು ಕೊಂಡಿದ್ದಾರೆ. ಅಂದಹಾಗೆ ಅವರೇ ನಿರ್ಮಾಣ, ನಿರ್ದೇಶನದೊಂದಿಗೆ ಹೀರೋ ಆಗಿ ಅಭಿನಯಿಸಿರುವ ಚಿತ್ರ ʼತಾಜ್ ಮಹಲ್ 2ʼ.
ಕಳೆದ ವರ್ಷವೇ ಈ ಚಿತ್ರ ಸೆಟ್ಟೇರಿ, ಚಿತ್ರೀಕರಣ ಆರಂಭಿಸಿತ್ತು. ಅದೀಗ ಚಿತ್ರೀಕರಣ ಮುಗಿಸಿಕೊಂಡು ರಿಲೀಸ್ ಗೆ ರೆಡಿಯಾಗಿದೆ.ಬೆಂಗಳೂರಿನ ಹೆಚ್‌ಎಂಟಿ ಫ್ಯಾಕ್ಟರಿ ಆವರಣದಲ್ಲಿ ನಿರ್ಮಿಸಿದ ಅದ್ದೂರಿ ಸೆಟ್‌ನಲ್ಲಿ ಇತ್ತೀಚೆಗೆ ಹಾಡು ಹಾಗೂ ಆಕ್ಷನ್ ಸನ್ನಿವೇಶಗಳ ಚಿತ್ರೀಕರಣದೊಂದಿಗೆ ಚಿತ್ರತಂಡ ಕುಂಬಳ ಕಾಯಿ ಒಡೆದಿದೆ. ಚಿತ್ರದ ಶೀರ್ಷಿಕೆಯೇ ಹೇಳುವ ಹಾಗೆ ಇದೊಂದು ಪಕ್ಕಾ ಲವ್ ಕಮ್ ಆಕ್ಷನ್ ಸಿನಿಮಾ. ಹಾಗೆಯೇ ಎಮೋಷನ್ ಕಥಾ ಹಂದರದ ಚಿತ್ರವೂ ಹೌದು. ನಿರ್ದೇಶಕ ಕಮ್ ಚಿತ್ರದ ನಾಯಕ ನಟ ದೇವರಾಜ್ ಕುಮಾರ್ ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರೀಕರಣ ಮುಕ್ತಾಯದ ಹಿನ್ನೆಲೆಯಲ್ಲಿ ಇತ್ತೀಚೆಗೆ ಮಾಧ್ಯಮದ ಮುಂದೆ ಬಂದಿದ್ದ ಚಿತ್ರ ತಂಡ ಚಿತ್ರೀಕರಣದ ಅನುಭವದ ಜತೆಗೆ ಮುಂದಿನ ಯೋಜನೆಗಳನ್ನು ಹೇಳಿಕೊಂಡಿತು.
” ಹೆಚ್ಚು ಕಡಿಮೆ ಒಂದು ಒಂದೂವರೆ ವರ್ಷ ಆಯಿತು. ಚಿತ್ರೀಕರಣ ಶುರುವಾಗಿ, ಎರಡು ವರ್ಷಗಳೇ ಆದವು. ಕೊರೋನಾ ಕಾರಣದಿಂದ ಸಿನಿಮಾ ಚಟುವಟಿಕೆ ಎಲ್ಲವೂ ಸ್ತಬ್ದವಾಗಿದ್ದವು. ಮತ್ತೆ ಚುಟುವಟಿಕೆ ಶುರುವಾದ ನಂತರ ಚಿತ್ರೀಕರಣ ಶುರುವಾಯಿತು. ಇತ್ತೀಚೆಗಷ್ಟೇ ಬೆಂಗೂರಿನ ಎಚ್ ಎಂಟಿ ಫ್ಯಾಕ್ಟರಿ ಆವರಣದಲ್ಲಿ ಹಾಡು ಹಾಗೂ ಸಾಹಸ ಸನ್ನಿವೇಶದ ಚಿತ್ರೀಕರಣ ಮುಗಿಸಿಕೊಳ್ಳುವ ಮೂಲಕ ಕುಂಬಳ ಕಾಯಿ ಒಡೆದಿದ್ದೇವೆ. ಸದ್ಯಕ್ಕೆ ಪೋಸ್ಟ್ ಪ್ರೊಡಕ್ಷನ್ ವರ್ಕ್ ಶುರುವಾಗಿದೆ. ಮೇ ತಿಂಗಳಲ್ಲಿ ಫಸ್ಟ್ ಲುಕ್ ಟೀಸರ್ ಲಾಂಚ್ ಮಾಡುವ ಯೋಚನೆ ಇದೆ. ಆನಂತರ ಅಂದ್ರೆ ಸೆಪ್ಟೆಂಬರ್ ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರಲು ಪ್ಲಾನ್ ಹಾಕಿಕೊಂಡಿದ್ದೇವೆʼ ಎಂದರು ನಿರ್ದೇಶಕ ಕಮ್ ನಾಯಕ ನಟ ದೇವರಾಜ್ ಕುಮಾರ್.
ಮುಂಬೈ ಮೂಲದ ಬೆಡಗಿ ಸಮೃದ್ಧಿ ಶುಕ್ಲ ಚಿತ್ರದ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಚಿತ್ರಕ್ಕೆ ತಮ್ಮನ್ನು ನಾಯಕಿ ಆಗಿ ಆಯ್ಕೆ ಮಾಡಿಕೊಂಡಿದ್ದಕ್ಕಾಗಿ ಚಿತ್ರ ತಂಡಕ್ಕೆ ಧನ್ಯವಾದ ಹೇಳಿದರು. ಹಾಗೆಯೇ ಚಿತ್ರೀಕರಣದ ಅನುಭವ ಚೆನ್ನಾಗಿತ್ತು. ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಅನುಭವ ಸಿಗುವ ಭರವಸೆ ಇದೆ ಎಂದರು. ವಿಕ್ಟರಿ ವಾಸು, ಕಾಕ್ರೋಚ್ ಸುಧೀ ಸೇರಿದಂತೆ ಚಿತ್ರದಲ್ಲಿ ದೊಡ್ಡ ತಾರಾಗಣವೇ ಇದೆ. ವಾಸು ಹಾಗೂ ಕಾಕ್ರೋಚ್ ಸುಧೀ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದು ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. ಈ ಚಿತ್ರಕ್ಕೆ ಬೆಂಗಳೂರು, ಸಕಲೇಶಪುರ ಸೇರಿದಂತೆ ವಿವಿಧೆಡೆಗಳಲ್ಲಿ ಚಿತ್ರೀಕರಣ ನಡೆದಿದೆ. ಸುಮಾರು 25 ದಿನಗಳ ಕಾಲ ಸಕಲೇಶಪುರದಲ್ಲಿ ಸೆಟ್ ಹಾಕಿ ಮಳೆಯಲ್ಲೇ ಚಿತ್ರೀಕರಣ ನಡೆದಿದೆಯಂತೆ. ಮನ್ವರ್ಷಿ ಚಿತ್ರಕ್ಕೆ ಸಂಬಾಷಣೆ ಬರೆದಿದ್ದಾರೆ. ಚಂದ್ರು ಬಂಡೆ ಅವರು ರೆಗ್ಯುಲರ್ ಆಕ್ಷನ್‌ಗಿಂತ ಬೇರೆ ಥರದಲ್ಲಿ ಆಕ್ಷನ್ ಕಂಪೋಜ್ ಮಾಡಿದ್ದಾರೆ. ಚಿತ್ರದಲ್ಲಿ 4 ಹಾಡುಗಳಿದ್ದು, ರಾಜೇಶ್ ಕೃಷ್ಣನ್, ಬಸಣ್ಣಿ ಹಾಡಿನ ಖ್ಯಾ ತಿಯ ವರ್ಷ ಸುರೇಶ್ ಕೂಡ ಒಂದು ಹಾಡಿದ್ದಾರೆ.