ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಮನೆಯಲ್ಲಿ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಇದುವರೆಗೂ ಕಾಣಿಸಿಕೊಂಡಿದ್ದೇ ಬೇರೆ. ಟಾಸ್ಕ್ ಗಳಲ್ಲಿ ಗೆದ್ದಾಗ ಕುಪ್ಪಳಿಸಿ ಕುಣಿಯುತ್ತಾ, ಸೋತವನ್ನು ಸಂತೈಸುತ್ತಾ, ಒಮ್ಮೊಮ್ಮೆ ಉಳಿದ ಕಂಟೆಸ್ಟೆಂಟ್ ಮೇಕೆ ಗರಂ ಆಗುತ್ತಾ ಕಾಣಿಸಿಕೊಂಡಿದ್ದೇ ಹೆಚ್ಚು. ಬಟ್, ಈಗ ಅವರು ಕೂಡ ನರ್ವಸ್ ಆಗಿದ್ದಾರೆ. ಹೆಚ್ಚು ಕಡಿಮೆ ಈಗ ಹೆಚ್ಚು ಮೌನಕ್ಕೆ ಶರಣಾಗುತ್ತಿದ್ದಾರೆ. ಅದು ಕೂಡ ಟಾಸ್ಕ್ ನ ಗಿಮಿಕ್ ಅಂತಲೇ ಇರಬಹುದು. ಆದ್ರೆ, ಎಮೋಷನ್ ಅಂತ ಇದೆಯಲ್ಲ, ಅದು ಕಣ್ಣೀರಿನ ಮೂಲಕ ವಾಸ್ತವ ಹೇಳುತ್ತೆ. ಆ ಪ್ರಕಾರ ಪ್ರಶಾಂತ್ ಸಂಬರಗಿ ಈಗ ಎಮೋಷನ್ಸ್ ಗೆ ಒಳಗಾಗಿದ್ದಾರೆ. ಬುಧವಾರದ ಎಪಿಸೋಡ್ ನಲ್ಲಿ ಸಂಬರಗಿ ನಿಜಕ್ಕೂ ಅತ್ತು ಬಿಟ್ಟರು.
ಮನೆ ನೆನಪಾಯ್ತು ಬಿಗ್ ಬಾಸ್…
ಕನ್ಪೆಸಷನ್ ರೂಂ ನಲ್ಲಿ ಕಣ್ಣೀರಿಡುತ್ತಾ, ಯಾಕೋ ಮನೆ ನೆನಪಾಗ್ತಿದೆ… ಬಿಗ್ ಬಾಸ್ ಅಂತ ಗಳ ಗಳನೆ ಅತ್ತು ಬಿಟ್ಟರು. ಕನ್ಪೆಷನ್ ರೂಂಗೆ ಬರಲು ಹೇಳಿ ಬಿಗ್ ಬಾಸ್ ಕಡೆಯಿಂದ ಪ್ರಶಾಂತ್ ಸಂಬರಗಿ ಅವರಿಗೆ ಒಂದಷ್ಟು ಪ್ರಶ್ನೆಗಳನ್ನು ಕೇಳಲಾಯಿತು. ಬಿಗ್ ಬಾಸ್ ಬಳಿ ಏನಾದರೂ ಹೇಳಲು ಬಯಸುತ್ತೀರಾ ಅಂತ ಹೇಳಿದಾಗ, ಪ್ರಶಾಂತ್ ಸಂಬರಗಿ ಅತ್ತು ಬಿಟ್ಟರು. ಕಣ್ಣೀರು ಸುರಿಸುತ್ತಾ ಮನೆ ಜ್ಞಾಪಕ ಬಂತು ಅಂತ ಅತ್ತರು. ಮೆಡಿಸನ್ ಕೊಟ್ಟ ತಕ್ಷಣ ಮನೆಯವರು ನೆನಪಾದರು ಸರ್. ನನ್ನ ಮನೆಯಲ್ಲಿ ನನ್ನ ಬಗ್ಗೆ ಕಾಳಜಿಯಿದೆ. ಒಬ್ಬರು ಆಯುರ್ವೇದಿಕ್ ಡಾಕ್ಟರ್ ಇದ್ದಾರೆ. ಅವರೇ ನನಗೆ ಮದ್ದು ಕೊಡುವುದು. ಈಗ ಅವರು ಟಿವಿ ನೋಡುತ್ತಿರುತ್ತಾರೆ.
ನಾನಂದ್ರೆ ಎಲ್ಲರಿಗೂ ಇಷ್ಟ…
ಆರೋಗ್ಯ ಸಮಸ್ಯೆಯಿಂದ ನನ್ನ ಗಂಟಲ ಧ್ವನಿ ಹೋಗಿದೆ ಅಂತ ಅವರಿಗೆ ಗೊತ್ತಾಗಿ ಬಿಗ್ ಬಾಸ್ ಮನೆಗೆ ಔಷಧ ಕಳಿಸಿದ್ದಾರೆ. ಬಿಗ್ ಬಾಸ್ ನಿಂದ ಆಚೆಗೆ ಎಲ್ಲರಿಗೂ ನನ್ನ ಕಂಡರೆ ಇಷ್ಟ. ಹಾಗೆಯೇ ಆಯುರ್ವೇದಿಕ್ ಡಾಕ್ಟರ್ ಒಬ್ಬರಿಗೂ ನನ್ನ ಕಂಡರೆ ಅವರಿಗೆ ಎಲ್ಲಿಲ್ಲದ ಪ್ರೀತಿ ಅಂತ ಹೇಳುತ್ತ ಗೊಳ ಗೊಳ ಅತ್ತುಬಿಟ್ಟರು. ನನಗೆ ಮೆಡಿಸಿನ್ ಕೊಡಲೇ ಬಾರದಿತ್ತು ಅಂತ ಹೇಳಿ, ಸಾರಿ ನಾನು ಅತ್ತುಬಿಟ್ಟೆ ಅಂತ ಕಣ್ಣೊರೆಸಿಕೊಂಡರು.