ʼರಾಬರ್ಟ್ʼ ಚಿತ್ರದ ಭರ್ಜರಿ ಸಕ್ಸಸ್ ಬೆನ್ನಲೇ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಯರ ದರ್ಶನಕ್ಕಾಗಿ ಮಂತ್ರಾಲಯಕ್ಕೆ ಭೇಟಿ ಕೊಟ್ಟಿದ್ದರು. ಬುಧವಾರ ಸ್ನೇಹಿತರೊಂದಿಗೆ ಅಲ್ಲಿಗೆ ಭೇಟಿಕೊಟ್ಟು ರಾಯರ ದರುಶನ ಮಾಡಿ, ಆಶೀರ್ವಾದ ಪಡೆದರು.
ರಾಯರ ದರ್ಶನ ಪಡೆದ ನಂತರ ಅಲ್ಲಿನ ಗೋ ಶಾಲೆಗೆ ಹೋಗಿ, ತಮ್ಮಿಷ್ಟದ ಹಸುಗಳನ್ನು ಮೈದಡವಿ ವೀಕ್ಷಿಸಿದ್ದಾರೆ. ಮಂತ್ರಾಲಯದ ರಾಯರ ಮಠವೂ ಬಹು ಕಾಲದಿಂದಲೂ ಗೋಶಾಲೆಯನ್ನು ನಿರ್ವಹಿಸುತ್ತಾ ಬರುತ್ತಿದೆ. ದೇಶದ ನಾನಾ ತಳಿಯ ಹಸುಗಳು ಅಲ್ಲಿವೆ.
ಮೊದಲಿನಿಂದಲೂ ನಟ ದರ್ಶನ್ ಅವರಿಗೆ ಪ್ರಾಣಿ-ಪಕ್ಷಿಗಳ ಮೇಲೆ ಅತೀವ ಪ್ರೀತಿ. ಮೈಸೂರಿನಲ್ಲಿರುವ ಅವರ ಫಾರ್ಮ್ ಹೌಸ್ ನಲ್ಲಿ ತಮಿಷ್ಟದ ಪ್ರಾಣಿ-ಪಕ್ಷಿಗಳನ್ನು ದೂರದೂರುಗಳಿಂದ ಖರೀದಿಸಿ ತಂದು ಸಾಕುತ್ತಿರುವುದೇ ಅದಕ್ಕೆ ಸಾಕ್ಷಿ. ಅಂತೆಯೇ ರಾಯರ ದರ್ಶನಕ್ಕೆ ಅಂತ ಮಂತ್ರಾಲಯಕ್ಕೆ ಹೋದರೂ, ಅಲ್ಲಿನ ಗೋಶಾಲೆಯೇ ಅವರ ಪ್ರಮುಖ ಆಕರ್ಷಣೆ ಆಗಿದ್ದು ವಿಶೇಷ.