ಮಲೆನಾಡು ಹುಡುಗಿ ದಿವ್ಯಾ ಉರುಡುಗ, ಬಿಗ್ ಬಾಸ್ ಮನೆಯಲ್ಲೊಂದು ಮನದಾಳ ಮಾತು ಹಂಚಿಕೊಂಡಿದ್ದಾರೆ. ಅದು ಅವರ ಮದುವೆಗೆ ಸಂಬಂಧಿಸಿದ ವಿಚಾರ. ಬಿಗ್ ಬಾಸ್ ಕಂಟೆಸ್ಟೆಟ್ ಗಳಾದ ಗೀತಾ, ಶಮಂತ್ ಜತೆಗೆ ದಿವ್ಯಾ ಹೀಗೆಯೇ ಲೋಕಾಭಿರಾಮದ ಬಗ್ಗೆ ಮಾತನಾಡುತ್ತಿದ್ದಾಗ, ಮದುವೆ ವಿಷಯ ಪ್ರಸ್ತಾಪಕ್ಕೆ ಬಂತು. ನೀವು ಮದುವೆ ಆಗೋ ಹುಡುಗ ಹೆಂಗೆ ಇರಬೇಕು ಅಂತ ಗೀತಾ ಹಾಗೂ ಶಮಂತ್ ಕೇಳಿದಾಗ, ” ನಾನು ಮದುವೆಯಾಗುವ ಹುಡುಗ ಮೊದಲು ಇಷ್ಟ ಆಗಬೇಕು. ನಂತರ ಅಪ್ಪ ಅಮ್ಮನಿಗೆ ಇಷ್ಟವಾಗಬೇಕು ಅನಂತರ ನಾನು ನೋಡಿ ಮದುವೆಯಾಗಬೇಕುʼ ಅಂದರು ನಟಿ ದಿವ್ಯಾ ಉರುಡುಗ.
ಅಷ್ಟೇ ಅಲ್ಲ, ಆಪ್ಸೆನ್ ಅಗೋ ವಿಚಾರದಲ್ಲೋ ತಮ್ಮ ನಿಲುವೇನು ಅಂತ ಮನದಾಳ ಮಾತು ತೆರೆದಿಟ್ಟರು ದಿವ್ಯಾ. ” ನಾನು ಯಾರಿಗೂ ಆಪ್ಶನ್ ಆಗಿರೋದು ಇಷ್ಟವಿಲ್ಲ. ಮದುವೆಯಾಗುವ ಹುಡುಗನಲ್ಲಿ ಫ್ಲ್ಯಾಶ್ ಬ್ಯಾಕ್ ನಾನು ಕೇಳೋದೆ ಇಲ್ಲ .ಅದು ನನಗೆ ಬೇಕಾಗಿಲ್ಲ. ಮದುವೆಯಾಗುವ ಹುಡುಗನ ಬಗ್ಗೆ ನನಗೆ ಸಾವಿರ ಆಲೋಚನೆಗಳಿವೆ. ಮದುವೆಯಾಗಲು ಮನಸ್ಸು ಬಹಳ ಮುಖ್ಯ. ಒಬ್ಬರಿಗೆ ಮನಸ್ಸು ನೀಡಿದರೆ ಅವರನ್ನೇ ಮದುವೆಯಾಗಬೇಕು. ನನ್ನ ಚಾಯ್ಸ್ ಅಪ್ಪ- ಅಮ್ಮನದ್ದೇ ಆಗಿರುತ್ತದೆ. ಮದುವೆಯಾಗುವ ಟೈಮ್ ನಲ್ಲಿ ಮದುವೆ ಆಗುತ್ತೆ. ಆಗಲೇಬೇಕು ಕೂಡ ಅಂತ ಹೇಳ್ತಾರೆ ದಿವ್ಯಾ ಉರುಡುಗ.