ನಿಮ್ಮ ಅಪ್ಪು , ನಿಮ್ಮ ಊರಿಗೆ – ಮೈಸೂರು ʼ ಯುವ ಸಂಭ್ರಮʼ ರದ್ದಾದ ಬೆನ್ನಲೇ ಯುವರತ್ನ ಟೀಮ್‌ನ ಹೊಸ ತಂತ್ರ

ಪವರ್ ಸ್ಟಾರ್ ಪುನೀತ್‌ ರಾಜ್‌ ಕುಮಾರ್‌ ಫ್ಯಾನ್ಸ್‌ ಬೇಜಾರಾಗಬೇಕಿಲ್ಲ. ಪ್ರತಿ ವರ್ಷದಂತೆ ಈ ವರ್ಷ ತಮ್ಮ ನೆಚ್ಚಿನ ನಟನ ಗ್ರಾಂಡ್‌ ಬರ್ತಡೇ ಸಲೆಬ್ರೆಷನ್‌ ಇಲ್ಲ ಅಂತಲೋ ಅಥವಾ ಮಾರ್ಚ್‌ 20 ಕ್ಕೆ ಫಿಕ್ಸ್‌ ಆಗಿದ್ದ ಯುವರತ್ನ ಟೀಮ್‌ ನ ಯುವ ಸಂಭ್ರಮ ಕ್ಯಾನ್ಸಲ್‌ ಆಗಿದೆ ಅಂತಲೋ, ಬೇಸರಿಸಿಕೊಳ್ಳಬೇಕಿಲ್ಲ. ಅದಕ್ಕೂ ಒಂದು ಹೊಸ ಪ್ಲಾನ್‌ ಹಾಕಿಕೊಂಡಿದೆ ಚಿತ್ರ ತಂಡ. ಹಾಗಾದ್ರೆ ಅದೇನು ? ಇಲ್ಲಿದೆ ನೋಡಿ ಕಂಪ್ಲೀಟ್‌ ಸ್ಟೋರಿ.

ಕನ್ನಡದ ಮಟ್ಟಿಗೆ ” ಯುವರತ್ನʼ ಬಹು ನಿರೀಕ್ಷಿತ ಸಿನಿಮಾ. ʼರಾಜಕುಮಾರʼ ದಂತಹ ಬ್ಲಾಕ್‌ ಬಸ್ಟರ್‌ ಸಿನಿಮಾ ನಂತರ ಪುನೀತ್‌ ರಾಜ್‌ ಕುಮಾರ್‌ ಹಾಗೂ ನಿರ್ದೇಶಕ ಸಂತೋಷ್‌ ಆನಂದ್‌ ರಾಮ್‌ ಕಾಂಬಿನೇಷನ್‌ ಇಲ್ಲಿ ಮತ್ತೆ ಒಂದಾಗಿದೆ.ಹಾಗಂತ ಈ ಸಿನಿಮಾದ ಕ್ಯೂರಿಯಾಸಿಟಿಗೆ ಅದಷ್ಟೇ ಕಾರಣವಲ್ಲ, ಇದು ಹೊಂಬಾಳೆ ಫಿಲಂಸ್ ನಿರ್ಮಾಣದ ಮತ್ತೊಂದು ಅದ್ದೂರಿ ವೆಚ್ಚದ ಸಿನಿಮಾ. ಬಿಗ್‌ ಬಜೆಟ್‌ ಸಿನಿಮಾ ಎನ್ನುವುದರ ಜತೆಗೆ ಬಿಗ್‌ ಸ್ಟಾರ ಸಿನಿಮಾವೂ ಹೌದು. ಹೊಂಬಾಳೆ ಫಿಲಂಸ್ ಅಂದ್ರೆ ಇವತ್ತು ಭಾರತೀಯ ಚಿತ್ರರಂಗಕ್ಕೇ ಪರಿಚಿತ ಇರುವ ಪ್ರೊಡಕ್ಷನ್ ಹೌಸ್. ಕನ್ನಡದ ಮಟ್ಟಿಗೀಗ ದೊಡ್ಡ ಬ್ಯಾನರ್. ಬಂಡವಾಳ ಹಾಕಿದ್ದಷ್ಟೇ, ಅಧಿಕ ಲಾಭ ಪಡೆಯುವ ಚಾಣಾಕ್ಷತೆ ಇರುವಂತಹ ಸಂಸ್ಥೆ. ಅದೇ ಕಾರಣಕ್ಕೀಗ ಇಡೀ ಭಾರತೀಯ ಚಿತ್ರರಂಗವೇ “ಕೆಜಿಎಫ್‌ ೨ʼ ಗಾಗಿ ಕಾಯುತ್ತಿದೆ. ಈ ನಡುವೆ ಹೊಂಬಾಳೆ ಫಿಲಂಸ್‌ ನಿರ್ಮಾಣದಲ್ಲಿ ದೊಡ್ಡದಾಗಿ ಸದ್ದು ಮಾಡುತ್ತಿರುವ ಸಿನಿಮಾ” ಯುವರತ್ನʼ

ಸದ್ಯಕ್ಕೀಗ ʼಯುವರತ್ನ‌ʼದ ರಿಲೀಸ್‌ ಡೇಟ್ ಏಪ್ರಿಲ್‌ ಕ್ಕೆ1 ಫಿಕ್ಸ್‌ ಆಗಿದೆ. ಈಗಾಗಲೇ ಪೋಸ್ಟರ್‌ನಿಂದಲೇ ದೊಡ್ಡ ಕುತೂಹಲ ಕೆರಳಿಸಿದೆ ಈ ಸಿನಿಮಾ. ಹಾಗೆಯೇ ಹಾಡುಗಳ ಲಿರಿಕಲ್‌ ವಿಡಿಯೋ ಮೂಲಕವೂ ಸೆನ್ಸೆಷನ್‌ ಸೃಷ್ಟಿಸಿದೆ. ಈಗ ರಿಲೀಸ್‌ ಪೂರ್ವ ಪ್ರಚಾರಕ್ಕೂ ಚಿತ್ರ ತಂಡ ತನ್ನದೇ ತಂತ್ರ ಹೆಣೆದಿದೆ. ಮಾರ್ಚ್ 20ಕ್ಕೆ ಮೈಸೂರಿನಲ್ಲಿ ಯುವರತ್ನದ ” ಯುವ ಸಂಭ್ರಮʼ ಫಿಕ್ಸ್‌ ಆಗಿತ್ತು. ಕಾರಣಾಂತರಗಳಿಂದ ಅದೀಗ ರದ್ದಾಗಿದೆ. ಚಿತ್ರ ತಂಡ ಪರವಾಗಿಯೇ ಚಿತ್ರದ ನಾಯಕ ನಟ ಪುನೀತ್‌ ರಾಜ್‌ ಕುಮಾರ್‌ ಆ ವಿಷಯ ರಿವೀಲ್‌ ಮಾಡಿದ್ದಾರೆ. ಸದ್ಯಕ್ಕೆ ಅದರಕಾರಣ ನಿಗೂಢ. ಆದರೆ ಕೊರೋನಾ ಅನ್ನೋದು ಸ್ಪಷ್ಟ.

ಇನ್ನು ಅಪ್ಪು ಅಂದ್ರೆ ಹುಡುಗಾಟಿಕೆ ಅಲ್ಲ. ಕರ್ನಾಟಕದಲ್ಲಿ ಅತೀ ಹೆಚ್ಚು ಫ್ಯಾನ್ಸ್‌ ಹೊಂದಿರುವ ನಟ ಅವರು. ಅವರದೇ ಒಂದು ಪ್ರೋಗ್ರಾಮ್‌ ಫಿಕ್ಸ್‌ ಆಗಿದೆ ಅಂದ್ರೆ ಮೈಸೂರಿನಲ್ಲಿ ಮತ್ತೊಂದು ದಸರಾ ಫಿಕ್ಸ್.‌ ಅಭಿಮಾನಿಗಳ ಜಾತ್ರೆಯೇ ಸೇರುವುದೂ ಗ್ಯಾರಂಟಿ . ಆದರೆ ಈಗ ಕೊರೋನಾ ಹೆಚ್ಚಳದ ಕಾರಣಕ್ಕೆ ಸರ್ಕಾರ ಒಂದಷ್ಟು ಕಠಿಣ ನಿರ್ಧಾರ ಪ್ರಕಟಿಸಿದೆ. ಆ ಪ್ರಕಾರ 500 ಕ್ಕೂ ಹೆಚ್ಚು ಜನ ಸೇರಿಸಿ ಬಹಿರಂಹ ಸಭೆ ನಡೆಸುವಂತಿಲ್ಲ. ಅದೇ ಕಾರಣಕ್ಕೇ ʼಯುವರತ್ನʼ ಚಿತ್ರದ ಯುವ ಸಂಭ್ರಮ ಕ್ಯಾನ್ಸಲ್‌ ಅನ್ನೋದು ಗ್ಯಾರಂಟಿ. ಹಾಗಂತ ಚಿತ್ರ ತಂಡ ಸುಮ್ಮನೆ ಕುಳಿತಿಲ್ಲ. ಅದಕ್ಕೂ ತನ್ನದೇ ತಂತ್ರ ಹೆಣೆದಿದೆ. ಪುನೀತ್‌ ರಾಜ್‌ ಕುಮಾರ್‌ ಪ್ರಕಾರ ಅದು ಪ್ರತಿ ಜಿಲ್ಲೆಯ ಭೇಟಿ.

” ಇಷ್ಟು ದಿನ ನನ್ನ ಮನೆಬಾಗಿಲಿಗೆ ಬಂದು ನನ್ನ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದ ನಿಮಗೆ, ನಾನೀಗ ಒಂದು ಸ್ಪೆಷಲ್‌ ಗಿಫ್ಟ್‌ ನೀಡುತ್ತಿದ್ದೇನೆ. ನಾನೇ ನಿಮ್ಮೂರಿಗೆ ಬರುತ್ತಿದ್ದೇನೆ. ಅಲ್ಲಿಗೆ ಬಂದು ನಿಮ್ಮೊಂದಿಗೆ ಒಂದಷ್ಟು ಸಮಯ ಕಳೆಯಬೇಕು ಅನ್ನೋದು ನನ್ನ ಆಸೆ. ಅದೇ ಕಾರಣಕ್ಕೆ ಹುಟ್ಟು ಹಬ್ಬದ ಗ್ರಾಂಡ್‌ ಸೆಲೆಬ್ರೇಷನ್‌ ಕ್ಯಾನ್ಸಲ್‌ ಆಗಿದೆ. ಜತೆಗೆ ಮೈಸೂರಿನ ಯುವ ಸಂಭ್ರಮ ಕೂಡ ರದ್ದಾಗಿದೆ. ಬೇರೆ ಬೇರೆ ಜಿಲ್ಲೆಗಳಿಂದ ಒಂದಷ್ಟು ಕರೆಗಳು ಬಂದವು. ನೀವು ಮೈಸೂರಿಗಷ್ಟೇ ಯಾಕೆ ಕಾರ್ಯಕ್ರಮ ಸೀಮಿತ ಗೊಳಿಸಿದ್ದೀರಿ, ನಮ್ಮೂರಿನಲ್ಲೂ ಮಾಡಿ ಅಂತ ಸಲಹೆ ಕೊಟ್ಟರು. ಅದೇ ಕಾರಣಕ್ಕೀಗ ನಿಮ್ಮೂರಿಗೆ ನಿಮ್ಮ ಅಪ್ಪು ಬರುತ್ತಿದ್ದಾರೆ.ಇಷ್ಟರಲ್ಲಿಯೇ ಕಾರ್ಯಕ್ರಮ ಫಿಕ್ಸ್‌ ಆಗಲಿದೆ. ಅದಕ್ಕಾಗಿ ಸಹಕರಿಸಿ ಅಂತ ಫ್ಯಾನ್ಸಿಗೆ ಮನವಿ ಮಾಡಿದ್ದಾರೆ ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್.‌

Related Posts

error: Content is protected !!