ಫಸ್ಟ್‌ ಟೈಮ್‌ ನರ್ವಸ್‌ ಆದ್ರಂತೆ ನಟ ಕಿಚ್ಚ ಸುದೀಪ್‌ _ ಅದಕ್ಕೆ ಕಾರಣ ಏನ್‌ ಗೊತ್ತಾ ?

ಎಷ್ಟೋ ವೇದಿಕೆ ಹತ್ತಿದ್ದೇನೆ. ಅಲ್ಲಿ ಮಾತೂ ಆಡಿದ್ದೇನೆ, ಆದ್ರೆ ಫಸ್ಟ್‌ ಟೈಮ್‌ ಯಾಕೋ ನಾನಿಲ್ಲಿ ನರ್ವಸ್‌ ಆಗಿದ್ದೇನೆ…ಅಭಿನಯ ಚಕ್ರವರ್ತಿ ನಟ ಸುದೀಪ್‌ ಅಲ್ಲಿ ಹೀಗೆ ಹೇಳಿ ಒಂದು ಕ್ಷಣ ಸುಮ್ಮನಾದರು. ನಿಜಕ್ಕೂ ಅವರು ನರ್ವಸ್‌ ಆಗಿದ್ದರ ಸಂಕೇತವದು. ಸಭಿಕರಿಗೂ ಅಚ್ಚರಿ. ಹಾಗೆಯೇ ವೇದಿಕೆಯ ಮೇಲೆದ್ದವರಿಗೂ ಸೋಜಿಗ. ಯಾಕಂದ್ರೆ, ನಟ ಕಿಚ್ಚ ಸುದೀಪ್‌ ಇಂತಹ ಅದೆಷ್ಟು ವೇದಿಕೆ ನೋಡಿಲ್ಲ? ಅಷ್ಟು ಸುಲಭಕ್ಕೆ ಅವರು ನರ್ವಸ್‌ ಆಗುವುದುಂಟೆ ?

ಆದ್ರೂ, ಅಲ್ಲಿ ಅದ್ಯಾಕೆ ನರ್ವಸ್‌ ಆದ್ರೂ ಗೊತ್ತಿಲ್ಲ. ಹಾಗಂತ ಅವರೇ ಹೇಳಿಕೊಂಡಾಗ ಅದೇ ವೇದಿಕೆಯಲ್ಲಿ ಮುಖ್ಯ ಮಂತ್ರಿ ಬಿ.ಎಸ್‌. ಯುಡಿಯೂರಪ್ಪ, ನಟರಾದ ರವಿಚಂದ್ರನ್‌, ಶಿವರಾಜ್‌ ಕುಮಾರ್‌, ನಿರ್ಮಾಪಕರಾದ ರಾಕ್‌ ಲೈನ್‌ ವೆಂಕಟೇಶ್‌, ಸುವರ್ಣ ನ್ಯೂಸ್ ಸಂಪಾದಕ ರವಿ ಹೆಗಡೆ, ಪಬ್ಲಿಕ್ ಟಿವಿ ಸಂಪಾದಕ ರಂಗನಾಥ್ ಹಾಜರಿದ್ದರು. ಇಷ್ಟಕ್ಕೂ ಅದು ಸುದೀಪ್‌ ಅವರದ್ದೇ ಕಾರ್ಯಕ್ರಮ. ಅಂದ್ರೆ, ಕಿಚ್ಚ ಸುದೀಪ್ ಅವರ ಸಿನಿ ಜರ್ನಿಯ ಬೆಳ್ಳಿಹಬ್ಬ ಮಹೋತ್ಸವ.

” ಕೋಟಿಗೊಬ್ಬ 3ʼ ಚಿತ್ರ ತಂಡ ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಬೆಳ್ಳಿ ಹಬ್ಬದ ಕಾರ್ಯಕ್ರಮ ಆಯೋಜಿಸಿತ್ತು. ವರ್ಣರಂಜಿತ ಆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಅವರಿಂದ ಸನ್ಮಾನ ಸ್ವೀಕರಿಸಿ ಮಾತಿಳಿಗಿಳಿದ ನಟ ಕಿಚ್ಚ ಸುದೀಪ್‌, ಈ ಜರ್ನಿಯಲ್ಲಿ ಅದೆಷ್ಟು ವೇದಿಕೆ ಏರಿದ್ದೇನೋ ಗೊತ್ತಿಲ್ಲ. ಆದ್ರೆ ಫಸ್ಟ್‌ ಟೈಮ್‌ ಈ ವೇದಿಕೆಯಲ್ಲಿ ಮಾತನಾಡೋದಿಕ್ಕೆ ನರ್ವಸ್‌ ಆಗಿದ್ದೇನೆ. ಎಲ್ಲರ ಕಣ್ಣು ನನ್ನ ಮೇಲಿದೆ ಅಂತ ಟೆನ್ಸೆನ್‌ ಆಗುತ್ತೆ. ಜತೆಗೆ ದೊಡ್ಡ ಸಾಧನೆ ಮಾಡಿದವರೆಲ್ಲ ಈ ವೇದಿಕೆ ಮೇಲಿರುವುದು ಕೂಡ ಕಾರಣವಿರಬಹುದು. ನನ್ನ25 ವರ್ಷದ ಸಾಧನೆ ಅಂದ್ರೆ ರವಿಚಂದ್ರನ್‌, ಶಿವರಾಜ್‌ ಕುಮಾರ್‌, ರಮೇಶ್‌ ಅವರ ಸಿನಿಮಾಗಳನ್ನು ನೋಡಿ ಬೆಳೆದಿದ್ದು. ಇದು ನನ್ನ ದೊಡ್ಡ ಸೌಭಾಗ್ಯ ಎಂದರು ನಟ ಕಿಚ್ಚ ಸುದೀಪ್.‌
ದೊಡ್ಡವರೆಲ್ಲ ನಮ್ಮ ತಪ್ಪುಗಳನ್ನು ತಿದ್ದುತ್ತಾರೆ ಅನ್ನೋ ಧೈರ್ಯದಿಂದಲೇ ಇಷ್ಟು ದೂರ ಬಂದಿದ್ದೇನೆ. ತಪ್ಪು ಮಾಡುವುದಕ್ಕೇನು ಭಯ ಪಡಬೇಕಿಲ್ಲ. ಇದು 25 ವರ್ಷ ಅಂತ ನನಗನ್ನಿಸಿಲ್ಲ. ಯಾಕಂದ್ರೆ, ಇಲ್ಲಿ ಯಾರು ಕೂಡ ನನ್ನ ಕೈ ಬಿಟ್ಟಿಲ್ಲ. ಅವಕಾಶಗಳ ಮೇಲೆ ಅವಕಾಶ ನೀಡುತ್ತಲೇ ಬಂದರು. ಅದು ನನ್ನನ್ನು ಇಷ್ಟು ದೂರ ಕರೆ ತಂದಿದೆ. ಆದ್ರೂ, ಒಬ್ಬ ನಟನಿಗೆ 25 ವರ್ಷದ ಸಕ್ರಿಯವಾಗಿರೋದು ಅಂದ್ರೆ ಸುಲಭದ ಮಾತಲ್ಲ. ಅದೇ ಕಾರಣಕ್ಕೆ ಹಿರಿಯರೆಲ್ಲ ಸೇರಿ ನನ್ನನ್ನು ಕರೆದು ಇಷ್ಟೊಂದು ಸಂಭ್ರಮದಿಂದ ಸಮಾರಂಭ ಆಯೋಜಿಸಿರುವುದು ಖುಷಿ ತಂದಿದೆ ಎಂದರು ನಟ ಕಿಚ್ಚ ಸುದೀಪ್.‌

Related Posts

error: Content is protected !!