ಬಿಗ್ ಬಾಸ್ ಮನೆಯಲ್ಲಿ ನಿತ್ಯವೂ ಒಂದೊಂದು ರೋಚಕ ಕತೆಗಳು ರಿವೀಲ್ ಆಗುತ್ತಿವೆ. ಕಂಟೆಸ್ಟೆಂಟ್ ನಡುವೆ ಒಂದೆಡೆ ಪ್ರೀತಿಯ ಪಯಣ ಸಾಗುತ್ತಿದ್ದರೆ, ಇನ್ನೊಂದೆಡೆ, ದ್ವೇಷದ ಛಾಯೆ ಭುಗಿಲೇಳುತ್ತಿದೆ. ವೈಯಕ್ತಿಕ ಭಿನ್ನಾಭಿಪ್ರಾಯಗಳ ನಡುವೆಯೂ ತಮ್ಮ ಮನೆಯವರ ಬಗ್ಗೆ, ತಮ್ಮ ಪ್ರೀತಿಯ ಮೂಖ ಪ್ರಾಣಿಗಳ ಬಗ್ಗೆ ಕಂಟೆಸ್ಟೆಂಟ್ ಅವಗಾವಾಗ ನೆನೆಸಿಕೊಂಡು ಕಣ್ಣೀರಿಡುವುದು, ಉಳಿದವರು ಅವರನ್ನು ಸಂತೈಸುವುದು ಕೂಡ ಇದ್ದೇಇದೆ. ಶುಕ್ರವಾರ ಪ್ರಸಾರವಾದ ಎಪಿಸೋಡ್ ನಲ್ಲಿ ಹಾಗೆಯೇ ಒಂದು ಘಟನೆಗೆ ಗ್ಲಾಮರಸ್ ನಟಿ ಶುಭ ಪೂಂಜಾ ಸಾಕ್ಷಿಯಾದರು.
ಶುಭಾ ಪೂಂಜಾ ಮ್ಯಾಕ್ಸಿ ನೆನಪಿಸಿಕೊಂಡು ಅತ್ತರು. ಉಳಿದವರು ಅವರನ್ನು ಸಂತೈಸಿದರು. ಹಾಗಾದ್ರೆ, ಶುಭ ಪೂಂಜಾ ಅವರ ಕಣ್ಣಲ್ಲಿ ಕಣ್ಣೀರು ತರಿಸಿದ ಆ ಮ್ಯಾಕ್ಸಿ ಯಾರು ? ಇದೊಂದು ಕುತೂಹಲದ ಸಂಗತಿ. ಗಾಬರಿ ಯಾಗ್ಬೇಡಿ, ಮ್ಯಾಕ್ಸಿ ಅಂದ್ರೆ ಶುಭಾ ಪೂಂಜಾ ಅವರು ಸಾಕಿದ ಮುದ್ದಿನ ನಾಯಿ. ಆ ದಿನ ಬಿಗ್ ಬಾಸ್ ಮನೆಯಲ್ಲಿ ಅವರು ತಮ್ಮ ಮುದ್ದಿನ ನಾಯಿ ಮ್ಯಾಕ್ಸಿಯ ಫೋಟೋ ನೋಡಿ ಕಣ್ಣೀರು ಹಾಕಿದರು.ಸುಮಾರು ಆರು ತಿಂಗಳ ಹಿಂದೆ ತಮ್ಮ ಮುದ್ದಿನ ನಾಯಿ ಮ್ಯಾಕ್ಸಿ ಜತೆಗೆ ಶುಭಾ ಪೂಂಜಾ ತೆಗೆಸಿಕೊಂಡಿದ್ದ ಫೋಟೋವೊಂದನ್ನು ಮೊನ್ನೆ ಬಿಗ್ ಬಾಸ್ ಮನೆಯ ಸ್ಕ್ರೀನ್ ಮೇಲೆ ಹಾಕಿದ್ದರು.
ಶುಭಾಪೂಂಜಾ ಬೇಜಾರಾದಾಗ ತನ್ನ ಮನೆಯ ಬಾಲ್ಕನಿಯಲ್ಲಿ ಕುಳಿತು ತನ್ನ ಮುದ್ದಿನ ಮ್ಯಾಕ್ಸಿಯ ಜೊತೆ ತೆಗೆದ ಫೋಟೋ ಅಂತೆ ಇದು. ಬಿಗ್ ಬಾಸ್ ಮನೆಯ ಸ್ಕ್ರೀನ್ ಮೇಲೆ ಈ ಫೋಟೋ ಕಾಣಸಿಕೊಳ್ಳುತ್ತಿದ್ದಂತೆ ಮನೆಯ ಲಿವಿಂಗ್ ಏರಿಯಾದಿಂದ ಓಡೋಡಿ ಬಂದ ಶುಭ ಪೂಂಜಾ, ಭಾವುಕರಾದರು. ಆನಂತರ ಕಣ್ಣೀರು ಹಾಕುತ್ತಾ, ಮ್ಯಾಕ್ಸಿ ಜತೆಗಿನ ತಮ್ಮ ಕಥೆ ತೊಡಿಕೊಂಡರು.” ಮ್ಯಾಕ್ಸಿ ಈಗ ಜೀವಂತವಾಗಿಲ್ಲ. ಆತ ತೀರಿಕೊಂಡು ಹಳೇ ಕಥೆ ಆಗಿದೆ. ಜೀವಕ್ಕಿಂತ ಹೆಚ್ಚು ಪ್ರೀತಿಸುವ ಮ್ಯಾಕ್ಸಿ ಅದು. ಕಳೆದುಕೊಂಡು ನೋವಾಗುತ್ತಿದೆ. ಹಾಗಾಗಿಯೇ ಅದರ ಫೋಟೋ ನೋಡಿದ ಕೂಡಲೇ ಭಾವುಕಳಾದೆ ಅಂತ ಉಳಿದ ಕಂಟೆಸ್ಟೆಂಟ್ ಬಳಿ ತೋಡಿಕೊಂಡರು.