ಮಾಡಿದ ತಪ್ಪಿಗೆ ಮುಖಕ್ಕೆ ಮಸಿ ಬಳಿಸಿಕೊಳ್ಳುವುದಂದ್ರೇನು ? ನಟಿ ನಿಧಿ ಸುಬ್ಬಯ್ಯ ಅವರಿಗೆ ಇದು ಬೇಕಿತ್ತಾ? ಕಿರುತೆರೆ ವೀಕ್ಷಕರು ಹಾಗೆಯೇ ಸಿನಿಮಾ ಪ್ರೇಕ್ಷಕರು ಹೀಗೆಲ್ಲ ಹೇಳುತ್ತಿದ್ದಾರೆ. ಹಾಗಾದ್ರೆ ನಿಧಿ ಸುಬ್ಬಯ್ಯ ಮಾಡಿದ ತಪ್ಪೇನು?
ಇದು ಬಿಗ್ ಬಾಸ್ ಮನೆಯ ಕಥೆ.ಬಿಗ್ ಬಾಸ್ ಸೀಸನ್ 8 ದಿನೇ ದಿನೇ ಕುತೂಹಲ ಹುಟ್ಟಿಸುತ್ತಿದೆ. ಬುಧವಾರ ಬಿಗ್ ಬಾಸ್ ಮನೆಯಲ್ಲಿ ಕೊರೋನಾ ವೈರಸ್ ನದ್ದೂ ಹಾವಳಿ ಹೆಚ್ಚಾಗಿತ್ತು. ಅಂದ್ರೆ ಕೊರೋನಾ ವೈರಸ್ ಹಾಗೂ ಮನುಷ್ಯರ ಮಧ್ಯೆ ಒಂದು ಯುದ್ಧ ನಡೆದಿತ್ತು.
ನಿಧಿಯಿಂದ ಆಟವೇ ಸ್ಟಾಪ್ !
ಕೊರೋನಾ ವೈರಸ್ ಅಲ್ಲಿದ್ದ ಮನುಷ್ಯರ ಮೇಲೆ ದಾಳಿ ಮಾಡುವ ಆಟವದು. ಈ ವೇಳೆ ಅಲ್ಲಿ ಎರಡು ತಂಡಗಳಾಗಿ ರೂಪಿಸಲಾಗಿತ್ತು. ವೈರಸ್ ಟೀಮ್‌ನಲ್ಲಿ ನಟಿ ನಿಧಿ ಸುಬ್ಬಯ್ಯ ಇದ್ದರು. ಅವರು ಮನುಷ್ಯರ ಮೇಲೆ ದಾಳಿ ಮಾಡುವಾಗ ಸರಿಯಾಗಿ ಆಡಲಿಲ್ಲ ಅನ್ನೋದು ಅಲ್ಲಿದ್ದವರು ಆರೋಪ. ಕೊನೆಗೆ ಆ ಆಟವೇ ಅಲ್ಲಿ ನಡೆಯಲಿಲ್ಲ. ಅರ್ಧದಲ್ಲಿಯೇ ನಿಂತು ಹೋಯಿತು. ಅದು ಅರ್ಧದಲ್ಲಿಯೇ ನಿಂತು ಹೋಗಿದ್ದರ ಆರೋಪ ನಿಧಿ ಸುಬ್ಬಯ್ಯ ಮೇಲೆ ಬಂತು. ಆ ಕಾರಣಕ್ಕೆ ಸಂಜೆ ಬಿಗ್ ಬಾಸ್ ಮನೆಯಲ್ಲಿ ಇತರೆ ಕಂಟೆಸ್ಟೆಂಟ್ ಅವರ ಮೇಲೆ ಆರೋಪ ಹೊರಿಸಿ, ಅವರ ಮುಖಕ್ಕೆ ಮಸಿ ಬಳಿದರು. ಬಿಗ್ ಬಾಸ್ ಮನೆಯಲ್ಲಿ ಕೋಪದ ಕಾವು ಹೆಚ್ಚಾಗುತ್ತಿದ್ದು. ಕಂಟೆಸ್ಟೆಂಟ್ ವೈಯಕ್ತಿಕ ದ್ವೇಷದಿಂದ ಟಾಸ್ಕ್ ಗಳಲ್ಲಿ ಎಡವುತ್ತಿದ್ದಾರೆ ಅನ್ನೋದು ಸದ್ಯದ ಪರಿಸ್ಥಿತಿಯಲ್ಲಿ ಗಮನಿಸಬಹುದು.