ಒಂದೇ ದಿನ – ಒಂದೇ ವೇದಿಕೆ 12 ಚಿತ್ರಗಳ ಪೋಸ್ಟರ್‌ ಲಾಂಚ್‌ ಇದು ಕನ್ನಡ ಚಿತ್ರರಂಗಕ್ಕೊಂದು ದಾಖಲೆ

ರಂಗಪ್ರತಿಭೆ ಅಜಯ್‌ ಕುಮಾರ್‌ ಹೊಸದೊಂದು ದಾಖಲೆ ಬರೆದಿದ್ದಾರೆ. ಅಜಯ್‌ ಸರ್ಕಲ್‌ ಮೂಲಕ ಒಂದೇ ದಿನ ಒಂದೇ ವೇದಿಕೆ ಮೇಲೆ ನಿರ್ದೇಶಕರ 12 ಚಿತ್ರಗಳ ಪೋಸ್ಟರ್‌ ಲಾಂಚ್‌ ಮಾಡುವ ಮೂಲಕ ಸ್ಯಾಂಡಲ್‌ವುಡ್‌ ನಲ್ಲಿ ಸಂಚಲನ ಸೃಷ್ಟಿಸಿದರು. ಆ ದಿನ ಪೋಸ್ಟರ್‌ ಲಾಂಚ್‌ ಕಾರ್ಯಕ್ರಮ ಬೆಂಗಳೂರಿನ ಮಲ್ಲೇಶ್ವರಂನ ರೇಣುಕಾಂಬ ಮಿನಿ ಚಿತ್ರಮಂದಿರದಲ್ಲಿ ವಿಶೇಷವಾಗಿ ನಡೆಯಿತು. ಅವತ್ತಿಗೆ ಗ್ಲಾಮರಸ್‌ ನಟಿ ರಾಗಿಣಿ ದ್ವಿವೇದಿ ಚೀಪ್ ಗೆಸ್ಟ್. ದಂಗೆಯ ಸೂಚಕವೋ ಏನೋ ಅವತ್ತು ಕೆಂಪು ಸ್ಕರ್ಟ್‌ ತೊಟ್ಟು ಬಂದಿದ್ದ ರಾಗಿಣಿ ಇಡೀ ಕಾರ್ಯಕ್ರಮ ಕೇಂದ್ರ ಬಿಂದು ಆಗಿದ್ದರು.

ಡ್ರಗ್ಸ್‌ ಕೇಸ್‌ ನಲ್ಲಿ ಅವರಿ ಜೈಲಿಗೆ ಹೋಗಿ ಬಂದ ನಂತರ ಮೊಟ್ಟ ಮೊದಲು ಅಟೆಂಡ್‌ ಮಾಡಿದ ಸಿನಿಮಾ ಕಾರ್ಯಕ್ರಮ ಅದು. ಅವರೇ ಅಲ್ಲಿ ಮೈನ್‌ ಆಟ್ರ್ಯಾಕ್ಷನ್‌ ಆಗಿದ್ದಕ್ಕೂ ಅದೇ ಕಾರಣ. ಅವರೊಂದಿಗೆ ಚಿತ್ರ ಸಾಹಿತಿ ಹಾಗೂ ನಿರ್ದೇಶಕ ನಾಗೇಂದ್ರ ಪ್ರಸಾದ್‌ ಇದ್ದರು. ನಾಡಿನ ಹೆಸರಾಂತ ಕಲಾವಿದ ಶಶಿಧರ್‌ ಅಡಪ್‌ ಇದ್ದರು. ನಿರ್ಮಾಪಕ ನಾಗೇಶ್‌ ಕುಮಾರ್‌ ಹಾಗೂ ನಿರ್ದೇಶಕ ನಾಗೇಂದ್ರ ಅರಸ್‌ ಕೂಡ ಸಾಥ್‌ ನೀಡಿದ್ದರು. ಅವತ್ತಿಗೆ ಅದೊಂದು ವಿಶೇಷ ಕಾರ್ಯಕ್ರಮ ಅದು. ಒಂದೇ ವೇದಿಕೆ ಮೇಲೆ12 ಚಿತ್ರಗಳ ಪೋಸ್ಟರ್‌ ಲಾಂಚ್‌ ಅಂದ್ರೆ ತಮಾಷೆನಾ? ರೇಣುಕಾಂಬ ಸ್ಟುಡಿಯೋ ಇತಿಹಾಸದಲ್ಲೂ ಅದೇ ಮೊದಲು. ಅಂತಹದೊಂದು ಕಾರ್ಯಕ್ರಮಕ್ಕೆ ಕಾರಣ ಆಗಿದ್ದು ರಂಗ ಕರ್ಮಿ ಅಜಯ್‌ ಕುಮಾರ್.

‌ಅಜಯ್‌ ಕುಮಾರ್‌ ಆರಂಭದಿಂದಲೂ ರಂಗಭೂಮಿಯಲ್ಲಿ ಗುರುತಿಸಿಕೊಂಡವರು. ಅನೇಕ ರಂಗತಂಡಗಳಲ್ಲಿ ಕೆಲಸ ಮಾಡಿದವರು. ಅದೇ ಅನುಭವದಲ್ಲಿ ಒಂದು ಮಕ್ಕಳ ನಾಟಕ ಕೂಡ ನಿರ್ದೇಶಿಸಿದ್ದರು. ಈಗ ತಾವೇ ಮುಂದೆ ನಿಂತು ಈಗ ಗೆಳೆಯರ ಜತೆಗೆ ಸೇರಿಕೊಂಡು ಸಿನಿಮಾ ನಿರ್ಮಾಣ ಹಾಗೂ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಒಂದಲ್ಲ, ಎರಡಲ್ಲ ಏಕ ಕಾಲದಲ್ಲೇ 12 ಸಿನಿಮಾಗಳ ನಿರ್ಮಾಣ ಅಜಯ್‌ ಸರ್ಕಲ್‌ ಮೂಲಕ ಆಗುತ್ತಿದೆ. ಅವೆಲ್ಲ ಚಿತ್ರಗಳ ಪೋಸ್ಟರ್‌ ಲಾಂಚ್‌ ಕಾರ್ಯಕ್ರಮ ಅವತ್ತು ನಡೆಯಿತು. ನಟಿ ರಾಗಿಣಿ, ಶಶಿಧರ್ ಅಡಪ್, ನಾಗೇಂದ್ರ ಪ್ರಸಾದ್, ನಾಗೇಂದ್ರ ಅರಸ್ ಮತ್ತಿತರು ಪೋಸ್ಟರ್ ಅನಾವರಣಗೊಳಿಸಿದರು. ಶಫಿ ಹೆಬ್ಬಾಳ್‌ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ʼ ಲವ್‌ ಯು ಚಿನ್ನʼ ಚಿತ್ರಕ್ಕೆ ತನುಶ್ರೀ ಬಿ.ವಿ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಈ ಚಿತ್ರದ ಪೋಸ್ಟರ್‌ ಅನ್ನು ನಟಿ ರಾಗಿಣಿ ಲಾಂಚ್‌ ಮಾಡಿದರು.

ದೇವನಹಳ್ಳಿ ದೇವರಾಜ್‌ ನಿರ್ಮಾಣ ಹಾಗೂ ನಿರ್ದೇಶನದ ” ಆಂಡ್ರಾಯ್ಡ್‌ ಫೋನ್‌ʼ ಚಿತ್ರದ ಪೋಸ್ಟರ್‌ ಅನ್ನು ಕೂಡ ರಾಗಿಣಿ ಲಾಂಚ್‌ ಮಾಡಿದರು. ಚನ್ನಬಸವ ನಿರ್ಮಾಣದ ʼಮಂದಾರʼ ಚಿತ್ರಕ್ಕೆ ಯುವ ಪ್ರತಿಭೆ ನವ್ಯಾಶ್ರೀ ಆಕ್ಷನ್‌ ಕಟ್‌ ಹೇಳುತ್ತಿದ್ದು, ಈ ಚಿತ್ರದ ಪೋಸ್ಟರ್‌ ಅನ್ನು ರಾಗಿಣಿ ಲಾಂಚ್‌ ಮಾಡಿದರು. ನೆಲ ಮಂಗಲ ರಾಘವೇದ್ರ ನಿರ್ಮಾಣ ಹಾಗೂ ವನಿತಾ ನಿರ್ದೇಶನದ ʼರಕ್ತಾಕ್ಷಿʼ, ಮಂಜುನಾಥ್‌ ನಿರ್ಮಾಣ ಹಾಗೂ ಅಶ್ವಿನಿ ನಿರ್ದೇಶನದ ʼದೇವರ ಮಕ್ಕಳುʼ, ಅಜಯ್‌ ಕುಮಾರ್‌ ನಿರ್ಮಾಣ ಹಾಗೂ ನಿರ್ದೇಶನದ “ಪ್ರೇಮಂ ಶರಣಂ ಗಚ್ಚಾಮಿʼ, ಅಜಯ್‌ ಕುಮಾರ್‌ ನಿರ್ಮಾಣ ಹಾಗೂ ನಿರ್ದೇಶನದ ಮತ್ತೊಂದು ಚಿತ್ರ ʼಡ್ರಗ್‌ ಪೆಡ್ಲರ್‌ʼ, ಕುಚೇಲಾ ನಿರ್ಮಾಣ ಹಾಗೂ ಕಂಕಣವಾಡಿ ಬಸವರಾಜ್‌ ನಿರ್ದೇಶನದ ಠಕ್ಕ, ಶಿವ ಸಾಹಿತ್ಯ ನಿರ್ಮಾಣ ಹಾಗೂ ದಿನೇಶ್‌ ನಿರ್ದೇಶನದ ವ್ಯಾಕ್ಷಿನ್‌ , ಲಕ್ಷ್ಮಿ ನಿರ್ಮಾಣ ಹಾಗೂ ಶಿವ ಸಾಹಿತ್ಯ ನಿರ್ದೇಶನದ ಸಂಧ್ಯಾರಾಗ, ಯೋಗಾ ಮಕರಂಧ್‌ ನಿರ್ಮಾಣ ಹಾಗೂ ಅಜಯ್‌ ಕುಮಾರ್‌ ನಿರ್ದೇಶನದ ಶ್ರೀರಾಮ ಸಿದ್ದಿ ಹಾಗೂ ಲಾಕ್‌ ಡೌನ್‌ ಚಿತ್ರಗಳ ಪೋಸ್ಟರ್‌ ಗಳು ಲಾಂಚ್‌ ಆದವು.

ಲಾಕ್‌ ಡೌನ್‌ ಸಮಯದಲ್ಲಿ ಸಿನಿಮಾ ಕಥೆ ಬರೆಯಬೇಕೆಂದು ಹೊರಟೆ. ಒಂದು ಕತೆ ಬರೆದು ಅದಕ್ಕೆ ಬಂಡವಾಳ ಹೂಡುವವರನ್ನು ಹುಡುಕು ಹೊರಟೆ. ಯಾರು ಕೂಡ ದೊಡ್ಡ ಮಟ್ಟದಲ್ಲಿ ಬಂಡವಾಳ ಹೂಡಲು ಸಿಗಲಿಲ್ಲ. ಆಗ ಹೊಳೆದಿದ್ದು ಸಣ್ಣ ಮಟ್ಟದಲ್ಲಿಯೇ ಸಿನಿಮಾ ನಿರ್ಮಾಣ ಮಾಡೋಣ ಎನ್ನುವ ಆಲೋಚನೆ. ಇಲ್ಲಿರುವ ಅಷ್ಟು ಸಿನಿಮಾಗಳು ತಲಾ 50 ಲಕ್ಷದಷ್ಟು ಬಂಡವಾಳದಲ್ಲಿ ನಿರ್ಮಾಣ ಆಗುತ್ತಿವೆ. ಕಡಿಮೆ ಬಂಡವಾಳದಲ್ಲಿ ಗುಣಮಟ್ಟದ ಸಿನಿಮಾ ಮಾಡಬೇಕೆನ್ನುವುದು ನಮ್ಮ ಆಶಯ ಅಂತ ಅಜಯ್‌ ಸರ್ಕಲ್‌ ಮುಖ್ಯಸ್ಥ ಅಜಯ್‌ ಕುಮಾರ್‌ ಹೇಳಿದರು. ಗಣ್ಯರು ಮಾತನಾಡಿ ತಂಡಕ್ಕೆ ಶುಭಾಶಯ ಕೋರಿದರು.

Related Posts

error: Content is protected !!