ತೆಲುಗು ನಟ ನಾನಿ ಅಭಿನಯದ ಹೊಸ ಸಿನಿಮಾ ‘ಶ್ಯಾಮ್ ಸಿಂಘ ರಾಯ್’ ಸೆಟ್ಟೇರಿದ್ದು, ಫಸ್ಟ್ ಲುಕ್ ಕೂಡ ಬಿಡುಗಡೆಯಾಗಿದೆ. ವಿಜಯ್ ದೇವರಕೊಂಡ ಅವರಿಗೆ ‘ಟ್ಯಾಕ್ಸಿವಾಲಾ’ ನಿರ್ದೇಶಿಸಿದ್ದ ರಾಹುಲ್ ಸಂಕೃತ್ಯಾನ್ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ನಾನಿ ಅವರು ಬೆಂಗಾಲಿ ಮೂಲದ ಯುವಕನ ಪಾತ್ರದಲ್ಲಿರುತ್ತಾರೆ ಎನ್ನವುದು ವಿಶೇಷ. ದಕ್ಷಿಣದ ಖ್ಯಾತ ನಟಿ ಸಾಯಿ ಪಲ್ಲವಿ ಮತ್ತು ಕನ್ನಡ ಮೂಲದ ‘ಉಪ್ಪೆನ’ ತೆಲುಗು ಸಿನಿಮಾ ಖ್ಯಾತಿಯ ನವನಟಿ ಕೃತಿ ಶೆಟ್ಟಿ ಚಿತ್ರದ ಇಬ್ಬರು ನಾಯಕಿಯರು. ಚಿತ್ರದ ಫಸ್ಟ್ ಲುಕ್ ಗಮನಿಸಿದರೆ, ಇದು ಸ್ವಾತಂತ್ರ್ಯ ಪೂರ್ವದ ಕಥಾನಕ ಎನ್ನುವುದು ತಿಳಿದುಬರುತ್ತದೆ.
ಚಿತ್ರದಲ್ಲಿ ನಾನಿ ಬೆಂಗಾಲಿ ಮೂಲದ ಯುವಕನಾಗಿ ಕಾಣಿಸಿಕೊಳ್ಳುತ್ತಿರುವುದು ಅವರ ಅಭಿಮಾನಿಗಳಿಗೂ ಅಚ್ಚರಿ ತಂದಿದೆ. ದೂರದ ಕೊಲ್ಕೊತ್ತಾದ ಕತೆಯನ್ನು ತೆಲುಗು ನಾಡಿಗೆ ಹೇಗೆ ಕನೆಕ್ಟ್ ಮಾಡುತ್ತಿದ್ದಾರೆ ಎನ್ನುವುದು ಅವರ ಗೊಂದಲ! ಫಸ್ಟ್ ಲುಕ್‌ನಲ್ಲಿ ಯುವತಿಯೊಬ್ಬಳು ನಾನಿಯನ್ನು ತಬ್ಬಿ ನಿಂತಿದ್ದು, ಆಕೆಯ ಮುಖ ಮರೆಮಾಚಲಾಗಿದೆ. ಒಟ್ಟಾರೆ ಫಸ್ಟ್‌ಲುಕ್ ಪೋಸ್ಟರ್ ಗಮನ ಸೆಳೆಯುವುದರ ಜೊತೆಗೆ ಕುತೂಹಲಕ್ಕೂ ಎಡೆಮಾಡಿಕೊಟ್ಟಿದೆ. ಈ ಮಧ್ಯೆ ನಾನಿ ಅವರ ‘ಟಕ್ ಜಗದೀಶ್’ ಸಿನಿಮಾ ಸಿದ್ಧವಾಗಿದ್ದು, ಏಪ್ರಿಲ್ 23ಕ್ಕೆ ತೆರೆಕಾಣುತ್ತಿದೆ.