ನಟಿ ರಾಗಿಣಿ ಅವರ ಸೆಕೆಂಡ್ ಇನ್ನಿಂಗ್ಸ್ ಜೋರಾಗಿದೆ. ಡ್ರಗ್ಸ್ ಕೇಸ್ ಪ್ರಕರಣದಲ್ಲಿ ಅವರು ಜೈಲು ಪಾಲಾದ ನಂತರ ಅವರ ಕತೆ ಮುಗಿಯಿತು ಅಂತೆಲ್ಲ ಗುನುಗಿಕೊಂಡವರು ಶಾಕ್ ಆಗುವ ಹಾಗೆ ಕಲರ್ ಫುಲ್ ಜಗತ್ತಿನಲ್ಲಿ ಮತ್ತಷ್ಟು ಕಲರ್ ಫುಲ್ ಆಗಿಯೇ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಒಂದೆಡೆ ಸಿನಿಮಾ ಜರ್ನಿ ಶುರುವಾಗಿದೆ. ಸ್ವರ್ಣಲತಾ ಪ್ರೊಡಕ್ಷನ್ ನಲ್ಲಿ ವಿಶಾಲ್ ಶೇಖರ್ ನಿರ್ದೇಶನದ “ಕರ್ವ 3ʼ ನಲ್ಲಿ ರಾಗಿಣಿ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಅದೀಗ ಅಧಿಕೃತವಾಗಿ ಅನೌನ್ಸ್ ಆಗಿದೆ.
ಹಾಗೆಯೇ ರಾಗಿಣಿ ಪೂರ್ಣ ಪ್ರಮಾಣದಲ್ಲಿ ನಾಯಕಿ ಆಗಿ ಅಭಿನಯಿಸುತ್ತಿರುವ ಮತ್ತೆರೆಡು ಚಿತ್ರಗಳು ಇಷ್ಟರಲ್ಲಿಯೇ ಅನೌನ್ಸ್ ಆಗುವುದು ಕೂಡ ಗ್ಯಾರಂಟಿ ಆಗಿದೆ, ಈ ನಡುವೆಯೇ “ಕರ್ನಾಟಕ ಸ್ಟೇಟ್ ಫಿಜಿಕಲಿ ಚಾಲೆಂಜ್ಡ್ ಕ್ರಿಕೆಟ್ ಅಸೋಷಿಯೇಷನ್ʼ ಆಯೋಜಿಸಿರುವ ʼಟಿ 10ʼ ಪಂದ್ಯಾವಳಿಗೆ ನಟಿ ರಾಗಿಣಿ ದ್ವಿವೇದಿ ಬ್ರಾಂಡ್ ಅಂಬಾಸಡರ್ ಆಗಿದ್ದಾರೆ.ಸಿನಿಮಾ ಅಚೆ ಸ್ಪೋರ್ಟ್ ನಲ್ಲೂ ರಾಗಿಣಿ ಅವರದ್ದು ಮುಂಚೂಣಿಯ ಹೆಸರು. ಈ ಹಿಂದೆ ಸಿಸಿಎಲ್ ಗೆ ಬ್ರಾಂಡ್ ಅಂಬಾಸಡರ್ ಆಗಿದ್ದರು.ಆನಂತರ ಬಳ್ಳಾಗಿ ಟಸ್ಕರ್ ಕುಸ್ತಿ ಟೀಮ್ ಗೆ ತಾವೇ ಮಾಲೀಕರು ಆಗಿದ್ದರು. 10 ಈಗ ಮತ್ತೆ ಕ್ರಿಡಾಂಗಣಕ್ಕೆ ರಾಗಿಣಿ ಎಂಟ್ರಿ ಆಗಿದ್ದಾರೆ.
“ಕರ್ನಾಟಕ ಸ್ಟೇಟ್ ಫಿಜಿಕಲಿ ಚಾಲೆಂಜ್ಡ್ ಕ್ರಿಕೆಟ್ ಅಸೋಷಿಯೇಷನ್ʼ ಆಯೋಜಿಸಿರುವ ʼಟಿ 10ʼ ಪಂದ್ಯಾವಳಿಗೆ ನಟಿ ರಾಗಿಣಿ ದ್ವಿವೇದಿ ಬ್ರಾಂಡ್ ಅಂಬಾಸಡರ್ ಆಗಿರುವುದು ಕುತೂಹಲಕಾರಿ ಆಗಿದೆ. ಟಿ ಕ್ರಿಕೆಟ್ ಪಂದ್ಯಾವಳಿ ಮಾರ್ಚ್ 11 ರಿಂದ ಮಾರ್ಚ್ 18 ರವರೆಗೆ ನೋಯ್ಡಾದ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. 28 ತಂಡಗಳು ಇದರಲ್ಲಿವೆ. ನಾಳೆ( ಫೆ.26) ಕ್ಕೆ ಟೀಮ್ ನ ಎಲ್ಲಾ ವಿವರ ಹೊರ ಬೀಳುತ್ತಿದೆ. ಹಾಗೆಯೇ ಪಂದ್ಯಾವಳಿ ಇನ್ನಷ್ಟು ವಿವರಗಳು ಗೊತ್ತಾಗಲಿವೆ. ಅದಕ್ಕಾಗಿಯೇ ಕೆಎಸ್‌ಪಿಸಿಸಿ ಪತ್ರಿಕಾಗೋಷ್ಟಿ ಕರೆದಿದೆ.