ಮಂಚು ವಿಷ್ಣು ಮತ್ತು ಕಾಜಲ್ ಅಗರ್‌ವಾಲ್ ನಟನೆಯ ‘ಮೋಸಗಲ್ಲು’ ತೆಲುಗು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಮೆಗಾಸ್ಟಾರ್ ಚಿರಂಜೀವಿ ಇಂದು ಟ್ರೈಲರ್ ರಿಲೀಸ್ ಮಾಡಿ ಶುಭ ಹಾರೈಸಿದ್ದಾರೆ. ಅಮೆರಿಕಾದಲ್ಲಿ ನಡೆದ ಬಹುದೊಡ್ಡ ಮೊತ್ತದ ಸೈಬರ್ ಕ್ರೈಂ ದರೋಡೆ ಪ್ರಕರಣ ಆಧರಿಸಿ ಹೆಣೆದ ಕತೆಯಿದು. ಬಾಲಿವುಡ್ ನಟ ಸುನೀಲ್ ಶೆಟ್ಟಿ ಪೊಲೀಸ್ ಅಧಿಕಾರಿಯಾಗಿ ಈ ಚಿತ್ರದೊಂದಿಗೆ ಟಾಲಿವುಡ್‌ಗೆ ಪದಾರ್ಪಣೆ ಮಾಡಿದ್ದಾರೆ.
ಟ್ರೈಲರ್ ನೋಡಿದಾಗ ಮುಖ್ಯಪಾತ್ರಧಾರಿಗಳಾದ ಮಂಚು ವಿಷ್ಣು ಮತ್ತು ಕಾಜಲ್ ಅಗರ್‌ವಾಲ್ ಹಣಕ್ಕಾಗಿ ಏನು ಬೇಕಾದರೂ ಮಾಡುವವರಂತೆ ಕಾಣುತ್ತಾರೆ! ನೋಡುಗರಲ್ಲಿ ಸಾಕಷ್ಟು ಕುತೂಹಲ ಉಂಟುಮಾಡುವ ಸನ್ನಿವೇಶಗಳಿದ್ದು, ಸಂಭಾಷಣೆಗಳಿಲ್ಲದೆ ಹಿನ್ನೆಲೆ ಸಂಗೀತವಷ್ಟೇ ಇರುವುದು ವಿಶೇಷ. ಕೆಲವು ಸ್ಟಂಟ್‌ಗಳಿದ್ದು, ಭರಪೂರ ಆಕ್ಷನ್ ದೃಶ್ಯಗಳೂ ಇರುತ್ತವೆ ಎನ್ನುವುದಕ್ಕೆ ಸಾಕ್ಷ್ಯ ನುಡಿಯುತ್ತವೆ. ಜೆಫ್ರೀ ಗೀ ಚಿನ್ ನಿರ್ದೇಶನದ ಈ ಸ್ಟೈಲಿಶ್ ಸಿನಿಮಾ ಮುಂದಿನ ತಿಂಗಳಲ್ಲಿ ತೆರೆಕಾಣಲಿದೆ.