ಶಿವರಾಜಕುಮಾರ್ ಅವರು ಕನ್ನಡ ಸಿನಿಮಾರಂಗಕ್ಕೆ ಬಂದು ೩೫ ವರ್ಷಗಳು ಸಂದಿವೆ. ಈ ಮೂರುವರೆ ದಶಕವನ್ನು ಯಶಸ್ವಿಯಾಗಿ ಮುಗಿಸಿರುವ ಶಿವರಾಜಕುಮಾರ್ ಅವರಿಗೆ ಎಲ್ಲೆಡೆಯಿಂದಲೂ ಶುಭಾಶಯ ಹರಿದುಬಂದಿದೆ. ಈಗ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 35 ವರ್ಷ ಪೂರೈಸಿದ ಹಿನ್ನಲೆಯಲ್ಲಿಯೇ ಅವರ ಪ್ರೀತಿಯ ಅಭಿಮಾನಿಗಳು ಆ ಸಂಭ್ರಮದಲ್ಲೇ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದ್ದರು.
. “ಶಿವಣ್ಣ ಪ್ರೀಮಿಯರ್ ಲೀಗ್ ಸೀಸನ್ ೧” ಫೆಬ್ರವರಿ ೨೦ ಮತ್ತು ೨೧ರಂದು ಎರಡು ದಿನಗಳ ಕಾಲ ಯಶಸ್ವಿಯಾಗಿ ನಡೆದಿದೆ. ಅಂದಹಾಗೆ, ಶಿವ ಸೈನ್ಯ ಮತ್ತು ಶಿವು ಅಡ್ಡ ಬನಶಂಕರಿ ಆಯೋಜಿಸಿದ್ದ ಈ ಟೂರ್ನಮೆಂಟ್‌ಗೆ ಅಭಿಮಾನಿಗಳು, ಸಿನಿಮಾ ತಂತ್ರಜ್ಞರು, ಕಲಾವಿದರು, ಸಿನಿಮಾ ತಂಡಗಳು, ಸಿನಿಮಾ ಪತ್ರಕರ್ತರು ಸೇರಿದಂತೆ ಒಟ್ಟು 12 ತಂಡಗಳು ಭಾಗವಹಿಸಿದ್ದವು.
ಈ ಟೂರ್ನಮೆಂಟ್‌ನಲ್ಲಿ ಭಾಗವಹಿಸಿದ್ದ ರುಸ್ತುಂ ರೈಮ್ಸ್ ( ರೇಮ್ಸ್ ಸಿನೆಮಾ ತಂಡ) ವಿಜಯಶಾಲಿಯಾದರೆ, ರನ್ನರ್ ಅಪ್ ತಂಡವಾಗಿ ಶಿವಸೈನ್ಯ ಸ್ಪಾರ್ಟನ್ಸ್ (ಶಿವಣ್ಣ ಅಭಿಮಾನಿ ಸಂಘ) ಹೊರಹೊಮ್ಮಿದೆ. ಇನ್ನು, ಈ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ, ಶುಭಕೋರಿದ್ದು ಶಾಸಕ ವಿ.ಸೋಮಣ್ಣ, ಜೊತೆಯಲ್ಲಿ ಅರುಣ್ ಸೋಮಣ್ಣ ಹಾಗೂ ಉಮೇಶ್ ಶೆಟ್ಟಿ ಕೂಡ ಪಂದ್ಯಾವಳಿಗೆ ಸಾಥ್ ಕೊಟ್ಟರು.
ಇಡೀ ಟೂರ್ನಮೆಂಟ್ ನಲ್ಲಿ ಮೊದಲ ದಿನದಿಂದ ಕೊನೆ ಕ್ಷಣದವರೆಗೂ ಜೊತೆ ಇದ್ದು, ಎಲ್ಲಾ ವಿಚಾರಗಳಿಗೂ ಸಾಥ್ ಕೊಟ್ಟಿದ್ದು ನಿರ್ಮಾಪಕ ಭಾ.ಮ. ಹರೀಶ್. ವಿಜಯನಗರದ ಬಿಜಿಎಸ್ ಗ್ರೌಂಡ್‌ನಲ್ಲಿ ನಡೆದ ಈ ಪಂದ್ಯಾವಳಿಯಲ್ಲಿ ಧೀರನ್ ರಾಮ್ ಕುಮಾರ್, ದುನಿಯಾ ವಿಜಯ್, ನಿರ್ಮಾಪಕ ಕೆ ಪಿ ಶ್ರೀಕಾಂತ್, ನಟಿ ಸುಮನ್ ನಗರ್ಕರ್ ಹೀಗೆ ಹಲವರು ಆಗಮಿಸಿ, ಕ್ರಿಕೆಟ್ ಪಂದ್ಯಾವಳಿ ವೀಕ್ಷಿಸಿ, ಯಶಸ್ವಿಗೊಳಿಸಿದರು.