ನ್ಯೂಯಾರ್ಕ್‌ನಲ್ಲಿ ಹರ್ಷಿಕಾ ಪೂಣಚ್ಚ , ಮಾಲ್ಡಿವ್ಸ್ ನಲ್ಲಿ ಲವ್ ಮಾಕ್ಟೆಲ್ ಜೋಡಿ !

ಲಾಕ್ ಡೌನ್ ಪರಿಣಾಮ‌ ಸರಿ‌ ಸುಮಾರು ಒಂದು ವರ್ಷದಷ್ಟು ಕಾಲ ಎಲ್ಲಿಗೂ ಹೋಗದೆ ಬೇಸತ್ತಿದ್ದ ಸ್ಯಾಂಡಲ್ವುಡ್ ಸ್ಟಾರ್ಸ್ ಈಗ ಚಿಟ್ಟೆಯಂತೆ ಹಾರಾಡುತ್ತಿದ್ದಾರೆ. ಕೆಲವರಂತೂ ವಿದೇಶ ಪ್ರವಾಸಕ್ಕೆ ಅವಸರದಲ್ಲೇ ವಿಮಾನ ಹತ್ತುತ್ತಿದ್ದಾರೆ. ಸದ್ಯಕ್ಕೆ ಆ ರೀತಿ ಈಗ ಬೆಂಗಳೂರಿನಿಂದ ಲವ್‌ ಮಾಕ್ಟೆಲ್‌ ಜೋಡಿ ಡಾರ್ಲಿಂಗ್‌ ಕೃಷ್ಣ ಹಾಗೂ ಮಿಲನಾ ನಾಗರಾಜ್‌ , ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ ವಿದೇಶಕ್ಕೆ ಹಾರಿ ಸಖತ್‌ ಎಂಜಾಯ್‌ ಮಾಡುತ್ತಿರುವ ವಿಡಿಯೋ ಹಾಗೂ ಪೋಟೋಗಳು ಸೋಷಲ್‌ ಮೀಡಿಯಾದಲ್ಲಿ ಭರ್ಜರಿ ಸದ್ದು ಮಾಡುತ್ತಿವೆ.

ವೈಟ್‌ ಸ್ನೋ ಮೇಲೆ ಮಿಲ್ಕಿ ಬ್ಯುಟಿ…

ಕನ್ನಡದ ಮಿಲ್ಕಿ ಬ್ಯೂಟಿ ಖ್ಯಾತಿಯ ನಟಿ ಹರ್ಷಿಕಾ ಪೂಣಚ್ಚ ಈಗ ನ್ಯೂಯಾರ್ಕ್‌ ನಲ್ಲಿದ್ದಾರೆ. ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಸಾಕಷ್ಟು ದಿನಗಳ ಕಾಲ ಮನೆಯಲ್ಲೇ ಉಳಿದಿದ್ದ ಅವರು, ಈಗ ಬೇಸರ ಕಳೆದುಕೊಳ್ಳುವುದಕ್ಕೆ ನ್ಯೂಯಾರ್ಕ್‌ ಗೆ ಹಾರಿದ್ದಾರೆ. ನ್ಯೂಯಾರ್ಕ್‌ ನ ವೈಟ್‌ ಸ್ನೋ ನಲ್ಲಿ ಸಖತ್‌ ಆಗಿ ಹೆಜ್ಜೆ ಹಾಕುತ್ತಾ ಎಂಜಾಯ್‌ ಮಾಡುತ್ತಿದ್ದಾರೆ. ಆ ದೃಶ್ಯಗಳ ವಿಡಿಯೋ ಮತ್ತು ಫೋಟೋಗಳು ಈಗ ಸೋಷಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

ಕನ್ನಡ ಸಿನಿಮಾ ಮಟ್ಟಿಗೆ ನಟಿ ಹರ್ಷಿಕಾ ಪೂಣಚ್ಚ ಅಷ್ಟಾಗಿ ಬ್ಯುಸಿ ಆಗಿಲ್ಲ. ಹಿಂದೆಲ್ಲ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದರು. ಈಗ ಒಂದಷ್ಟು ಚೂಸಿ ಆಗಿದ್ದು, ಒಳ್ಳೆಯ ಪಾತ್ರಗಳು ಸಿಕ್ಕಾಗಷ್ಟೇ ನಟಿಸುತ್ತಿರುವುದು ನಿಮಗೂ ಗೊತ್ತು. ಹರ್ಷಿಕಾ ನ್ಯೂಯಾರ್ಕ್‌ ಪ್ರವಾಸದ ಆಕ್ಚ್ಯುವಲ್‌ ಉದ್ದೇಶ ನಮಗೂ ಗೊತ್ತಿಲ್ಲ. ಆದರೆ ಅವರು ನ್ಯೂ ಯಾರ್ಕ್‌ ನಲ್ಲಿರುವುದನ್ನು ಅವರೇ ರಿವೀಲ್‌ ಮಾಡಿದ್ದಾರೆ.

ಮಾಲ್ಡಿವ್ಸ್‌ ನಲ್ಲಿ ಲವ್‌ ಮಾಕ್ಟೆಲ್‌ ಜೋಡಿ…

ʼಲವ್‌ ಮಾಕ್ಟೆಲ್‌ʼ ಖ್ಯಾತಿಯ ಜೋಡಿ ಡಾರ್ಲಿಂಗ್‌ ಕೃಷ್ಣ ಹಾಗೂ ಮಿಲನಾ ನಾಗರಾಜ್‌ ಈಗ ಮಾಲ್ಡಿವ್ಸ್‌ ನಲ್ಲಿ ಎಂಜಾಯ್‌ ಮಾಡುತ್ತಿದ್ದಾರೆ. ಮದುವೆ ಮುಗಿಸಿಕೊಂಡು ಹನಿಮೂನ್‌ ಪ್ರವಾಸಕ್ಕೆ ಈ ಜೋಡಿ ಮಾಲ್ಡಿವ್ಸ್‌ ನಲ್ಲಿದೆ. ಮಾಲ್ಡಿವ್ಸ್‌ ಅಂದ್ರೆ ಹೆಚ್ಚೇನು ಹೇಳಬೇಕಿಲ್ಲ. ಅದೊಂದು ಕಡಲ ತೀರಾ. ಸುಂದರವಾದ ಬೀಚ್‌ ರೆಸಾರ್ಟ್ಸ್‌ . ಇತ್ತೀಚೆಗಷ್ಟೇ ನಟ ಯಶ್‌ ಹಾಗೂ ರಾಧಿಕಾ ಪಂಡಿತ್‌ ಕೂಡ ಮಾಲ್ಡೀವ್ಸ್‌ ಗೆ ಹೋಗಿದ್ದರು. ಈಗ ಈ ಸರದಿ ನವ ದಂಪತಿ ಕೃಷ್ಣ ಹಾಗೂ ಮಿಲನಾ ನಾಗರಾಜ್‌ ಅವರದ್ದು.

Related Posts

error: Content is protected !!