ಹರಿಪ್ರಿಯಾ ಎಂಬ ಸೀರೆಪ್ರಿಯೆ , ಈ ಕುಮುದಾಗೆ ಸೀರೆ ಯಾಕೆ ಅಂದ?

ಹೆಣ್ಣಿಗೆ ಸೀರೆ ಯಾಕೆ ಅಂದಾ? ಬೆಳ್ಳಿತೆರೆ ಮೇಲೆ ಮಾದಕ ನಟಿ ಶ್ರೀದೇವಿಕಾ ಅವರಿಗೆ ಕ್ರೇಜಿಸ್ಟಾರ್ ರವಿಚಂದ್ರನ್ ಹೀಗೇಕೆ ಕೇಳಿದ್ರೋ ಗೊತ್ತಿಲ್ಲ, ಆದರೆ ಹೆಣ್ಣಿಗೆ ಸೀರೇನೆ ಚಂದ ಅಲ್ವಾ? ಇಲ್ಲಿ ಹೌದು ಅಂತ, ಸಖತ್ ಆದ ಸೀರೆಯುಟ್ಟು ದೀವಿನಾದ ಪೋಸು ನೀಡುತ್ತಾರೆ ಗ್ಲಾಮರಸ್ ನಟಿ ಹರಿಪ್ರಿಯಾ.

ಆದ್ರೆ, ಗ್ಲಾಮರಸ್ ನಟಿ ಹರಿಪ್ರಿಯಾ ಅಂದಾಕ್ಷಣ ಸಿನಿಮಾ ಪ್ರೇಕ್ಷಕರಿಗೆ ನೆನಪಾಗೋದು ʼನೀರ್ ದೋಸೆ ʼಚಿತ್ರದ ಕುಮುದಾ ಪಾತ್ರ. ಜಗ್ಗೇಶ್ ಅಭಿನಯದ ಈ ಚಿತ್ರದಲ್ಲಿ ಹರಿಪ್ರಿಯಾ ಅಭಿನಯಿಸಿದ್ದು ವೇಶೆ ಪಾತ್ರ.ಈ ಕುಮುದಾ ಸಿಕ್ಕಾಪಟ್ಟೆ ಹಾಟ್. ಉಡುಗೆ, ತೊಡುಗೆ ಮಾತ್ರವಲ್ಲ ಅವರ ಮಾತು ಕೂಡ ಅಷ್ಟೇ ಹಸಿ ಬಿಸಿ. ಹಾಗಾಗಿ ಸಿನಿಮಾ ಅಂದಾಕ್ಷಣ ಕನ್ನಡ ಸಿನಿಮಾ ಪ್ರೇಕ್ಷಕ ನಿಗೆ ಹಾಟ್ ಹರಿಪ್ರಿಯಾ ನೆನಪಾದರೂ, ನಿಜ ಜೀವನದಲ್ಲಿ ಅವರು ಇರೋದೇ ಬೇರೆ.

ಪಕ್ಕಾ ಸಂಪ್ರದಾಯ ಸ್ಥ ಕುಟುಂಬದ ಹಿನ್ನೆಲೆ ಹರಿಪ್ರಿಯಾ ಅವರದು. ಶುದ್ಧ ದೈವ ಭಕ್ತೆ. ಹಾಗೆಯೇ ಸೀರೆಯೇ ಅವರ ನೆಚ್ಚಿ‌ನ ಉಡುಗೆ. ಸೋಷಲ್ ಮೀಡಿಯಾದಲ್ಲಿ ಅವರ ಇನ್ಸ್ಟಾ, ಪೇಸ್ ಬುಕ್ , ಟ್ವಿಟರ್ ಖಾತೆ ತೆರೆದರೆ ದಿನ ನಿತ್ಯ ತರಾಹೇವಾರಿ ಬಣ್ಣದ ಸೀರೆಗಳುಟ್ಟು ಪೋಸು ನೀಡಿರುವುದು ನಿಮಗೂ ಗೊತ್ತು. ಅಷ್ಟೇ ಅಲ್ಲ, ತೆರೆ ಮೇಲೂ ಹರಿಪ್ರಿಯಾ ಸೀರೆಯಲ್ಲಿ ಕಾಣಿಸಿಕೊಂಡರೆ ಚೆಂದ.

ಹಾಗಂತ ಅವರ ಅಭಿಮಾನಿಗಳು ಬಯಸುತ್ತಾರಂತೆ. ಮುನಿರತ್ನ ಕುರುಕ್ಷೇತ್ರದಲ್ಲಿ ನಟಿ ಹರಿಪ್ರಿಯಾ ಚೆಂದದ ಸೀರೆಯುಟ್ಟು ಕಾಣಿಸಿಕೊಂಡಿದ್ದಕ್ಕೂ ಆಗಾಧ ಮೆಚ್ಚುಗೆ ಸಿಕ್ಕಿತ್ತು. ಇದೇ ಕಾರಣಕ್ಕೋ ಏನೋ, ಸೀರೆಯಲ್ಲಿ ಸದಾ ಮಿಂಚುತ್ತಾರೆ ನಟಿ ಹರಿಪ್ರಿಯಾ‌.

ಅಂದ ಹಾಗೆ ಹರಿಪ್ರಿಯಾ ಈಗ ಕನ್ನಡದ ಬ್ಯುಸಿ ನಟಿಯರಲ್ಲಿ ಒಬ್ಬರು. ಉಗ್ರಂ ನಂತರ ಹರಿಪ್ರಿಯಾ ಅವರದ್ದು ಸೆಕೆಂಡ್ ಇನ್ನಿಂಗ್ಸ್.‌ಉಗ್ರಂ ಮೂಲಕ ಸಿಕ್ಕ ದೊಡ್ಡ ಸಕ್ಸಸ್ ನಂತರ ಹರಿಪ್ರಿಯಾ , ನೀರ್ ದೋಸೆ ಮೂಲಕ ಫಿನಿಕ್ಸ್ ನಂತೆ ಎದ್ದು ಕುಳಿತರು.ಸಾಲು ಸಾಲು ಸಿನಿಮಾಗಳು ಅವರ ಕೈಯಲ್ಲಿವೆ. ಈಗಷ್ಟೇ ಅವರು ವಿಜಯ್ ಪ್ರಸಾದ್ ನಿರ್ದೇಶನದ’ ಪೆಟ್ರೋಮ್ಯಾಕ್ಸ್’ ಚಿತ್ರರ ಚಿತ್ರೀಕರಣ ಮುಗಿಸಿದ್ದಾರೆ.

Related Posts

error: Content is protected !!