ಅಭಿಮಾನಿ ಹೃದಯದಲ್ಲಿ ಸಲಗ – ಎದೆ ಮೇಲೆ‌ ರಾರಾಜಿಸಿದ ಸಲಗನ ಕಂಡು ವಿಜಯ್‌ ಭಾವುಕ

“ದುನಿಯಾ” ವಿಜಯ್‌ ಅಭಿನಯದ “ಸಲಗ” ಸಿನಿಮಾ ರಿಲೀಸ್‌ಗೆ ಮುನ್ನವೇ ಜೋರು ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ ವಿಜಯ್‌ ಅವರ ಗೋವಾದ ಅಭಿಮಾನಿಯೊಬ್ಬ ತನ್ನ ಕೈ ಮೇಲೆ “ಸಲಗ” ಎಂಬ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದು ಗೊತ್ತೇ ಇದೆ. ಈಗ ಮತ್ತೊಬ್ಬ ಅಭಿಮಾನಿ ತನ್ನ ಎದೆಯ ಮೇಲೆಯೇ “ಸಲಗ” ಹೆಸರನ್ನ ಹಾಕಿಸಿಕೊಂಡು ಅಭಿಮಾನ ಮೆರೆದಿದ್ದಾನೆ. ಹೌದು, ಅಭಿಮಾನಿ ಎದೆಯ ಮೇಲೆ ರಾರಾಜಿಸುತ್ತಿರುವ “ಸಲಗ” ಹೆಸರು ನೋಡಿದ ʼದುನಿಯಾʼ ವಿಜಯ್‌ ಅಭಿಮಾನಿಯ ಪ್ರೀತಿಯ ಅಭಿಮಾನಿಗೆ ಫಿದಾ ಆಗಿದ್ದಾರೆ.

ಸದ್ಯಕ್ಕೆ ಈಗ “ದುನಿಯಾ” ವಿಜಯ್ ಅಭಿಮಾನಿಗಳಿಂದ ಟ್ಯಾಟೋ‌ ಅಭಿಯಾನ ಕೊಂಚ ಜೋರಾಗಿಯೇ ನಡೆಯುತ್ತಿದೆ. ಅದರಲ್ಲೂ ಒಂದು ರೀತಿ ಈ ಅಭಿಯಾನ ಸೆನ್ಸೇಷನ್ ಕೂಡ ಕ್ರಿಯೇಟ್ ಮಾಡುತ್ತಿದೆ. ದಿನ ಕಳೆದಂತೆ “ಸಲಗ” ಚಿತ್ರದ ಕ್ರೇಜ್ ಹೆಚ್ಚುತ್ತಲೇ ಇದೆ. ವಿಜಯ್ ಅಭಿಮಾನಿಗಳು‌ ತಮ್ಮ‌ ಪ್ರೀತಿಯ ನಟನ ಸಿನಿಮಾ‌ ಮೇಲೆ‌ ತುಸು ಹೆಚ್ಚಾಗಿಯೇ ಪ್ರೀತಿ ಬೆಳೆಸಿಕೊಂಡಿದ್ದಾರೆ. ಈಗಾಗಲೇ ಟೀಸರ್ ಹಾಗೂ ರಿಲೀಸ್ ಆಗಿರುವ ಹಾಡುಗಳಿಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.

“ಸಲಗ” ಥಿಯೇಟರ್‌ಗೆ ಬರುವುದನ್ನು ಕಾತರದಿಂದಲೇ ಅಭಿಮಾನಿಗಳು ಕಾಯುತ್ತಿದ್ದಾರೆ. ಈಗಾಗಲೇ ತಮ್ಮದೇ ಆದ ರೀತಿಯಲ್ಲೇ ಅವರು ಅಭಿಮಾನವನ್ನು ತೋರಿಸುತ್ತಿದ್ದಾರೆ. ಗೋವಾ ಕನ್ನಡಿಗನೊಬ್ಬ ತನ್ನ ಕೈ ಮೇಲೆ‌‌ ಟ್ಯಾಟೋ‌ ಹಾಕಿಸಿಕೊಂಡು ಅಭಿಮಾನ ತೋರಿದ್ದ ಬೆನ್ನಲ್ಲೇ ಈಗ ಇನ್ನೊಬ್ಬ ಅಭಿಮಾನಿ ತನ್ನ ಎದೆ ಮೇಲೇನೆ “ಸಲಗ” ಟ್ಯಾಟೋ‌ ಹಾಕಿಸಿಕೊಂಡು, ಖುದ್ದು ತಮ್ಮ ಪ್ರೀತಿಯ ನಟ ವಿಜಯ್‌ ಮನೆಗೆ ಬಂದು ಅವರ ಕೈಯಲ್ಲೇ ಆ ಟ್ಯಾಟೋ ಕವರ್‌ ಅನ್ನು ಬಿಚ್ಚಿಸಿಕೊಂಡಿದ್ದಾನೆ. ಅಭಿಮಾನಿಯ ಈ ಅಭಿಮಾನಕ್ಕೆ ವಿಜಯ್‌ ಅವರೇ ಖುದ್ದು ಭಾವುಕರಾಗಿ ಅಭಿಮಾನಿಗೆ ಶರಣಗಿದ್ದಾರೆ.

Related Posts

error: Content is protected !!