ಜೂನಿಯರ್ ಚಿರು ಪುಟಾಣಿ ಕೈಯಿಂದ ರಾಜಾಮಾರ್ತಾಂಡ ಟ್ರೇಲರ್ ರಿಲೀಸ್‌!


ಚಿರಂಜೀವಿ ಸರ್ಜಾ ನಟನೆಯ ಕೊನೆಯ ಸಿನಿಮಾ ‘ರಾಜಾ ಮಾರ್ತಾಂಡ’ ತೆರೆಗೆ ಸಿದ್ಧವಾಗುತ್ತಿದೆ. ಚಿರಂಜೀವಿ ಪಾತ್ರಕ್ಕೆ ಅವರ ಸಹೋದರ ಧ್ರುವ ಡಬ್‌ ಮಾಡಿದ್ದಾರೆ.  ಫೆಬ್ರವರಿ 19ರಂದು ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ. ವಿಶೇಷವೆಂದರೆ ಈ ಟ್ರೇಲರ್‌ ಅನ್ನು ಚಿರಂಜೀವಿ ಪುಟಾಣಿ ಪುತ್ರನ ಕೈಗಳಿಂದ ಲಾಂಚ್‌ ಮಾಡಿಸಲಾಗುತ್ತಿದೆ! ಚಿತ್ರದ ನಿರ್ದೇಶಕ ರಾಮ್‌ನಾರಾಯಣ್‌ ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಈ ಸುದ್ದಿ ಹಂಚಿಕೊಂಡಿದ್ದಾರೆ. ತೊಟ್ಟಿಲಲ್ಲಿರುವ ಜ್ಯೂ.ಚಿರು ಜೊತೆಗಿನ ಸೆಲ್ಫಿ ಹಾಕಿ ಅವರು ಈ ಸುದ್ದಿಯನ್ನು ಬರೆದಿದ್ದಾರೆ.

ಜ್ಯೂ.ಚಿರಂಜೀವಿಯಿಂದ ‌ಟ್ರೇಲರ್ ಲಾಂಚ್ ಮಾಡಿಸುವ ಐಡಿಯಾಗೆ ನಟಿ  ಮೇಘನಾ ರಾಜ್‌ ಅವರೂ ಖುಷಿಯಾಗಿದ್ದಾರೆ. ಪುಟಾಣಿಯಿಂದ ಟ್ರೇಲರ್ ಬಿಡುಗಡೆಯಾಗುತ್ತಿರುವುದು ಬಹುಶಃ ಕನ್ನಡ ಚಿತ್ರರಂಗದ ಮಟ್ಟಿಗೂ ಹೊಸದು. ಇನ್ನು ಚಿರಂಜೀವಿ ನಟನೆಯ ಕೊನೆಯ ಸಿನಿಮಾ ಎನ್ನುವ ಕಾರಣಕ್ಕೆ ‘ರಾಜಾಮಾರ್ತಾಂಡ’ ಕುರಿತು ನಿರೀಕ್ಷೆ ಹೆಚ್ಚಿದೆ. ಈಗಾಗಲೇ ಅಣ್ಣನ ಪಾತ್ರಕ್ಕೆ ಧ್ರುವ ಸರ್ಜಾ ಡಬ್ ಮಾಡಲು ಶುರುಮಾಡಿದ್ದಾರೆ.

ಟ್ರೇಲರ್‌ಗೆ ಬೇಕಾದ ಡಬ್ಬಿಂಗ್ ಕೆಲಸ ಮುಗಿಸಿರುವ ಧ್ರುವ ತಮ್ಮ ‘ಪೊಗರು’ ಚಿತ್ರದ ಬಿಡುಗಡೆಯಲ್ಲಿ ಬ್ಯುಸಿಯಾಗಿದ್ದಾರೆ. ಇದಾದ ನಂತರ ಅವರು ಪೂರ್ಣಪ್ರಮಾಣದಲ್ಲಿ ಆ ಸಿನಿಮಾದ ಡಬ್ಬಿಂಗ್‌ನಲ್ಲಿ ತೊಡಗಿಸಿಕೊಳ್ಳಲಿದ್ದಾರಂತೆ.  ಟ್ರೇಲರ್ ಬಿಡುಗಡೆಯ ಕೆಲವು ದಿನಗಳಲ್ಲಿ ‘ರಾಜಾಮಾರ್ತಾಂಡ’ ಬಿಡುಗಡೆ ದಿನಾಂಕ ಘೋಷಣೆಯಾಗಲಿದೆ. ನಟ ದರ್ಶನ್‌ ಕೂಡ ಈ ಸಿನಿಮಾದ ಬೆನ್ನಿಗೆ ನಿಂತಿದ್ದಾರೆ. ಚಿತ್ರದಲ್ಲಿ ದರ್ಶನ್ ಹಿನ್ನೆಲೆ ದನಿ ಇರಲಿದೆ. ಈ ಮೂಲಕ ಅಗಲಿದ ಗೆಳೆಯನಿಗೆ ಅವರ ಕಡೆಯಿಂದ ಶ್ರ‌ದ್ಧಾಂಜಲಿ ಅರ್ಪಣೆಯಾಗುತ್ತಿದೆ.

Related Posts

error: Content is protected !!