ಅನಿರುದ್ದ್ ಜೊತೆಜೊತೆಗೆ ” ನಿನ್ನಿಂದಲೇʼ ಖ್ಯಾತಿಯ ನಟಿ !

ಸಿನಿಮಾ ಮತ್ತು ಕಿರುತೆರೆ ನಟಿ ಎರಿಕಾ ಫರ್ನಾಂಡಿಸ್‌ ಕನ್ನಡ ಕಿರುತೆರೆಗೆ ಬರುತ್ತಿದ್ದಾರೆ. ಕನ್ನಡದ ಜನಪ್ರಿಯ ‘ಜೊತೆಜೊತೆಯಲಿ’ ಸರಣಿಯ ‘ರಾಜನಂದಿನಿ’ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಈ ಹಿಂದೆ ಕನ್ನಡ ಚಿತ್ರಗಳಲ್ಲಿ ನಟಿಸಿದ್ದ ಎರಿಕಾ ಇದೀಗ ಅನಿರುದ್ಧ ಜೋಡಿಯಾಗಿ ಕನ್ನಡ ಧಾರಾವಾಹಿಗೆ ಪದಾರ್ಪಣೆ ಮಾಡುತ್ತಿದ್ದಾರೆ. ಅವರ ಪಾತ್ರ ಧಾರಾವಾಹಿಗೆ ಒಂದು ವಿಶಿಷ್ಟ ತಿರುವು ನೀಡಲಿದ್ದು, ಇದು ನಟಿಗೆ ಮಹತ್ವದ ಪಾತ್ರವಾಗಲಿದೆ. ‘ಕಸೌತಿ ಜಿಂದಗೀ ಕೆ’ ಹಿಂದಿ ಸರಣಿಯಲ್ಲಿ ಜನಪ್ರಿಯತೆ ಗಳಿಸಿರುವ ಎರಿಕಾ ಕನ್ನಡ ಕಿರುತೆರೆಯಲ್ಲೂ ಸದ್ದು ಮಾಡಲು ಸಜ್ಜಾಗಿದ್ದಾರೆ.

ಮುಂಬಯಿ ಮೂಲದ ಎರಿಕಾ 2013ರಲ್ಲಿ ಪುನೀತ್‌ ರಾಜಕುಮಾರ್ ಅಭಿನಯದ ‘ನಿನ್ನಿಂದಲೇ’ ಚಿತ್ರದೊಂದಿಗೆ ಸ್ಯಾಂಡಲ್‌ವುಡ್‌ಗೆ ಬಂದಿದ್ದರು. ಅದಾಗಿ ಎರಡು ವರ್ಷಗಳ ನಂತರ ಅವರು ನಟಿಸಿದ್ದ ಕನ್ನಡ ಸಿನಿಮಾ ‘ಬುಗುರಿ’. ಅಲ್ಲಿ ಅವರಿಗೆ ಗಣೇಶ್ ಹೀರೋ. ಒಂದೊಂದು ತಮಿಳು, ತೆಲುಗು, ಹಿಂದಿ ಚಿತ್ರದಲ್ಲಿ ನಟಿಸಿದ ಅವರು ಹಿಂದಿ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದರು. ಇದೀಗ ‘ಜೊತೆಜೊತೆಯಲಿ’ ಧಾರಾವಾಹಿಯಲ್ಲಿ ನಾಯಕನಟ ಆರ್ಯವರ್ಧನ್‌ ಅವರ ಮೊದಲ ಪತ್ನಿ ‘ರಾಜನಂದಿನಿ’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈಗಾಗಲೇ ಅನಿರುದ್ಧ ಮತ್ತು ಎರಿಕಾ ಅವರ ಫೋಟೋಶೂಟ್ ನಡೆದ ಬಗ್ಗೆ ಸುಳಿವು ಸಿಕ್ಕಿದೆ. ಮುಂದಿನ ಕೆಲವು ದಿನಗಳಲ್ಲಿ ನಟಿಯ ಸೀರಿಯಲ್ ಪ್ರವೇಶದ ಬಗ್ಗೆ ಅಧಿಕೃತಿ ಮಾಹಿತಿ ಹೊರಬೀಳಬಹುದು.

Related Posts

error: Content is protected !!