‘ಕೆಜಿಎಫ್-2’ಗೆ ಕಾಯುತ್ತಿರುವ ವಿಲ್ಲಿ ಮ್ಯಾಕ್‌!

ಪ್ರಶಾಂತ್ ನೀಲ್‌ ಮತ್ತು ಯಶ್ ಜೋಡಿಯ ‘ಕೆಜಿಎಫ್‌’ ಸಿನಿಮಾ ಜಗತ್ತಿನ ಗಮನ ಸೆಳೆದದ್ದು ಸರಿಯಷ್ಟೆ. ಸ್ಟೈಲಿಶ್ ಮೇಕಿಂಗ್‌ನಿಂದಾಗಿ ಸಿನಿಮಾ ಸಾಗರದಾಚೆಗೂ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿತು. ಇದೀಗ ‘ಕೆಜಿಎಫ್‌-2’ ನಿರೀಕ್ಷೆ ಹೆಚ್ಚಿಸಿದೆ. ಅಮೇರಿಕಾದ ವ್ರೆಸ್ಲರ್‌ ವಿಲ್ಲಿ ಮ್ಯಾಕ್‌ ಮೊನ್ನೆ ತಮ್ಮ ಟ್ವಿಟರ್ ಅಕೌಂಟ್‌ನಲ್ಲಿ ಕೆಜಿಎಫ್‌ – 2 ಟ್ರೈಲರ್ ಹಂಚಿಕೊಂಡು, “ಇದೊಂದು ಅದ್ಭುತ ಟ್ರೈಲರ್‌. ನಾನು ಚಿತ್ರಕ್ಕಾಗಿ ದೊಡ್ಡ ನಿರೀಕ್ಷೆಯೊಂದಿಗೆ ಕಾಯುತ್ತಿದ್ದೇನೆ” ಎಂದು ಬರೆದಿದ್ದಾರೆ. ಕೆಜಿಎಫ್ ಸರಣಿಯ ಮೊದಲ ಸಿನಿಮಾವನ್ನು ಅವರು ತುಂಬಾ ಇಷ್ಟಪಟ್ಟಿದ್ದರಂತೆ. ಇದೀಗ ಸರಣಿ ಸಿನಿಮಾವನ್ನು ಎದುರು ನೋಡುತ್ತಿದ್ದಾರೆ. ಅವರ ಈ ಟ್ವೀಟ್‌ ಕನ್ನಡ ಸಿನಿಮಾ ತಂತ್ರಜ್ಞರು ಸೃಷ್ಟಿಸಿದ ಸಂಚಲನಕ್ಕೆ ಸಾಕ್ಷ್ಯ ನುಡಿಯುತ್ತಿದೆ.

ಕನ್ನಡದ ನಟನೊಬ್ಬ ದೂರದ ಅಮೇರಿಕಾದ ಸೆಲೆಬ್ರಿಟಿ ಅಭಿಮಾನಿಯಿಂದ ಪ್ರಶಂಸೆಗೆ ಒಳಗಾಗಿರುವುದು ಯಶ್ ಅಭಿಮಾನಿಗಳಿಗೆ ಖುಷಿ ತಂದಿದೆ. ಅಭಿಮಾನಿಗಳು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ಗಳಲ್ಲಿ ವಿಲ್ಲಿ ಮ್ಯಾಕ್ ಟ್ವೀಟನ್ನು ಹಂಚಿಕೊಂಡಿದ್ದಾರೆ. ಇದೀಗ ಕೆಜಿಎಫ್‌  2 ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳ ಬಿರುಸಿನಿಂದ ಸಾಗಿದ್ದು, ಜುಲೈ 16ರಂದು ಹಲವು ಭಾಷೆಗಳಲ್ಲಿ ಚಿತ್ರ ತೆರೆಕಾಣಲಿದೆ. ಸರಣಿ ಚಿತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್‌ ಅವರು ‘ಅಧೀರ’ ಖಳ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಟಿ ರವೀನಾ ಟಂಡನ್‌ ಅವರಿಗೆ ಪ್ರಧಾನಿ ‘ರಮಿಕಾ ಸೇನ್‌’ ಪಾತ್ರವಿದೆ.

Related Posts

error: Content is protected !!