ನಟ ಮಾಧವನ್‌ಗೆ ಗೌರವ ಡಾಕ್ಟರೇಟ್‌!

ಬಹುಭಾ‍ಷಾ ನಟ ಮಾಧವನ್‌ ಸಿನಿಮಾ ಸಾಧನೆ ಪರಿಗಣಿಸಿ ಕೊಲ್ಹಾಪುರದ ಡಿ.ವೈ.ಪಾಟೀಲ್‌ ಶಿಕ್ಷಣ ಸಂಸ್ಥೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಮೊನ್ನೆ ಶಿಕ್ಷಣ ಸಂಸ್ಥೆಯ ಒಂಬತ್ತನೇ ಶೈಕ್ಷಣಿಕ ಸಮಾಂಭದಲ್ಲಿ ಮಾಧವನ್‌ ಈ ಗೌರವ ಸ್ವೀಕರಿಸಿದ್ದಾರೆ. ಈ ಪುರಸ್ಕಾರದಿಂದ ಹೆಮ್ಮೆಯಿಂದ ಬೀಗುತ್ತಿರುವ ಐವತ್ತರ ಹರೆಯದ ಮಾಧವನ್, “ಈ ಗೌರವವನ್ನು ನಾನು ವಿನಯದಿಂದ ಸ್ವೀಕರಿಸುತ್ತೇನೆ. ಈ ಮನ್ನಣೆ ನನಗೆ ಹೆಚ್ಚಿನ ಜವಾಬ್ದಾರಿ ಹೊರಿಸಿದೆ. ಮುಂದೆ ಇನ್ನಷ್ಟು ಒಳ್ಳೆಯ ಮಾದರಿ ಸಿನಿಮಾ, ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತೇನೆ” ಎಂದಿದ್ದಾರೆ.

ಮಾಧವನ್‌ ಸಿನಿಮಾಗೆ ಅಡಿಯಿಟ್ಟಿದ್ದು ತೊಂಬತ್ತರ ದಶಕದ ಕೊನೆಯಲ್ಲಿ. ಮಣಿರತ್ನಂ ನಿರ್ದೇಶನದ ‘ಅಲೈಪಾಯಿದೆ’ (2000) ಅವರ ವೃತ್ತಿ ಬದುಕಿಗೆ ದೊಡ್ಡ ತಿರುವು ನೀಡಿದ ಸಿನಿಮಾ. ಆನಂತರ ರೆಹ್ನಾ ಹೈ ತೇರಾ ದಿಲ್‌ ಮೇ, 3 ಈಡಿಯಟ್ಸ್‌, ತನು ವೆಡ್ಸ್ ಮನ, ವಿಕ್ರಂ ವೇದಾ ಸೇರಿದಂತೆ ಹತ್ತಾರು ಸಿನಿಮಾಗಳಲ್ಲಿ ಗಮನ ಸೆಳೆದರು.

ಅಮೇಜಾನ್‌ ಪ್ರೈಮ್‌ನ ‘ಬ್ರೀಥ್‌’ನೊಂದಿಗೆ ಓಟಿಟಿಗೆ ಪದಾರ್ಪಣೆ ಮಾಡಿದ ಮಾಧವನ್‌ ಇತ್ತೀಚಿನ ‘ಮಾರಾ’ ರೊಮ್ಯಾಂಟಿಕ್ ಸಿನಿಮಾಗಳಲ್ಲಿ ಮಿಂಚಿದ್ದರು. ಇದು ದುಲ್ಕರ್ ಸಲ್ಮಾನ್‌ ನಟನೆಯ ‘ಚಾರ್ಲಿ’ ಮಲಯಾಳಂ ಚಿತ್ರದ ರೀಮೇಕ್‌. ಇದೀಗ ಅವರು ನಟಿಸಿ, ನಿರ್ದೇಶಿಸಿರುವ ‘ರಾಕೆಟ್ರೀ: ದಿ ನಂಬಿ ಎಫೆಕ್ಟ್‌’ ತೆರೆಗೆ ಸಿದ್ಧವಾಗಿದೆ. ISRO ದಲ್ಲಿ ವಿಜ್ಞಾನಿಯಾಗಿದ್ದ ನಂಬಿ ನಾರಾಯಣನ್‌ ಅವರ ಜೀವನ ಆಧರಿಸಿದ ಚಿತ್ರವಿದು.

Related Posts

error: Content is protected !!