ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಿರುವ ರಮ್ಯಕೃಷ್ಣ ದಕ್ಷಿಣ ಭಾರತದ ಜನಪ್ರಿಯ ನಟಿ. “ಅಮ್ಮನ್”, “ಪಡಯಪ್ಪ”, “ಪಂಚತಂತ್ರಂ”, “ಬಾಹುಬಲಿ” ಸೇರಿದಂತೆ ಹಲವಾರು ಚಿತ್ರಗಳಲ್ಲಿ ರಮ್ಯಕೃಷ್ಣ ತಮ್ಮ ಪಾತ್ರಗಳ ಮೂಲಕ ಛಾಪು ಮೂಡಿಸಿರುವ ಕಲಾವಿದೆ. ದಕ್ಷಿಣದ ಜನಪ್ರಿಯ ನಾಯಕನಟರಿಗೆ ಜೋಡಿಯಾಗಿ ನಟಿಸಿರುವ ಅವರಿಗೆ ಈಗಲೂ ಬಹು ಬೇಡಿಕೆಯಿದೆ.
ರಮ್ಯಕೃಷ್ಣ ಅವರು ತೆಲುಗು ಜನಪ್ರಿಯ ಚಿತ್ರ ನಿರ್ದೇಶಕ ವಂಶಿಕೃಷ್ಣ ಅವರನ್ನು ವರಿಸಿದ್ದಾರೆ. ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ನಟಿ ತಮ್ಮ ಫ್ಯಾಮಿಲಿ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಪುತ್ರ ಋತ್ವಿಕ್ ಕೃಷ್ಣನ ಹದಿನಾರನೇ ಹುಟ್ಟು ಹಬ್ಬದ ಸಂಭ್ರಮದ ಅವರ ಈ ಫೋಟೋಗಳಿಗೆ ಅಭಿಮಾನಿಗಳಿಂದ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಪತಿ, ಪುತ್ರ ಮತ್ತು ಸಹೋದರಿ ವಿನಯಾ ಅವರೊಂದಿಗಿನ ನಟಿಯ ಫೋಟೋಗಳು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿವೆ. ಸದ್ಯ ಎರಡು ಚಿತ್ರಗಳ ಚಿತ್ರೀಕರಣದಲ್ಲಿ ರಮ್ಯಾಕೃಷ್ಣ ಬಿಝಿ. ವಿಜಯ್ ದೇವರಕೊಂಡ ಹೀರೋ ಆಗಿರುವ ‘ಲಿಗರ್’ ತೆಲುಗು – ಹಿಂದಿ ದ್ವಿಭಾಷಾ ಚಿತ್ರದಲ್ಲಿ ಅವರಿಗೆ ಪ್ರಮುಖ ಪಾತ್ರವಿದೆಯಂತೆ. ಈ ಸಿನಿಮಾ ಸದ್ಯದಲ್ಲೇ ತೆರೆಕಾಣಲಿದೆ.