ಸಿಲ್ಕ್‌ಸ್ಮಿತಾ ಪಾತ್ರದಲ್ಲಿ ಶ್ರೀರೆಡ್ಡಿ! ತೆಲುಗು, ತಮಿಳಿನಲ್ಲಿ ತಯಾರಾಗಲಿದೆ ಸಿನಿಮಾ

ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ಸಿಲ್ಕ್‌ಸ್ಮಿತಾ ಸಿನಿಮಾ – ಬದುಕು ಆಧರಿಸಿ ‘ದಿ ಡರ್ಟಿ ಪಿಕ್ಚರ್‌’ ಹಿಂದಿ ಚಿತ್ರ ತಯಾರಾಗಿತ್ತು. ಸಿಲ್ಮ್ ಸ್ಮಿತಾ ಪಾತ್ರದಲ್ಲಿ ನಟಿಸಿದ್ದ ವಿದ್ಯಾ ಬಾಲನ್ ಉತ್ತಮ ನಟನೆಗೆ ರಾಷ್ಟ್ರಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು. ಇದೀಗ ಸಿಲ್ಕ್‌ ಸ್ಮಿತಾ ಕುರಿತಂತೆ ಮತ್ತೊಮ್ಮೆ ಸಿನಿಮಾ ಸೆಟ್ಟೇರುತ್ತಿದೆ. ತೆಲುಗು ಚಿತ್ರರಂಗದ ವಿವಾದಿತ ನಟಿ ಶ್ರೀರೆಡ್ಡಿ ಶೀರ್ಷಿಕೆ ಪಾತ್ರ ನಿರ್ವಹಿಸಲಿದ್ದಾರೆ ಎನ್ನುವುದು ವಿಶೇಷ!

ಶ್ರೀರೆಡ್ಡಿ ನಟಿಸಲಿರುವ ಬಯೋಪಿಕ್‌ಗೆ ಶೀರ್ಷಿಕೆಯಿನ್ನೂ ನಿಗಧಿಯಾಗಿಲ್ಲ. ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ತಯಾರಾಗಲಿರುವ ಚಿತ್ರವನ್ನು ಮಧು ನಿರ್ದೇಶಿಸಲಿದ್ದಾರೆ ಎನ್ನಲಾಗಿದೆ. ಈ ಕುರಿತು ಶ್ರೀರೆಡ್ಡಿ ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ಹರಿಬಿಟ್ಟಿದ್ದು, ಅದು ಸಖತ್ ವೈರಲ್ ಆಗಿದೆ. ಕಳೆದ ವರ್ಷ ನಟಿ ಶ್ರೀರೆಡ್ಡಿ ತೆಲುಗು, ತಮಿಳು ಚಿತ್ರರಂಗದಲ್ಲಿ ನಟಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದರು.

ಈ ಸಂಬಂಧ ಅಲ್ಲಿ ಸಿನಿಮಾ ವಾಣಿಜ್ಯ ಮಂಡಳಿ ಎದುರು ಧರಣಿ ಕುಳಿತು ಪ್ರತಿಭಟಿಸಿ ಸುದ್ದಿಯಾಗಿದ್ದರು. ಈಗ ಸಿಲ್ಮ್ ಸ್ಮಿತಾ ಸಿನಿಮಾ ಘೋಷಿಸಿದ್ದು, ಇದು ಕೂಡ ಪ್ರಚಾರದ ಗಿಮಿಕ್ ಎಂದು ಅಲ್ಲಿನ ಉದ್ಯಮದವರು ಮಾತನಾಡಿಕೊಳ್ಳುತ್ತಿದ್ದಾರೆ.

Related Posts

error: Content is protected !!