ದೀಪಿಕಾ ದಿ ವಿಲನ್! ‘ಧೂಮ್‌ 4’ನ ವಿಶಿಷ್ಟ ಪಾತ್ರದಲ್ಲಿ ಪಡುಕೋಣೆ ಬೆಡಗಿ!

‘ಧೂಮ್‌’ ಸರಣಿಯ ನಾಲ್ಕನೇ ಸಿನಿಮಾಗೆ ತಯಾರಿ ನಡೆದಿದೆ. ಈ ಬಾರಿ ಚಿತ್ರದಲ್ಲಿ ಲೇಡಿ ವಿಲನ್ ಪರಿಚಯಿಸುವುದು ಚಿತ್ರತಂಡದ ಯೋಜನೆ. ಇದಕ್ಕೆ ಖಡಕ್ಕಾದ, ಜನಪ್ರಿಯ ನಟಿಯೇ ಆಗಬೇಕು. ಹಾಗಾಗಿ ಚಿತ್ರತಂಡ ನಟಿ ದೀಪಿಕಾ ಪಡುಕೋಣೆ ಅವರನ್ನು ಪಾತ್ರದಲ್ಲಿ ನಟಿಸುವಂತೆ ಕೇಳಿಕೊಂಡಿದೆ. ವೃತ್ತಿಜೀವನದಲ್ಲಿ ಮೊದಲ ಬಾರಿ ಇಂಥದ್ದೊಂದು ಪಾತ್ರದ ಅವಕಾಶ ದೀಪಿಕಾ ಪಾಲಿಗೆ ಬಂದಿದ್ದು, ಬಹುತೇಕ ಅವರು ಓಕೆ ಎನ್ನುವ ಸಾಧ್ಯತೆಗಳಿವೆ. ಈ ಪಾತ್ರಕ್ಕಾಗಿ ನಟಿ ಮಾನಸಿಕವಾಗಿ ಸಿದ್ಧತೆ ನಡೆಸುತ್ತಿದ್ದಾರೆ.

‘ಧೂಮ್‌’ ಸಿನಿಮಾ ಚೇಸಿಂಗ್ ದೃಶ್ಯಗಳು ಮತ್ತು ಆಕ್ಷನ್‌ಗೆ ಬ್ರ್ಯಾಂಡ್ ಆಗಿದೆ. ಅಭಿಷೇಕ್ ಬಚ್ಚನ್ ಮತ್ತು ಉದಯ್ ಚೋಪ್ರಾ ಹಿಂದಿನ ಎಲ್ಲಾ ಮೂರು ಸರಣಿಗಳಲ್ಲಿ ನಟಿಸಿದ್ದರು. ಇವರ ಜೊತೆ ಮೊದಲ ಚಿತ್ರದಲ್ಲಿ ಜಾನ್ ಅಬ್ರಹಾಂ, ಎರಡನೇ ಸರಣಿಯಲ್ಲಿ ಹೃತಿಕ್ ರೋಷನ್ ಮತ್ತು ಮೂರನೇ ಸರಣಿಯಲ್ಲಿ ಅಮೀರ್ ಖಾನ್ ನಟಿಸಿದ್ದರು. ಇದೀಗ ಸರಣಿಯ ನಾಲ್ಕನೇ ಪ್ರಯೋಗಕ್ಕೆ ದೀಪಿಕಾರನ್ನು ಲೇಡಿ ವಿಲನ್‌ರನ್ನಾಗಿ ಪರಿಚಯಿಸುವುದು ತಂಡದ ಉದ್ದೇಶ.

ಸದ್ಯ ದೀಪಿಕಾ ಅವರು ಸಿದ್ಧಾರ್ಥ್ ಆನಂದ್ ನಿರ್ದೇಶನದ ‘ಪಠಾಣ್‌’ ಚಿತ್ರದಲ್ಲಿ ಶಾರುಖ್ ಜೋಡಿಯಾಗಿ ನಟಿಸುತ್ತಿದ್ದಾರೆ. ಇದಲ್ಲದೆ ಶಕುನ್ ಬಾತ್ರಾ ನಿರ್ದೇಶನದ ಹೊಸ ಸಿನಿಮಾ ಒಪ್ಪಿಕೊಂಡಿದ್ದು, ಅನನ್ಯ ಪಾಂಡೆ ಮತ್ತು ಸಿದ್ಧಾರ್ಥ್ ಚತುರ್ವೇದಿ ಈ ಚಿತ್ರದ ಇತರೆ ಪಾತ್ರಧಾರಿಗಳು. ಇದಲ್ಲದೆ ತಾರಾಪತಿ ರಣವೀರ್ ಸಿಂಗ್‌ಗೆ ’83’ ಚಿತ್ರದಲ್ಲಿ ಅವರು ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

Related Posts

error: Content is protected !!