ಹ್ಯಾಟ್ರಿಕ್ ಹೀರೋ ಕೈಗೆ ಗಾಯ- ಕ್ರಿಕೆಟ್‌ ಆಡುವಾಗ ಆಕಸ್ಮಿಕ ಪೆಟ್ಟು

ಮನೆ ಮುಂದೆ ಆಡುವಾಗ ನಡೆದ ಘಟನೆ

ಸಾಮಾನ್ಯವಾಗಿ ಸಿನಿಮಾಗಳಲ್ಲಿ ಹೀರೋಗಳು, ಕೈಗೆ, ಕಾಲಿಗೆ ಬ್ಯಾಂಡೇಜ್‌ ಕಟ್ಟಿಕೊಂಡಾಗ, ಅದೊಂದು ಸೀನ್‌ಗೆ ಅಗತ್ಯ ಅನಿಸುವುದು ಸಹಜ. ಆದರೆ, ಚಿತ್ರೀಕರಣ ಹೊರತಾಗಿಯೂ ಬ್ಯಾಂಡೇಜ್‌ ಇದ್ದರೆ? ಅದು ಎಲ್ಲರಿಗೂ ಒಂದೊಂದು ಪ್ರಶ್ನೆ ಮತ್ತು ಗಾಬರಿ. ಅಂಥದ್ದೊಂದು ಪ್ರಶ್ನೆ, ಗಾಬರಿ ಶಿವರಾಜಕುಮಾರ್‌ ಅವರ ತೋರು ಬೆರಳಿಗೆ ಆಗಿರುವ ಗಾಯ ಕಾರಣವಾಗಿದೆ. ಹೌದು, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಕೈ ಗಾಯವಾಗಿದೆ. ಅದಕ್ಕೆ ಕಾರಣ, ಕಳೆದ ಎರಡು ದಿನಗಳ ಹಿಂದೆ ಅವರು ತಮ್ಮ ಮನೆಯಲ್ಲಿ ಕ್ರಿಕೆಟ್ ಆಡುತ್ತಿರಬೇಕಾದರೆ, ಆಕಸ್ಮಿಕವಾಗಿ ತಮ್ಮ ತೋರು ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. ಸದ್ಯಕ್ಕೆ ಅವರು ಬ್ಯಾಂಡೇಜ್‌ ಮಾಡಿಸಿದ್ದಾರೆ.

ಶಿವರಾಜ್‌ಕುಮಾರ್‌ ಅವರಿಗೆ ಕ್ರಿಕೆಟ್‌ ಅಂದರೆ ಎಲ್ಲಿಲ್ಲದ ಪ್ರೀತಿ. ಸಮಯ ಸಿಕ್ಕರೆ,  ಹುಡುಗರಂತೆ ಅವರು ಬ್ಯಾಟ್‌ ಹಿಡಿದು ಫೀಲ್ಡ್‌ಗೆ ನಿಂತು ಬಿಡುತ್ತಾರೆ. ಒಂದಷ್ಟು ಹುಡುಗರನ್ನು ಕಟ್ಟಿಕೊಂಡು ಬ್ಯಾಟಿಂಗ್‌ ಮಾಡಲು ಹೊರಡುವ ಶಿವಣ್ಣ, ಮೊನ್ನೆ ಹಾಗೆ ಮಾಡಲು ಹೋಗಿ ಸದ್ಯ ತೋರು ಬೆರಳಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ಸದ್ಯಕ್ಕೆ ಈ ಫೋಟೋ ಎಲ್ಲೆಡೆ ವೈರಲ್‌ ಆಗುತ್ತಿರುವುದಂತೂ ನಿಜ.

Related Posts

error: Content is protected !!