ಅರೆಬೆತ್ತಲೆ ಫೋಟೋ- ನಟಿಯ ಅಕೌಂಟ್‌ ಡಿಲೀಟ್!

ಟ್ವಿಟರ್ ನಿಲುವಿಗೆ ನಟಿ ನಿಖಿತಾ ಗೋಖಲೆ ಕಿಡಿಕಿಡಿ

  • ಶಶಿಧರ ಚಿತ್ರದುರ್ಗ

ಖ್ಯಾತ ಮರಾಠಿ ನಟಿ ನಿಖಿತಾ ಗೋಖಲೆ ಟ್ವಿಟರ್‌ ಮೇಲೆ ಮುನಿಸಿಕೊಂಡು ಕಿಡಿಕಾರುತ್ತಿದ್ದಾರೆ. ಮೊನ್ನೆ ಅವರು ತಮ್ಮ ಫೋಟೋಗಳನ್ನು ಅವರು ಟ್ವಿಟರ್‌ ಅಕೌಂಟ್‌ನಲ್ಲಿ ಅಪ್‌ಲೋಡ್ ಮಾಡಿದ್ದರು. ಇವು ‘ಕಲಾತ್ಮಕ ಫೋಟೋಗಳು’ ಎನ್ನುವುದು ಅವರ ವಿವರಣೆ. ಆದರೆ ಇವು ಆಕ್ಷೇಪಾರ್ಹ ಫೊಟೋಗಳು ಎಂದು ನಟಿಯ ಸೋಷಿಯಲ್ ಮೀಡಿಯಾ ಅಕೌಂಟ್ ಡಿಲೀಟ್ ಮಾಡಿದೆ ಟ್ವಿಟರ್‌.


ಟ್ವಿಟರ್ ನಿಲುವಿನಿಂದ ನಟಿ ನಿಖಿತಾ ಮುನಿಸಿಕೊಂಡಿದ್ದಾರೆ. ಇದರಿಂದ ತಮ್ಮ ಅಭಿಮಾನಿಗಳಿಗೆ ನಿರಾಸೆಯಾಗಿದೆ ಎನ್ನುವುದು ಇದಕ್ಕೆ ಕಾರಣ. “ಶಾಕಿಂಗ್ ನ್ಯೂಸ್‌! ನಾನು ಎಂಟು ವರ್ಷದಿಂದ ನಿಭಾಯಿಸುತ್ತಿದ್ದ ಸೋಷಿಯಲ್ ಮೀಡಿಯಾ ಅಕೌಂಟ್ ಡಿಲೀಟ್ ಆಗಿದೆ. ನಾನು ಬೆತ್ತಲೆ ಫೋಟೋ ಹಾಕಿದ್ದೇನೆ ಎನ್ನುವ ವಿವರಣೆಯನ್ನು ಅವರು ಕೊಡುತ್ತಿದ್ದಾರೆ.  ಊಟ-ತಿಂಡಿಯ ಫೋಟೋ, ಕೆಲಸಕ್ಕೆ ಬಾರದ ಫೋಟೋಗಳೆಲ್ಲವನ್ನೂ ಹಾಕಬಹುದು. ಆದರೆ ಕಲಾತ್ಮಕತೆಯ ನನ್ನ ಫೋಟೋಗಳನ್ನು ಮಾತ್ರ ಹಾಕಬಾರದಂತೆ! ಇದೆಂಥ ನಿಯಮ” ಎಂದು ತಮ್ಮ ಕೋಪ ಹೊರ ಹಾಕಿದ್ದಾರೆ ಅವರು.

ಟ್ವಿಟರ್‌ ಖಾತೆ ಡಿಲೀಟ್‌ ಮಾಡಿದ್ದರಿಂದ ನಿರಾಸೆ ಹೊಂದಬೇಕಿಲ್ಲ ಎಂದು ನಿಖಿತಾ ಅಭಿಮಾನಿಗಳಿಗೆ ಅಭಯ ನೀಡಿದ್ದಾರೆ. “ನಾನು ಕೂಡ ಇನ್ನು ಮುಂದೆ ಸೋಷಿಯಲ್ ಮೀಡಿಯಾದಲ್ಲಿ ಊಟ-ತಿಂಡಿಯ ಫೊಟೋಗಳನ್ನು ಹಾಕುತ್ತೇನೆ. ನನ್ನ ಕಲಾತ್ಮಕ ಫೋಟೋಗಳನ್ನು ನನ್ನ ವೆಬ್‌ಸೈಟ್‌ನಲ್ಲಿ ಹಾಕಿಕೊಳ್ಳುತ್ತೇನೆ” ಎಂದಿದ್ದಾರೆ.

Related Posts

error: Content is protected !!