ಬಿಗ್‌ಬಾಸ್‌ ಬಾಗಿಲು ತಟ್ಟಲಿರುವ ಕಿಲಾಡಿ ನಯನಾ?

ಪಟ್ಟಿಯಲ್ಲಿ ಹರಿದಾಡುತ್ತಿದೆ ಮಾತಿನಮಲ್ಲಿ ಹೆಸರು

“ಕಾಮಿಡಿ ಕಿಲಾಡಿಗಳು” ಖ್ಯಾತಿಯ ನಯನಾ ಬಿಗ್‌ಬಾಸ್‌ ಮನೆಗೆ ಕಾಲಿಡಲಿದ್ದಾರಾ?
ಹೀಗೊಂದು ಸುದ್ದಿ ಜೋರಾಗಿಯೇ ಹರಿದಾಡುತ್ತಿದೆ. ಹೌದು, ಸದ್ಯಕ್ಕೆ ಬಿಗ್‌ಬಾಸ್‌ ಸೀಸನ್‌-೮ ತಯಾರಿ ಜೋರಾಗಿಯೇ ಇದೆ. ಈಗಾಗಲೇ ಯಾರೆಲ್ಲಾ ಬಿಗ್‌ಬಾಸ್‌ ಮನೆಗೆ ಎಂಟ್ರಿಕೊಡುತ್ತಾರೆ ಎಂಬ ಕೆಲವರ ಲಿಸ್ಟ್‌ ಕೂಡ ಹರಿದಾಡುತ್ತಿದೆ. ಆ ಲಿಸ್ಟ್‌ನಲ್ಲಿ “ಕಾಮಿಡಿ ಕಿಲಾಡಿ” ಖ್ಯಾತಿಯ ನಯನಾ ಅವರ ಹೆಸರು ಕೂಡ ಕೇಳಿಬರುತ್ತಿದೆ. ನಿಜವಾಗಿಯೂ ನಯನಾ ಹೆಸರು ಇದೆಯಾ? ಅವಕಾಶ ಸಿಕ್ಕರೆ ನಯನಾ ಬಿಗ್‌ಬಾಸ್‌ ಮನೆಗೆ ಹೋಗ್ತಾರಾ? ಇದು ಸದ್ಯಕ್ಕೆ ಗಿರಕಿ ಹೊಡೆಯುತ್ತಿರುವ ಪ್ರಶ್ನೆ.

ನಯನಾ ಹೆಸರು ಯಾಕೆ ಹರಿದಾಡುತ್ತಿದೆ ಎಂಬುದಕ್ಕೆ ಹಲವು ಕಾರಣಗಳಿವೆ. ನಯನಾ ಒಳ್ಳೆಯ ಮಾತುಗಾತಿ, ರಂಗಭೂಮಿ ಪ್ರತಿಭೆ, ಆಗಾಗ ಸೋಶಿಯಲ್‌ ಮೀಡಿಯಾದಲ್ಲಿ ಏನಾದರೊಂದು ಸ್ಟೇಟಸ್‌ ಹಾಕುವ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ. ಈ ಹಿಂದೆ ನಯನಾ ಸೋಶಿಯಲ್‌ ಮೀಡಿಯಾದಲ್ಲಿ ಇಂಗ್ಲೀಷ್‌ನಲ್ಲಿ ಒಂದು ಸ್ಟೇಟಸ್‌ ಹಾಕಿಕೊಂಡಿದ್ದರು. ಕನ್ನಡಿಗರ ಕಣ್ಣಿಗೆ ಅದು ಬಿದ್ದ ಕೂಡಲೇ ಸಾಕಷ್ಟು ಚರ್ಚೆ ಆಯ್ತು. ಕನ್ನಡಿಗರು ಬಾಯಿಗೆ ಬಂದಂತೆ ಮಾತಾಡಿದ್ದರು. ನಂತರ ನಯನಾ ಕೂಡ ಅವರಿಗೆ ತಮ್ಮ ಮಾತಲ್ಲೇ ಉತ್ತರ ಕೊಟ್ಟಿದ್ದರು. ಆ ನಯನಾ ಈಗ ಬಿಗ್‌ಬಾಸ್‌ ಮನೆಗೆ ಹೋಗ್ತಾರೆ ಎಂಬ ಸುದ್ದಿಯಂತೂ ಇದೆ. ಅದು ಎಷ್ಟರ ಮಟ್ಟಿಗೆ ನಿಜ ಅನನೋದಕ್ಕೆ ಬಿಗ್‌ಬಾಸ್‌ ಸೀಸನ್‌ -೮ ಶುರುವಾಗುವವರೆಗೆ ಕಾಯಲೇಬೇಕು. ಅಂದಹಾಗೆ, ಸುದೀ[ಪ್‌ ಅವರು ಈ ಕಾರ್ಯಕ್ರಮ ನಡೆಸಿಕೊಡಲು ಸಜ್ಜಾಗಿದ್ದಾರೆ.

Related Posts

error: Content is protected !!