‘ಗಣಪತ್‌’ ಟೈಗರ್‌ಗೆ ನಾಯಕಿ ಕೃತಿ, ವಿಕಾಸ್ ಬೆಹ್ಲ್ ನಿರ್ದೇಶನದ ದುಬಾರಿ ಹಿಂದಿ ಸಿನಿಮಾ

ಕನಸು ನನಸಾದ ಖುಷಿಯಲ್ಲಿ ಕೃತಿ 

ಬಹುಕೋಟಿ ವೆಚ್ಚದ ಬಾಲಿವುಡ್‌ ಸಿನಿಮಾ ‘ಗಣಪತ್‌’ ಇಂದು ತಮ್ಮ ಸಿನಿಮಾದ ನಾಯಕಿ ಕೃತಿ ಸನೂನ್‌ ಎಂದು ಘೋಷಿಸಿದೆ. ನಟ ಜಾಕಿ ಶ್ರಾಫ್ ಪುತ್ರ ಟೈಗರ್ ಶ್ರಾಫ್‌ ಚೊಚ್ಚಲ ನಿರ್ದೇಶನದ ‘ಹೀರೋಪಂಥ್‌’ನಲ್ಲಿ ಕೃತಿ ನಾಯಕಿಯಾಗಿದ್ದರು. ಇದೀಗ ಮತೊಮ್ಮೆ ‘ಗಣಪತ್‌’ನಲ್ಲಿ ಜೋಡಿಯಾಗಿ ನಟಿಸಲಿದ್ದು, ಭರ್ಜರಿ ಫೋಟೋಶೂಟ್ ಫೋಟೋದೊಂದಿಗೆ ಚಿತ್ರತಂಡ ಅವರನ್ನು ಪರಿಚಯಿಸಿದೆ.

ದೊಡ್ಡ ಸಿನಿಮಾದ ಅವಕಾಶಕ್ಕೆ ಸಂಭ್ರಮಿಸುತ್ತಿರುವ ಕೃತಿ, “ಏಳು ವರ್ಷಗಳ ನಂತರ ಮತ್ತೆ ಟೈಗರ್ ಶ್ರಾಫ್‌ಗೆ ಜೋಡಿಯಾಗುತ್ತಿದ್ದೇನೆ. ಔಟ್‌ ಅಂಡ್ ಔಟ್‌ ಆಕ್ಷನ್ ಚಿತ್ರದಲ್ಲಿ ನಟಿಸಬೇಕೆನ್ನುವ ನನ್ನ ಕನಸು ‘ಗಣಪತ್‌’ ಪ್ರಾಜೆಕ್ಟ್‌ನೊಂದಿಗೆ ಕೈಗೂಡುತ್ತಿದೆ. ನಿಸ್ಸಂಶಯವಾಗಿ ಈ ಯೋಜನೆ ನನ್ನ ವೃತ್ತಿಬದುಕಿನ ದೊಡ್ಡ ಸಿನಿಮಾ ಆಗಲಿದೆ” ಎಂದಿದ್ದಾರೆ.

ನಟ ಟೈಗರ್ ಶ್ರಾಫ್‌ ಕೂಡ ನಾಯಕಿಯ ಇಂಟ್ರಡಕ್ಷನ್ ವೀಡಿಯೋ ಹಾಕಿ ಕೃತಿಯನ್ನು ಆಹ್ವಾನಿಸಿದ್ದಾರೆ. ನಿರ್ದೇಶಕ ವಿಕಾಸ್ ಬೆಹ್ಲ್‌, “ಕೃತಿ ಒಳ್ಳೆಯ ಸ್ಕ್ರೀನ್ ಪ್ರಸೆನ್ಸ್‌ ಹೊಂದಿದ್ದು, ಅವರು ಅತ್ಯುತ್ತಮ ಆಕ್ಷನ್ ಹೀರೋಯಿನ್ ಆಗುವ ಎಲ್ಲಾ ಲಕ್ಷಣ ಹೊಂದಿದ್ದಾರೆ. ಈ ಜೋಡಿ ತೆರೆ ಮೇಲೆ ಮೋಡಿ ಮಾಡಲಿದೆ” ಎಂದಿದ್ದಾರೆ. ವಸು ಬಗ್ನಾನಿ, ಜಾಕಿ ಬಗ್ನಾನಿ, ದೀಪ್ಶಿಕಾ ದೇಶ್‌ಮುಖ್‌, ವಿಕಾಸ್ ಬೆಹ್ಲ್ ನಿರ್ಮಾಣದ ಸಿನಿಮಾ ಸದ್ಯದಲ್ಲೇ ಸೆಟ್ಟೇರಲಿದ್ದು, 2022ಕ್ಕೆ ಸಿನಿಮಾ ತೆರೆಗೆ ಬರಲಿದೆ.

Related Posts

error: Content is protected !!