ದಚ್ಚು ಟೆಂಪಲ್ ರನ್ !

ತಿಮ್ಮಪ್ಪನ ದರ್ಶನ ಪಡೆದ ದರ್ಶನ್‌

ಇತ್ತೀಚೆಗೆ ಸ್ಟಾರ್ ನಟರು ಸಿನಿಮಾದಲ್ಲಿ ಬಿಝಿಯಾಗುತ್ತಿದ್ದಾರೆ. ಅದರ ಜೊತೆ ಜೊತೆಯಲ್ಲೇ ಅವರು ಬೇರೆ ಚಟುವಟಿಕೆಗಳತ್ತವೂ ಗಮನ ಹರಿಸುತ್ತಿದ್ದಾರೆ. ಅವರಿಗೆ ಸಮಯ ಸಿಗೋದೇ ಅಪರೂಪ. ಅದರಲ್ಲೂ ತಮ್ಮ ವೈಯಕ್ತಿಕ ಬದುಕಲ್ಲಂತೂ ಸಮಯ ನಿಗದಿಪಡಿಸೋಕೆ ಹೆಣಗಾಡುತ್ತಲೇ ಇರುತ್ತಾರೆ. ಅದಕ್ಕೆ ಕಾರಣ, ಸಿನಿಮಾಗಳ ಚಿತ್ರೀಕರಣ. ಹೌದು, ಬಹುತೇಕ ಸ್ಟಾರ್‌ ನಟರು ದೇವರ ಮೊರೆ ಹೋಗುತ್ತಿರುವುದು ಹೊಸದೇನಲ್ಲ. ಈಗ ದರ್ಶನ್‌ ಕೂಡ ಸ್ವಲ್ಪ ಸಮಯ ಬಿಡುವು ಮಾಡಿಕೊಂಡು ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

ಬುಧವಾರ ತಿರುಪತಿ ವೆಂಕಟೇಶ್ವರ ಸ್ವಾಮಿ ದರ್ಶನ ಪಡೆದು, ಪಾವನರಾಗಿದ್ದಾರೆ. ಇವರಷ್ಟೇ ಅಲ್ಲ, ನಿರ್ಮಾಪಕ ಉಮಾಪತಿ, ಹಾಗೂ ತೆಲುಗು ಸಿನಿಮಾ ವಿತರಕರು ಕೂಡ ದಚ್ಚು ಅವರಿಗೆ ಸಾಥ್‌ ನೀಡಿದ್ದಾರೆ. ಅಂದಹಾಗೆ, ದರ್ಶನ್‌ ಅವರು ವರ್ಷಗಳ ನಂತರ ಪವಿತ್ರ ಸ್ಥಳಕ್ಕೆ ಭೇಟಿಯಾಗಿದ್ದಾರೆ. ದರ್ಶನ ಪಡೆದ ಬಳಿಕ ಸ್ವತಃ ದರ್ಶನ್‌ ಅವರು ಖುಷಿಗೊಂಡಿದ್ದಾರೆ. ಇನ್ನು, ದರ್ಶನ್‌ ಅವರು ದೇವಾಲಯಕ್ಕೆ ತೆರಳಲು ಬಲವಾದ ಕಾರಣವೂ ಇದೆ. ಮಾರ್ಚ್‌ ೧೧ರಂದು “ರಾಬರ್ಟ್”‌ ರಿಲೀಸ್‌ ಆಗುತ್ತಿದೆ. ಕನ್ನಡದ ಜೊತೆಯಲ್ಲಿ ತೆಲುಗು ಭಾಷೆಯಲ್ಲೂ ಚಿತ್ರ ರಿಲೀಸ್‌ ಆಗುತ್ತಿದೆ. “ರಾಬರ್ಟ್” ಸಿನಿಮಾ ಪ್ರಚಾರಕ್ಕಾಗಿ ಹೈದರಾಬಾದಿಗೂ ತೆರಳುವ ಯೋಚೆಯಲ್ಲಿರುವ ದರ್ಶನ್ ಹಾಗೆಯೇ ದರ್ಶನ ಪಡೆದಿದ್ದಾರೆ.

 

Related Posts

error: Content is protected !!