ಎಲ್ಲವೂ ಯೋಗಾಯೋಗ…ಸಿನಿ ಲಹರಿಗೆ ಶುಭ ಹಾರೈಕೆಯ ಮಹಾಪೂರ

ಕಚೇರಿಗೆ ಬಂದು ಸಿನಿ‌ಲಹರಿಗೆ ಹಾರೈಸಿದ ಪ್ಯಾರಾ ಒಲಂಪಿಕ್ ಖ್ಯಾತಿಯ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕೆ.ವೈ.ವೆಂಕಟೇಶ್…..


ಎಲ್ಲವೂ ಯೋಗಾಯೋಗ. ನೂರು ದಿನದ ಸಂಭ್ರಮಕ್ಕೆ ನಾಳೆ ದಿನ‌ ನಿಗದಿ ಆಗಿದೆ. ಸಿಬ್ಬಂದಿ‌ ಖುಷಿಗಾಗಿ ನಾಳೆ ಸುಮ್ನೆ ಕೇಕ್ ಕತ್ತರಿಸಿ ಹಂಡ್ರೆಡ್ ಡೇಸ್ ಸಲೆಬ್ರೆಷನ್ ಮಾಡೋಣ ಅನ್ನೋ ಆಲೋಚನೆಯಲ್ಲಿದ್ದೇವೆ ಆದ್ರೆ ಇವತ್ತೊಂದು ಅಚ್ಚರಿಯೇ ಘಟಿಸಿ ಬಿಟ್ಟಿತು‌.

ನಿರ್ದೇಶಕರಾದ ಕಿರಣ್ ಹಾಗೂ ರಾಜು ಪಾವಗಡ ಎಂದಿನಂತೆ‌ಆಫೀಸ್ ಗೆ ಬರುತ್ತೇವೆ ಎಂದರು. ಬನ್ನಿ ಎಂದೆವು. ಬರುವಾಗ ಅವರೊಂದಿಗೆ ಒಬ್ಬ ಗಣ್ಯ ವ್ಯಕ್ತಿಯೇ ಜತೆಗಿದ್ದರು. ಸರ್, ಇವ್ರು, ಕೆ.ವೈ .ವೆಂಕಟೇಶ್ ಅಂತ. ಪ್ಯಾರಾ ಒಲಂಪಿಕ್ ಸಾಧನೆಯಲ್ಲಿ ಈ ವರ್ಷ ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾದವರು ‌ ದೊಡ್ಡ ಸಾಧಕರು ‘ ಅಂತ ಪರಿಚಯಿಸುತ್ತಿದ್ದಂತೆ, ನಮಗೆ ಏನ್ ಹೇಳ್ಬೇಕೋ ಗೊತ್ತಾಗಲಿಲ್ಲ‌ . ಅವರ ಆಗಮನಕ್ಕಾಗಿ‌ ಆದ ಖುಷಿಗೆ ಆನಂದ ಬಾಷ್ಪಗಳೇ ಬಂದವು.

ಯಾವುದೇ ಆಹ್ವಾನ ಇಲ್ಲದೆ ಅವರು ನಮಗೆ ಹರಿಸಲು ಬಂದಿದ್ದರು. ಇಡೀ ನಮ್ಮ ವ್ಯವಸ್ಥೆ ನೋಡಿ ತುಂಬಾನೆ ಖುಷಿ ಪಟ್ಟರು.ಕೊನೆಗೆ ಕೇಕ್ ಕತ್ತರಿಸಿ, ಒಂದೆರೆಡು ಮಾತನಾಡಿದರು.’ ಸಹೋದರಂತಿರುವ ನಿಮಗೆ ದೇವರು ಒಳ್ಳೆಯದನ್ನು ಮಾಡಲಿ, ನಿಮ್ಮ ಕಚೇರಿ, ಸ್ಟುಡಿಯೋ ವ್ಯವಸ್ಥೆ ನೋಡಿ‌ ನಿಜಕ್ಕೂ ಖುಷಿ ಎನಿಸಿತು. ಸಾಧನೆಗೆ ಬೆಲೆ ಇದೆ.ಇಂದಲ್ಲ ನಾಳೆ, ನಿಮಗೆ ಗೆಲುವು ಸಿಗುತ್ತದೆ. ಶುಭವಾಗಲಿ ಅಂತ ಹರಸಿದರು. ಸಿನಿ‌ಲಹರಿ ಗೆ ಇದಕ್ಕಿಂತ ಇನ್ನೇನು ಬೇಕು. ಉದ್ಯಮದ ಜತೆಗೆ ಆಚೆಗೂ ಇರುವ ಸಾಧಕರು ನಮ್ಮನ್ನು ಮನದುಂಬಿ ಹರಿಸುತ್ತಿದ್ದಾರಲ್ಲ, ಅನ್ನೋದು ನಮ್ಮ ದೊಡ್ಡ ಶಕ್ತಿ.

Related Posts

error: Content is protected !!