ವೈರಲ್ ಆಯ್ತು ಬೇಬಿ ಬಾಹುಬಲಿ ಫೋಟೋ !

ಈ ತನ್ವಿಯೇ ನೋಡಿ ಅಲ್ಲಿ ಕಂಡ ಮಹೇಂದ್ರ ಬಾಹುಬಲಿ

ರಾಜ್‌ಮೌಳಿ ನಿರ್ದೇಶನದ ‘ಬಾಹುಬಲಿ’ (2015) ಭಾರತೀಯ ಚಿತ್ರರಂಗದಲ್ಲೇ ದಾಖಲೆ ಬರೆದ ಸಿನಿಮಾ. ಪ್ರಭಾಸ್‌, ರಾಣಾ ದಗ್ಗುಬಾಟಿ, ರಮ್ಯಕೃಷ್ಣ, ಅನುಷ್ಕಾ ಶೆಟ್ಟಿ, ತಮನ್ನಾ ಬಾಟಿಯಾ ಸೇರಿದಂತೆ ಈ ಚಿತ್ರಕ್ಕೆ ಬಣ್ಣ ಹಚ್ಚಿದ ಸಣ್ಣ ಪುಟ್ಟ ಕಲಾವಿದರೂ ಕೂಡ ಮನೆ ಮಾತಾದರು. ಕೆಲವರಂತೂ ರಾತ್ರೋ ರಾತ್ರಿ ಸ್ಟಾರ್ ಆದರು. ಮೊದಲೇ ಸ್ಟಾರ್ ಆಗಿದ್ದ ಪ್ರಭಾಸ್ ಸೂಪರ್ ಸ್ಟಾರ್ ಆಗಿದ್ದು ನಿಮಗೂ ಗೊತ್ತು. ಇದರಾಚೆ ಇಲ್ಲಿ ಇನ್ನೊಂದು ಪಾತ್ರವೂ ಕೂಡ ಬಾಹು ಬಲಿ ಸಿನಿಮಾ ನೋಡಿದವರಿಗೆಲ್ಲ ನಿದ್ದೆ ಗೆಡಿಸಿತ್ತು. ಅದೇ ಬೇಬಿ ಬಾಹುಬಲಿ ! ಆ ಪಾತ್ರದಲ್ಲಿ ಕಾಣಸಿಕೊಂಡಿದ್ದು ಹುಡುಗ ಅಲ್ಲ, ಬೇಬಿ ತನ್ವಿ. ಆ ಪುಟಾಣಿಗೆ ಈಗ ಏಳು ವರ್ಷ. ಆಕೆಯ ಫೋಟೋ ಈಗ ಸೋಷಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮಹಿಸ್ಮತಿ ಸಂಸ್ಥಾನದ ಆಳ್ವಿಕೆಯ ಕಾಲ. ಶಿವಗಾಮಿ ( ನಟಿ ರಮ್ಯ ಕೃಷ್ಣ) ದುಷ್ಟ ಸೈನಿಕರಿಂದ ತಪ್ಪಿಸಿಕೊಂಡು ಹೋಗುವ ಸಂದರ್ಭ. ತನ್ನ ಪುತ್ರ ಮಹೇಂದ್ರ ಬಾಹುಬಲಿ ಸಮೇತ ನದಿ ದಾಟುತ್ತಿದ್ದಾಗ, ನದಿಯ ಪ್ರವಾಹ ಹೆಚ್ಚಾಗಿ ಮುಳುಗಿ ಹೋಗುವಾಗ, ತನ್ನ ಪುತ್ರನನ್ನು ಒಂದು ಕೈಯಲ್ಲಿ ಎತ್ತಿ ಹಿಡಿದು ರಕ್ಷಿಸುವಂತೆ ಶಿವನನ್ನು ಕೋರುತ್ತಾಳೆ. ಕೊನೆಗೆ ಆ ಮಗು ನೀರಿನಲ್ಲಿ ತೇಲಿ ಹೋಗಿ, ಬದುಕುಳಿಯುವ ಕತೆ ಸಿನಿಮಾ ನೋಡಿದವರಿಗೆಲ್ಲ ಗೊತ್ತು. ಉಳಿದಂತೆ ಇಲ್ಲಿನ ಇಂಟರೆಸ್ಟಿಂಗ್ ಸಂಗತಿ ಏನಂದ್ರೆ, ಶಿವಗಾಮಿ ಅಂದ್ರೆ ರಮ್ಯ ಕೃಷ್ಣ ಕೈಯಲ್ಲಿದ್ದ ಮಗು ಯಾರು ಅಂತ. ಮಗುವೇ ತನ್ವಿ.

ಸಿನಿಮಾ ಬಂದ ಕಾಲಕ್ಕೆ ಈ ತನ್ವಿ ಇನ್ನು ಪುಟಾಣಿ. ಈಗ ಆಕೆಗೆ ಏಳು ವರ್ಷ. ಪೋಷಕರೊಂದಿಗೆ ತೆಗೆಸಿಕೊಂಡ ಫೋಟೋಗಳು ಸೋಷಲ್ ಮೀಡಿಯಾಕ್ಕೆ ಬರುತ್ತಿದ್ದಂತೆ ವೈರಲ್ ಆಗಿವೆ. ತನ್ವಿ ಈಗ ಎಲ್ಲರ ಗಮನ ಸೆಳೆಯುತ್ತಿದ್ದಾಳೆ. ಕಾರಣ ಬಾಹುಬಲಿ ಚಿತ್ರದಲ್ಲಿದ್ದ ಅದೊಂದು ರೋಚಕ ದೃಶ್ಯ. ಕೆಲವೊಮ್ಮೆ ಕೆಲವರಿಗೆ ಮಹತ್ವದ ತಿರುವುಗಳಉ ಅರಿವಿಲ್ಲದೆ ಬಂದು ಹೋಗುತ್ತವೆ ಎನ್ನುವ ಮಾತು ತನ್ವಿ ವಿಚಾರಕ್ಕೂ ಅನ್ವಯ. ತನ್ವಿ ಈ ಬಣ್ಣದ ಜಗತ್ತಿನ ಬಗ್ಗೆ ತಿಳಿದುಕೊಳ್ಳುವಷ್ಟು ದೊಡ್ಡವಳಾಗುವ ಮುನ್ನವೇ ಸ್ಟಾರ್.

Related Posts

error: Content is protected !!