‘ಪೊಗರು ‘ಅಂದ್ರೆ ಪಕ್ಕಾ ಎಂಟರ್ ಟೈನರ್ ಮೂವೀ- ನಟಿ ರಶ್ಮಿಕಾ ಮಂದಣ್ಣ ಇಷ್ಟೊಂದು ಭರವಸೆ ಕೊಟ್ಟಿದ್ದೇಕೆ….?

ಅಲ್ಲಿ ಸ್ಟುಡೆಂಟ್ – ಇಲ್ಲಿ ಟೀಚರ್, ಬಡ್ತಿ ಪಡೆದ್ರು ಕಿರಿಕ್ ಹುಡುಗಿ ಸಾನ್ವಿ

ಪೊಗರು ಅಂದ್ರೆ ಕ್ಲಾಸ್, ಪೊಗರು ಅಂದ್ರೆ ಮಾಸ್, ಪೊಗರು ಅಂದ್ರೆ  ರೋಮ್ಯಾಂಟಿಕ್, ಪೊಗರು ಅಂದ್ರೆ ಸೆಂಟಿಮೆಂಟ್, ಪೊಗರು ಅಂದ್ರೆ ಆಕ್ಷನ್, ಪೊಗರು ಅಂದ್ರೆ ಕಾಮಿಡಿ, ಪೊಗರು ಅಂದ್ರೆ ಥ್ರಿಲ್, ಟೋಟಲಿ ‘ಪೊಗರು ‘ ಅಂದ್ರೆ ಪಕ್ಕಾ ಎಂಟರ್ ಟೈನರ್ ಮೂವೀ…

– ಚಿತ್ರದ ನಾಯಕಿ, ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ‘ಪೊಗರು’ ಚಿತ್ರದ ಬಗ್ಗೆ ಮೂಡಿಸಿದ ಕುತೂಹಲ ಇದು‌.

ರಶ್ಮಿಕಾ ನಾಯಕಿಯಾಗಿ ನಟಿಸಿರುವ ಈ ಚಿತ್ರ ಫೆ.19 ಕ್ಕೆ ರಿಲೀಸ್ ಆಗುತ್ತಿದೆ. ಇದರ ಪ್ರಚಾರಕ್ಕೆ ಬರುವ ವಿಚಾರದಲ್ಲಿ ಕೇಳಿ ಬಂದ ಕೆಲವು ಕಾಂಟ್ರೋವರ್ಸಿಗಳ ನಡುವೆಯೇ ರಶ್ಮಿಕಾ ಮಂದಣ್ಣ ಈಗ ‘ಪೊಗರು ‘ಚಿತ್ರದ ಪ್ರ ಮೋಷನ್ ನಲ್ಲಿ  ಬ್ಯುಸಿ ಆಗಿದ್ದಾರೆ. ಅದೇ ವೇಳೆ’  ಸಿನಿ ಲಹರಿ’  ಗೂ ನೀಡಿದ  ವಿಶೇಷ ಸಂದರ್ಶನದಲ್ಲಿ ರಶ್ಮಿಕಾ ಅನೇಕ ವಿಚಾರಗಳ ಕುರಿತು ಮನಬಿಚ್ಚಿ ಮಾತನಾಡಿದ್ದು ವಿಶೇಷ.

1. ಒಂದಷ್ಟು ಗ್ಯಾಪ್ ಜತೆಗೆ ಲಾಕ್ ಡೌನ್ ನಂತರ ಪ್ರೇಕ್ಷಕರ ಎದುರು ಬರುತ್ತಿದ್ದೀರಿ, ಹೇಗನ್ನಿಸುತ್ತೆ ಈ ಎಂಟ್ರಿ ?

ನಂಗೆ ಇದು ಗ್ಯಾಪ್ ಅಂತೇನಿಲ್ಲ. ‘ಯಜಮಾನ’ ಚಿತ್ರ ರಿಲೀಸ್ ಮುಂಚೆಯೇ ಒಪ್ಪಿಕೊಂಡ ಸಿನಿಮಾ ಇದು. ಹೆಚ್ಚು- ಕಡಿಮೆ ಒಂದು- ಒಂದೂವರೆ ವರ್ಷ ಬರೀ ಚಿತ್ರೀಕರಣವೇ ನಡೆದಿದೆ. ಅಲ್ಲಿ‌ಂದ ಈಗ ರಿಲೀಸ್ ಆಗುತ್ತಿದೆ.  ಬದಲಿಗೆ ಲಾಕ್ ಡೌನ್ ನಂತರ , ಜತೆಗೆ ಟಾಕೀಸ್ ಗಳಲ್ಲಿ ಹಂಡ್ರೆಡ್ ಪರ್ಸೆಂಟ್ ಸೀಟು ಭರ್ತಿಗೆ ಅವಕಾಶ ಸಿಕ್ಕ ಸಂದರ್ಭದಲ್ಲಿ ನಮ್ ಸಿನಿಮಾ ಥಿಯೇಟರ್ ಗೆ ಬರ್ತಿದೆ. ಅದು ಖುಷಿ ತಂದಿದೆ. ಜತೆಗೆ ಪ್ರೇಕ್ಷಕರು ಎಷ್ಟರ ಮಟ್ಟಿಗೆ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡ್ತಾರೋ ಎನ್ನುವ ಆತಂಕವೂ ಇದೆ.

2  ಮೊದಲ ಸಿನಿಮಾದಲ್ಲಿ ಸ್ಟೂಡೆಂಟ್ ಆಗಿದ್ದವರು ಈಗಿಲ್ಲಿ ನೀವು ಟೀಚರ್ ಆಗಿ ಕಾಣಿಸಿಕೊಂಡಿದ್ದೀರಂತೆ…..

ಹೌದು, ಇದೊಂಥರ ಪ್ರಮೋಷನ್.  ಕ್ಯಾರೆಕ್ಟರ್ ವಿಚಾರದಲ್ಲಿ ತುಂಬಾ ಡಿಫೆರೆಂಟ್ ಇಲ್ಲಿದೆ. ನಾನಿಲ್ಲಿ ಟೀಚರ್. ತುಂಬಾ ಇಂಟ್ರೋವರ್ಟ್. ಹೀರೋ ಮತ್ತು ನನ್ನ. ನಡುವೆ ಬರೀ ಜಗಳ. ಒಂಥರ ಟಾಮ್ ಅಂಡ್ ಜರಿ ನೋಡಿದ ಹಾಗೆ. ಆಕ್ಟಿಂಗ್ ಅಂತ ಬಂದಾಗ ಸಾಕಷ್ಟು ಸ್ಟೇಸ್ ಸಿಕ್ಕಿದೆ. ಹೀರೋ ಪಾತ್ರಕ್ಕಿರುವ ಮಹತ್ವ ಆ ಪಾತ್ರಕ್ಕೂ ಇದೆ. ಕಿರಿಕ್ ಪಾರ್ಟಿ, ಅಂಜನಿಪುತ್ರ, ಚಮಕ್ ಹಾಗೂ ಯಜಮಾನ  ಚಿತ್ರಗಳಲ್ಲಿದ್ದ  ನನ್ನ ಪಾತ್ರಗಳಿಗಿಂತ ತುಂಬಾ ಡಿಫೆರೆಂಟ್ ಇದು. ಅದು ಹೇಗೆ ಅನ್ನೋದು ಸಿನಿಮಾ ನೋಡಿದಾಗ ಗೊತ್ತಾಗಲಿದೆ.

3   ಚಿತ್ರದ ಹೀರೋ ಧ್ರುವ ಸರ್ಜಾ ಮತ್ತು ನಿಮ್ಮ ಕಾಂಬಿನೇಷನ್ ಬಗ್ಗೆ ಏನ್ ಹೇಳ್ತೀರಾ?

ನಾನ್ ಅವರನ್ನ ಫಸ್ಟ್  ಟೈಮ್ ಮೀಟ್ ಮಾಡಿದ್ದು ಹೈದ್ರಾಬಾದ್ ನ ರಾಮೋಜಿ ಫಿಲ್ಮ್ ಸಿಟಿನಲ್ಲಿ. ಸಿನಿಮಾ ಶೂಟಿಂಗ್ ಸಮಯದಲ್ಲಿ. ಅವತ್ತು ಅವರ ಗೆಟಪ್ ಫುಲ್ ಚೇಂಜ್ ಇತ್ತು. ತುಂಬಾ ಸಿಂಪಲ್, ಜತೆಗೆ ಸಣ್ಣ ಆಗಿದ್ದರು. ತುಂಬಾ ಫ್ರೆಂಡ್ಲಿ  ಸ್ವಭಾವ ಅವರದು. ಹಾಗಿದ್ದಾಗ ನಾವು ಆ್ಯಕ್ಟ್ ಮಾಡೋದಿಕ್ಕೂ ಸುಲಭ ಆಗುತ್ತೆ.  ಅಂದ್ರೆ ಹೊಸಬರು ಅಂತ ಮುಜುಗರ ಇರೋದಿಲ್ಲ.

4 ‘ಪೊಗರು’ ಅಂದಾಕ್ಷಣ ಈಗ ಖರಾಬು ಹಾಡಿನದ್ದೇ ಸೌಂಡು, ಈ ಹಾಡಿನ ಚಿತ್ರೀಕರಣದ ಅನುಭವ ಜತೆಗೀಗ ಅದಕ್ಕೆ ಸಿಕ್ಕ ರೆಸ್ಪಾನ್ಸ್ ಬಗ್ಗೆ ಏನ್ ಹೇಳ್ತೀರಾ?

ಇದೊಂದು ಥ್ರಿಲ್ ಸಾಂಗ್. ಸಾಂಗ್ ಕೇಳಿದ ಸಂದರ್ಭದಲ್ಲೇ ಫುಲ್ ಖುಷಿ ಆಗಿದ್ದೆ. ಚಂದನ್ ಸರ್ ಅವರ ಬೀಟ್ಸ್ ಸೌಂಡ್ ಸೂಪರ್ ಆಗಿದೆ. ಚಿತ್ರೀಕರಣ ಅಂತ ಬಂದಾಗ ಇದೇನು ನಂಗೆ ಸಪ್ರೇಟ್ ಸಾಂಗ್ ಶೂಟಿಂಗ್ ಅಂತ ಎನಿಸಲಿಲ್ಲ,ಒಂದು ಸೀನ್ ಅಥವಾ ಮಾಂಟೇಜ್ ತರನೇ, ಶೂಟ್ ಮಾಡಿದ ಅನುಭವ ಆಯಿತು. ದೊಡ್ಡ ಸೆಟ್, ನೂರಾರು ಜೂನಿಯರ್ ಆರ್ಟಿಸ್ಟ್ , ಸುಮ್ನೆ ಹೆಜ್ಜೆ ಹಾಕುವಷ್ಟು ಥ್ರಿಲ್ ನೀಡುತ್ತಿದ್ದ ಚಂದನ್ ಸರ್ ಬೀಟ್ಸ್… ಮಜಾ ಮಜವಾಗಿ ಶೂಟ್ ಮುಗಿಸಿದ್ವಿ. ಈಗ ಅದುದೊಡ್ಡ ಮಟ್ಟಕ್ಕೆ ಸೌಂಡ್ ಮಾಡಿದೆ. ನಾನು ಜಿಮ್ ಹೋದ್ರೂ ಅದೇ ಸಾಂಗ್ ಕೇಳುತ್ತಿರುತ್ತೆ. ಮೇಡಂ… ನ್ಯೂ ಸಾಂಗ್ ಅಂತ ಅಲ್ಲಿದ್ದವರು ಹೇಳ್ತಾರೆ. ಇದೊಂಥರ ಥ್ರಿಲ್.

5  ಈ ಸಾಂಗ್ ಒಂದಷ್ಟು ಕಾಂಟ್ರೋವರ್ಸಿ ಕೂಡ ಆಯ್ತ, ನಾಯಕಿ ಯನ್ನು ಕೆಟ್ಟದಾಗಿ ತೋರಿಸಲಾಗಿದೆ ಎನ್ನುವ ಆರೋಪ ಕೂಡ ಬಂತು….

ನಾನು  ಆ ಬಗ್ಗೆ ಏನನ್ನು ಹೇಳಲಾರೆ. ಯಾಕಂದ್ರೆ ಅದೆಲ್ಲ ನಂಗೆ ಗೊತ್ತಿಲ್ಲ. ಒಂದು ಪಾತ್ರಕ್ಕೆಏನು ಬೇಕಿತ್ತೋ ಅಷ್ಟುಮಾತ್ರವೇ ಅಲ್ಲಿ ಚಿತ್ರೀಕರಿಸಲಾಗಿದೆ‌.

6 ನಿರ್ದೇಶಕ ನಂದ್ ಕಿಶೋರ್ ಅವರ ಕೆಲಸ ಹೇಗನಿಸಿತು‌‌‌….

ಅಯ್ಯೋ, ಅಷ್ಟು ಅನುಭವಿಗಳ ಕೆಲಸದ ಬಗ್ಗೆ‌ ನಾನೇನು ಕಾಮೆಂಟ್ ಮಾಡಲಿ? ಅವರಿಂದ ಸಾಕಷ್ಟು ಕಲಿತಿದ್ದೇನೆ. ಬೇಕಾದ್ರೆ ಅವರ ಜತೆಗೆ ನೂರು ಸಿನಿಮಾ ಮಾಡಬಲ್ಲೆ. ಅಷ್ಟು ಡೆಡಿಕೇಟೆಡ್ ಡೈರೆಕ್ಟರ್ ಅವರು‌. ಪ್ರತಿ ಸೀನ್ ಹೀಗೆಯೇ  ಬರಬೇಕು ಅಂತ ಪಟ್ಟು ಹಿಡಿದು ಶೂಟ್ ಮಾಡಿಸುತ್ತಿದ್ದರು‌. ಅಂದ್ರೆ ಒಬ್ಬ ಡೈರೆಕ್ಟರ್ ಗೆ ತನ್ನ ಸಿನಿಮಾದ ಬಗ್ಗೆ ಇರುವ ಕಾಳಜಿ ಅದು. ಆ ಬದ್ಧತೆ ನೋಡಿ ನಂಗೆ ಖುಷಿ ಆಯ್ತ. ಪ್ರತಿ ಹಂತದಲ್ಲೂ ನಂಗೆ ಹಾಗಲ್ಲ, ಹೀಗೆ ಅಂತ ಹೇಳಿಕೊಟ್ಟಿದ್ದಾರೆ. ಅಂತ ನಿರ್ದೇಶಕರು ಇದ್ದಾಗಲೇ ಒಂದು ಸಿನಿಮಾ ಚೆನ್ನಾಗಿ ಮೂಡಿ ಬರಲು ಸಾಧ್ಯ. ಅದಕ್ಕೆ ಬೆಸ್ಟ್ ಎಕ್ಸಾಂಪಲ್ ‘ ಪೊಗರು’

7 ‘ಪೊಗರು ‘ ಸಿನಿಮಾದ ಮೇಕಿಂಗ್ ಬಗ್ಗೆ ಹೇಳೋದಾದ್ರೆ….

ಪ್ರಡ್ಯೂಸರ್ ರಿಯಲಿ ಗ್ರೇಟ್. ಯಾಕಂದ್ರೆ  ಅದ್ದೂರಿ ವೆಚ್ಚದ ಸಿನಿಮಾವೊಂದು ಎರಡ್ಮೂರು ವರ್ಷ ಬರೀ ಮೇಕಿಂಗ್ ನಲ್ಲಿಯೇ ಇರೋದು ಅಂದ್ರೆ ತಮಾಷೆ ಅಲ್ಲ, ಅದಕ್ಕೆ‌ ತುಂಬಾ ತಾಳ್ಮೆ, ಶ್ರಮ ಬೇಕು. ಅದು ‘ಪೊಗರು’ ನಿರ್ಮಾಪಕ ಗಂಗಾಧರ್  ಅವರಲ್ಲಿದೆ. ಹಾಗಾಗಿಯೇ ಈ ಸಿನಿಮಾ ಅದ್ದೂರಿಯಾಗಿ ಮೂಡಿ ಬಂದಿದೆ. ಯಾವುದೇ ಭಾಷೆಯ ಸಿನಿಮಾಕ್ಕೂ ಕಮ್ಮಿ ಇಲ್ಲದ ಹಾಗೆ ರಿಚ್ ಆಗಿದೆ ಈ ಸಿನಿಮಾ. ಇದಕ್ಕೆ ಬರೀ‌ಸ್ಟಾರ್ ಗಳು ಮಾತ್ರವಲ್ಲ ಎಲ್ಲಾ ಸಿಬ್ಬಂದಿ ಕೂಡ ಕಾರಣ.

8  ನಿಮ್ಮ ದೃಷ್ಟಿಯಲ್ಲಿ ‘ಪೊಗರು’ ಅಂದ್ರೇನು? ಅದರ ಹೈಲಟ್ಸ್ ಏನು?

ಪೊಗರು ಅಂದ್ರೆ ಕ್ಲಾಸ್, ಪೊಗರು ಅಂದ್ರೆ ಮಾಸ್, ಪೊಗರು ಅಂದ್ರೆ  ರೋಮ್ಯಾಂಟಿಕ್, ಪೊಗರು ಅಂದ್ರೆ ಸೆಂಟಿಮೆಂಟ್, ಪೊಗರು ಅಂದ್ರೆ ಆಕ್ಷನ್, ಪೊಗರು ಅಂದ್ರೆ ಕಾಮಿಡಿ, ಪೊಗರು ಅಂದ್ರೆ ಥ್ರಿಲ್, ಟೋಟಲಿ ‘ಪೊಗರು ‘ ಅಂದ್ರೆ ಪಕ್ಕಾ ಎಂಟರ್ ಟೈನರ್  ಮೂವೀ.

  9 ಪೊಗರು ಸಿನಿಮಾ ಕುರಿತು ನಿಮ್ಮ ಫ್ಯಾನ್ಸ್ ಹಾಗೂ ಆಡಿಯನ್ಸ್ ಗೆ ಏನ್ ಹೇಳ್ತೀರಾ?

ಪೊಗರು ತುಂಬಾ ಪ್ಯಾಷನ್ ಇಟ್ಕೊಂಡ್ ಮಾಡಿದ ಸಿನಿಮಾ. ಇದರ ಹಿಂದೆ ಸಾಕಷ್ಟು ಜನರ ಪರಿಶ್ರಮ ಇದೆ. ಹಾಗೆಯೇ ಹಲವರ ಬದುಕು ಇದೆ‌ . ಹತ್ತಾರು ಕನಸುಗಳಿವೆ. ಒಂದೊಳ್ಳೆಯ ತಂಡ ಕಷ್ಟಪಟ್ಟು ಮಾಡಿದ ಸಿನಿಮಾ ಆಗಿರೋದ್ರಿಂದ ನೋಡುಗರಿಗೆ ಎಲ್ಲೋಬೋರ್ ಆಗುವುದಕ್ಕೆ ಸಾಧ್ಯವೇ ಇಲ್ಲ. ಪಕ್ಕಾ ಮನರಂಜ‌ನೆ ಸಿನಿಮಾ ದಲ್ಲಿದೆ.  ಎಲ್ಲರೂ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ, ಬರುವಾಗ ಒಂದಷ್ಟು ಎಚ್ಚರಿಕೆ ಇರಲಿ.ಮಾಸ್ಕ್ ಧರಿಸಿ‌ ಬನ್ನಿ. ಸ್ಯಾನಿಟೈಸ್ಡ್ ಮಾಡೋದನ್ನು ಮರಿಬೇಡಿ.

Related Posts

error: Content is protected !!